ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರಿಮಳೆಯ ನಡುವೆ ಐಟಿಮೇಳದ ಸಮಾರೋಪ

By Staff
|
Google Oneindia Kannada News

ಬೆಂಗಳೂರು : ಕಾವೇರಿ ವಿವಾದ ಹಾಗೂ ಮಳೆಯನ್ನು ಬಗಲಿಗೆ ಕಟ್ಟಿಕೊಂಡೇ ಪ್ರಾರಂಭವಾದ ಏಷ್ಯಾದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಮೇಳ ಬೆಂಗಳೂರು.ಐಟಿಕಾಂ-2002 ಶುಕ್ರವಾರ (ನ.01) ಮುಕ್ತಾಯವಾಯಿತು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಐಟಿ ಮೇಳಕ್ಕೆ ಜನತೆಯ ಪ್ರತಿಕ್ರಿಯೆ ನಿರೀಕ್ಷಿಸಿದ ಮಟ್ಟಕ್ಕಿರಲಿಲ್ಲ . ಕಳೆದ ಬಾರಿಯ ಮೇಳಕ್ಕೆ 1.8 ಲಕ್ಷ ಮಂದಿ ಭೇಟಿ ಕೊಟ್ಟಿದ್ದರೆ, ಈ ಬಾರಿ ಐಟಿ.ಕಾಂ ಮೇಳಕ್ಕೆ ಭೇಟಿ ಕೊಟ್ಟವರ ಸಂಖ್ಯೆ ಒಂದೂವರೆ ಲಕ್ಷ ಮಾತ್ರ.

ಐಟಿ ಮೇಳದ ಕೊನೆಯ ದಿನ ಕೂಡ ಬೆಂಗಳೂರು ಐಟಿ.ಕಾಂ ಮೇಳ ನಡೆಯುತ್ತಿರುವ ಅರಮನೆ ಆವರಣದಲ್ಲಿ ಅಂಥ ಉತ್ಸಾಹವೇನೂ ಉಕ್ಕಲಿಲ್ಲ . ರಾಜ್ಯೋತ್ಸವದ ದಿನವಾದ ಶುಕ್ರವಾರ ರಜೆಯಿದ್ದರೂ, ದಿನವಿಡೀ ಸುರಿದ ಮಳೆ ಉತ್ಸಾಹಿಗಳನ್ನು ಮನೆಯಲ್ಲೇ ಕಟ್ಟಿಹಾಕಿತು.

ಏಪ್ರಿಲ್‌ನಲ್ಲಿ ಬಯೋಡಾಟ್‌ಕಾಂ ಮೇಳ
ಐಟಿ.ಕಾಂ ಮೇಳದ ಯಶಸ್ಸಿನಿಂದ ಉತ್ತೇಜಿತವಾಗಿರುವ ರಾಜ್ಯ ಸರ್ಕಾರ 2003 ನೇ ಇಸವಿಯಲ್ಲಿ ಬಯೋ.ಕಾಂ ಮೇಳ ನಡೆಸಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಡಿ.ಬಿ.ಇನಾಂದಾರ್‌ ಹೇಳಿದರು. ಅವರು ಬೆಂಗಳೂರು ಐಟಿ.ಕಾಂ ಮೇಳದ ಫಲಶ್ರುತಿಯನ್ನು ಶುಕ್ರವಾರ (ನ.01) ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದರು.

ಈ ಸಲದ ಬೆಂಗಳೂರು ಐಟಿ.ಕಾಂ ಮೇಳ 50 ಸಾವಿರ ಉದ್ಯಮಿಗಳನ್ನು ಆಕರ್ಷಿಸಿದೆ. ಸುಮಾರು 300 ವಿದೇಶಿ ಉದ್ಯಮಿಗಳು ಮೇಳಕ್ಕೆ ಆಗಮಿಸಿದ್ದರು. ಮೇಳದ ಪ್ರಾರಂಭದ ದಿನ ರಾಷ್ಟ್ರಪತಿ ಅಬ್ದುಲ್‌ ಕಲಮ್‌ ಅವರು 600 ಮಕ್ಕಳಿಗೆ ಇಂಟರ್ನೆಟ್‌ ಪಾಠ ಮಾಡಿದ್ದು ಒಂದು ಐತಿಹಾಸಿಕ ದಾಖಲೆ ಎಂದು ಇನಾಂದಾರ್‌ ಬಣ್ಣಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X