• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖ್ಯಮಂತ್ರಿ ಕೃಷ್ಣರ ಕುರ್ಚಿಯಲ್ಲಿ ನಾನು ಕೂತಿದ್ದಿದ್ದರೆ..

By Staff
|

*ದಟ್‌ ಕನ್ನಡ ಬ್ಯೂರೋ

ವಿಧೇಯ ವಿದ್ಯಾರ್ಥಿಯ ಹಾಗೆ ಮುಖ್ಯಮಂತ್ರಿ ಎಸ್ಸೆಂ.ಎಂ.ಕೃಷ್ಣ ನ್ಯಾಯಾಲಯದಲ್ಲಿ ಬೇಷರತ್‌ ಕ್ಷಮೆ ಕೇಳಿದ್ದಾರೆ. ಕೋರ್ಟು ಕಣ್ಣಿನಲ್ಲಿ , ಕೇಂದ್ರ ಸರಕಾರ ಮತ್ತು ಕಾಂಗ್ರೆಸ್‌ ಹೈ ಕಮಾಂಡ್‌ ದೃಷ್ಟಿಯಲ್ಲಿ ಜಾಣ ಅನ್ನಿಸಿಕೊಂಡಿದ್ದಾರೆ.

ಆದರೆ ರಾಜ್ಯದಲ್ಲಿ ನಾಲ್ಕು ದಿಕ್ಕಿನಿಂದ ಬೈಗುಳದ ಸುರಿಮಳೆ. ರೈತರ ಮಾತು ಹಾಗಿರಲಿ. ರಾಜಕೀಯ ಪಕ್ಷಗಳೂ ಕೃಷ್ಣರ ನಿರ್ಧಾರವನ್ನು ಕಟುವಾಗಿ ಟೀಕಿಸುತ್ತಿವೆ. ನಾನೇನಾದ್ರೂ ಕಷ್ಣ ರ ಸ್ಥಾನದಲ್ಲಿದ್ದಿದ್ದರೆ ರೈತರ ಪಾಡು ಹೀಗಾಗಲಿಕ್ಕೆ ಬಿಡುತ್ತಿರಲಿಲ್ಲ ... ಅಂತ ಹೇಳುವ ಮೂಲಕ ಮತದಾರರಿಗೆ ತಾನು ಸುಭಗ... ಎಂದು ತೋರಿಸಿಕೊಳ್ಳಲು ಪೇಚಾಡುತ್ತಿವೆ. ಕೃಷ್ಣ ಸ್ಥಾನದಲ್ಲಿದ್ದಿದ್ದರೆ ಯಾರು ಯಾರು ಎಷ್ಟೆಷ್ಟು ಉದ್ಧಾರ ಕಾರ್ಯಗಳನ್ನು ಮಾಡುತ್ತಿದ್ದರು ಎನ್ನುವುದು ಪ್ರಜ್ಞಾವಂತ ಮತದಾರನಿಗೆ ತಿಳಿದೇ ಇದೆ.

ನಾನು ಮುಖ್ಯಮಂತ್ರಿ ಆಗಿದ್ದಿದ್ದರೆ...

ಶಾಲಾ ದಿನಗಳಲ್ಲಿ ಆಶು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ ಇಂಥದೊಂದು ಆಗಿದ್ದರೆ... ವಿಷಯದ ಬಗ್ಗೆ ಮಾತನಾಡಿಯೇ ಇರುತ್ತೀರಿ. ನಮ್ಮ ರಾಜಕಾರಣಿಗಳಿಗೂ ಈ ಆಗುವ ಚಟ ಅತ್ಯಂತ ಪ್ರೀತಿಪಾತ್ರವಾದುದು. ಕೆಳಗಿನ ನಾಯಕರನ್ನೇ ನೋಡಿ, ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದರೆ ಏನು ಮಾಡುತ್ತಿದ್ದರಂತೆ ಗೊತ್ತಾ :

