ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

150 ರು. ಡಿ.ಡಿ. ಕಳಿಸಿ, ಅಯ್ಯಪ್ಪನ ಪ್ರಸಾದ ಪಡೆಯಿರಿ

By Staff
|
Google Oneindia Kannada News

ಪಾಲಕ್ಕಡ್‌ : ಶಬರಿಮಲೆಗೆ ಹೋಗದೆಯೂ ಅಯ್ಯಪ್ಪ ಸ್ವಾಮಿಯ ಪ್ರಸಾದ ಸವಿಯುವ ಅವಕಾಶವನ್ನು ಪೋಸ್ಟಲ್‌ ಇಲಾಖೆ ಮಾಡಿಕೊಡುತ್ತಿದೆ. 150 ರುಪಾಯಿ ಡಿ.ಡಿ. ಕಲಿಸಿದರೆ ಪ್ರಸಾದದ ಪಾರ್ಸಲ್‌ ನಿಮ್ಮ ಮನೆ ಬಾಗಿಲಿಗೆ ಬಂದು ತಲುಪುತ್ತದೆ.

ತಿರುವಾಂಕೂರು ದೇವಳ ಮಂಡಳಿ ಹಾಗೂ ಪೋಸ್ಟಲ್‌ ಇಲಾಖೆ ಶಬರಿಮಲೆಯ ಶಾಸ್ತ ದೇವರ ಪ್ರಸಾದ ವಿನಿಯೋಗ ಕುರಿತಂತೆ ಒಂದು ಒಪ್ಪಂದಕ್ಕೆ ಬಂದಿವೆ. ಮಂಡಲಂ ಸೀಸನ್ನಿನಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಈ ಒಡಂಬಡಿಕೆ ಎಂದು ಚೀಫ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಕೆ.ಎನ್‌.ಕೆ.ಕಾರ್ತಿಕೇಯನ್‌ ಹೇಳಿದರು.

ಪ್ರಸಾದದ ಪಾರ್ಸಲ್‌ನಲ್ಲಿ ಅರವಣ, ಅಪ್ಪಂ, ಪೆಪ್ಪರ್‌, ಕುಂಕುಮ್‌ ಇತ್ಯಾದಿಗಳು ಇರುತ್ತವೆ ಎಂದು ದೇವಳದ ಮಂಡಳಿ ಹೇಳಿದೆ. ಡಿಸೆಂಬರ್‌ 21 ನೇ ತಾರೀಕಿನೊಳಗೆ ಬರುವ ಡಿ.ಡಿ.ಗಳಿಗೆ ಮಾತ್ರ ಪ್ರಸಾದದ ಪಾರ್ಸಲ್‌ ಕಳಿಸಲಾಗುವುದು. ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳು ನಾಡು ರಾಜ್ಯದ ಭಕ್ತರಿಗೆ ಮಾತ್ರ ಈ ಅವಕಾಶ.

ಡಿ.ಡಿ. ಕಳಿಸಬೇಕಾದ ವಿಳಾಸ ಪಡೆದು, ಹೆಚ್ಚಿನ ಮಾಹಿತಿಗಾಗಿ ಆಯಾ ರಾಜ್ಯಗಳ ಹತ್ತಿರದ ಪೋಸ್ಟಾಫೀಸನ್ನು ಸಂಪರ್ಕಿಸಿ.(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X