• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದುವರಿದ ಕರ್ಫ್ಯೂ, ಮಂಡ್ಯದಲ್ಲಿ ಸ್ಮಶಾನ ಮೌನ

By Staff
|

ಮಂಡ್ಯ/ಮೈಸೂರು : ಮಂಡ್ಯ ನಗರದಲ್ಲಿ ಕರ್ಫ್ಯೂ ಗುರುವಾರವೂ ಮುಂದುವರಿದಿದ್ದು , ಇಡೀ ನಗರದಲ್ಲಿ ಸ್ಮಶಾನ ಮೌನ ನೆಲೆಸಿದೆ.

ಮಂಡ್ಯ ನಗರದ ರಸ್ತೆಗಳಲ್ಲಿ ಪೊಲೀಸರ ಸಾಮ್ರಾಜ್ಯ ಸ್ಥಾಪನೆಯಾಗಿದ್ದು ಜನತೆಯಲ್ಲಿ ಭೀತಿಯ ವಾತಾವರಣ ತಲೆದೋರಿದೆ. ಮಂಡ್ಯದ ಕೆಲವೆಡೆಗಳಲ್ಲಿ ಪತ್ರಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ ಘಟನೆಗಳೂ ವರದಿಯಾಗಿವೆ.

ಮಂಡ್ಯ, ಮದ್ದೂರು, ಪಾಂಡವಪುರ, ಕೆ.ಎಂ.ದೊಡ್ಡಿ ಮುಂತಾದೆಡೆಗಳಲ್ಲಿ ಕರ್ಫ್ಯೂ ಹೇರಿರುವುದರಿಂದ ಕಾವೇರಿ ಚಳವಳಿ ಹಳ್ಳಿಗಳಲ್ಲಿ ತೀವ್ರವಾಗುತ್ತಿದ್ದು , ಗುರುವಾರ ಅನೇಕ ಗ್ರಾಮಗಳಲ್ಲಿ ರಸ್ತೆ ತಡೆ ಚಳವಳಿ ನಡೆಯಿತು. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಪ್ರತಿಕೃತಿ ದಹನ ನಡೆಸಿರುವ ಚಳವಳಿಕಾರರು, ತಮಿಳು ಫಲಕಗಳಿಗೆ ಡಾಂಬರು ಬಳಿಯುವ ಮೂಲಕ ರೋಷ ವ್ಯಕ್ತಪಡಿಸಿದರು.

ಶಾಸಕರ ಮನೆ ಮೇಲೆ ದಾಳಿಗೆ ಯತ್ನ

ಶಾಸಕ ರಾಮದಾಸ್‌ ಅವರ ಮನೆ ಮೇಲೆ ಕೆಲವು ವ್ಯಕ್ತಿಗಳು ಗುರುವಾರ ದಾಳಿ ನಡೆಸಲು ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಪಾಂಡವಪುರ ಶಾಸಕ ಕೆಂಪೇಗೌಡ ಅವರ ಮನೆಯ ಮೇಲೆ ನಡೆದಂಥದ್ದೇ ದಾಳಿಯನ್ನು ಶಾಸಕರ ಮನೆ ಮೇಲೆ ನಡೆಸಲು ಕೆಲವು ಮಂದಿ ಯತ್ನಿಸಿದಾಗ, ಮಧ್ಯ ಪ್ರವೇಶಿಸಿದ ಪೊಲೀಸರು ದಾಳಿಯನ್ನು ವಿಫಲಗೊಳಿಸಿದರು.

ಶಾಸಕರ ಮನೆ ಮೇಲೆ ದಾಳಿ ನಡೆಸಲು ಮುಂದಾದ ಆರೋಪದ ಮೇಲೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶದ ಎಲ್ಲ ಶಾಸಕರ ನಿವಾಸಗಳಿಗೂ ಸರ್ಕಾರ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಿದೆ.

ಮಂಡ್ಯದಲ್ಲಿ ರಾಜ್ಯೋತ್ಸವ ರದ್ದು

ಭುಗಿಲೆದ್ದಿರುವ ಕಾವೇರಿ ಚಳವಳಿ ಹಿನ್ನೆಲೆಯಲ್ಲಿ ಮಂಡ್ಯ ನಗರದಲ್ಲಿ ರಾಜ್ಯೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕನಿರಾಂ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X