ಅಂಬರೀಷ್‌

ಕಾಂಗ್ರೆಸ್‌ ಸಂಸದ, ಒಂದಾನೊಂದು ಕಾಲದ ಸಿನಿಮಾ ನಟ

ಮುಖ್ಯಮಂತ್ರಿ ಕೃಷ್ಣ ನೀರು ಬಿಡಬಾರದಿತ್ತು... ರೈತರ ಜೊತೆಗಿದ್ದೇನೆ ಅಂತ ಪಾದಯಾತ್ರೆಯನ್ನೂ ಮಾಡಿದ ಮುಖ್ಯಮಂತ್ರಿಗಳ ಎಲ್ಲ ಪ್ರಯತ್ನಗಳೂ ವ್ಯರ್ಥವಾದವು. ಇದು ರಾಜಕೀಯ ವಿಷಯ ಅಲ್ಲ. ನೀರು ಬಿಡದೇ ಇರುವ ತಮ್ಮ ನಿರ್ಧಾರಕ್ಕೇ ಮುಖ್ಯಮಂತ್ರಿಗಳು ಬದ್ಧರಾಗಿದ್ದಿದ್ದರೆ ಅದೊಂದು ಐತಿಹಾಸಿಕ ನಿರ್ಧಾರ ಎನ್ನಿಸಿಕೊಳ್ಳುತ್ತಿತ್ತು.

ಈ ಇಡೀ ಪ್ರಕರಣದಲ್ಲಿ ನನ್ನ ಪಾತ್ರದ ಬಗ್ಗೆ ನಾನು ಚಿಂತಿಸುತ್ತಿದ್ದೇನೆ. ಇನ್ನೆರಡು ದಿನಗಳಲ್ಲಿ ಆ ಬಗ್ಗೆ ನಿರ್ಧರಿಸುತ್ತೇನೆ. ಆದರೆ ನಾನು ಮುಖ್ಯಮಂತ್ರಿ ಸ್ಥಾನದಲ್ಲಿದ್ದಿದ್ದರೆ ಜನರಿಗೆ ನಾನು ನೀಡಿದ ಮಾತನ್ನು ಉಳಿಸಿಕೊಳ್ಳುತ್ತಿದ್ದೆ. ತಮಿಳುನಾಡಿಗೆ ಯಾವ ಕಾರಣಕ್ಕೂ ನೀರು ಬಿಡುತ್ತಿರಲಿಲ್ಲ.

ಜಗದೀಶ ಶೆಟ್ಟರ್‌

ಬಿಜೆಪಿ ಮುಖಂಡ, ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ನಾಯಕ

ಈಗ ಆಗುತ್ತಿರುವ ಎಲ್ಲ ಅನಾಹುತಗಳಿಗೂ ಮುಖ್ಯಮಂತ್ರಿ ಕೃಷ್ಣ ಅವರೊಬ್ಬರೇ ಜವಾಬ್ದಾರರು. ಇಡೀ ಪ್ರಕ್ರಿಯೆಯನ್ನು ತಪ್ಪಾಗಿ ನಿರ್ವಹಿಸಲಾಗಿದೆ. ಕೃಷ್ಣ ಅವರ ಅಸಂಬದ್ಧ ನಿಲುವುಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ . ಪಾದಯಾತ್ರೆಯ ಸಂದರ್ಭದಲ್ಲಿ ರೈತರಿಗೆ ಸಂಕಷ್ಟ ತರುವ ಯಾವ ನಿರ್ಧಾರವನ್ನೂ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ವಚನ ನೀಡಿದ್ದರು. ಸಮಯ ಬಂದರೆ ಜೈಲಿಗೆ ಹೋಗುವುದಾಗಿಯೂ ಹೇಳಿದ್ದರು.

ಆದರೆ ಈಗ ಎಲ್ಲ ಮಾತುಗಳನ್ನೂ ಮರೆತು ಸುಪ್ರಿಂ ಕೋರ್ಟಿನಲ್ಲಿ ಕ್ಷಮೆ ಕೇಳಿದ್ದಾರೆ. ಬಿಜೆಪಿಯೇನಾದರೂ (ನಾನು) ಅಧಿಕಾರದಲ್ಲಿದ್ದಿದ್ದರೆ ಈ ಇಡೀ ವಿವಾದವನ್ನು ಸೂಕ್ಷ್ಮವಾಗಿ ನಿರ್ವಹಿಸುತ್ತಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸುಪ್ರಿಂ ಕೋರ್ಟ್‌ಗೂ ವಾಸ್ತವವನ್ನು ಮನವರಿಕೆ ಮಾಡಿಸಿ ರೈತರ ಹಿತ ಕಾಪಾಡುತ್ತಿತ್ತು.

ಪಿ.ಜಿ.ಆರ್‌. ಸಿಂಧ್ಯಾ

ಜೆಡಿಯು ನಾಯಕ

ಮುಖ್ಯಮಂತ್ರಿ ಕೃಷ್ಣ ಇಡೀ ಪ್ರಕರಣವನ್ನು ಒಂದು ಗೋಳನ್ನಾಗಿ ಪರಿವರ್ತಿಸಿದ್ದಾರೆ. ಕೋರ್ಟ್‌ನಲ್ಲಿ , ವಿರೋಧ ಪಕ್ಷಗಳ ಬಳಿ, ರೈತರ ಬಳಿಯೂ ವಿಶ್ವಾಸಕ್ಕೆ ಅನರ್ಹರೆನಿಸಿಕೊಂಡಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದ ಪಕ್ಷದಲ್ಲಿ ಸುಪ್ರಿಂ ಕೋರ್ಟ್‌ಗೆ ವಾಸ್ತವನ್ನು ತಿಳಿಸಿಕೊಡುತ್ತಿದ್ದೆ. ವಿರೋಧ ಪಕ್ಷವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದೆ.

ಸಿ. ನಾರಾಯಣ ಸ್ವಾಮಿ

ಜೆಡಿಯು ಪ್ರಧಾನ ಕಾರ್ಯದರ್ಶಿ

ಕಾವೇರಿ ವಿವಾದವನ್ನು ಮುಖ್ಯಮಂತ್ರಿಗಳು ಸರಿಯಾಗಿ ನಿರ್ವಹಿಸಲಿಲ್ಲ . ಸಿಆರ್‌ಎ ಮತ್ತು ಕೋರ್ಟ್‌ ಮುಂದೆ ಸಮರ್ಥ ವಾದ ಮಂಡಿಸುವಲ್ಲಿ ಸರಕಾರ ಸೋತಿದೆ. ನಮ್ಮ ನಿಲುವನ್ನು ಮಂಡಿಸುವ ಬದಲಾಗಿ ವಾಸ್ತವವನ್ನು ಸರಿಯಾಗಿ ಅರ್ಥ ಮಾಡಿಸಿದ್ದರೆ ನಮಗಿಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಜೈಲಿಗೆ ಹೋಗಲು, ಶಿಕ್ಷೆ ಅನುಭವಿಸಲು ಸಿದ್ಧ ಎಂದು ಹೇಳಿದ ಕೃಷ್ಣ ಮಾತು ಬದಲಾಯಿಸಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳುವುದೇ ಕಷ್ಟವಾಗುತ್ತಿದೆ.

ನಮ್ಮ ಪಾರ್ಟಿ ಅಧಿಕಾರದಲ್ಲಿದ್ದಿದ್ದರೆ ಮಾಜಿ ಪ್ರಧಾನಿ ದೇವೇಗೌಡ ಅವರನ್ನೇ ಅನುಸರಿಸುತ್ತಿತ್ತು. ಅವರು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ಜಲಾನಯನ ಪ್ರದೇಶಕ್ಕೆ ಸಿಆರ್‌ಎ ತಂಡಕ್ಕೆ ಭೇಟಿ ನೀಡಿ ವಾಸ್ತವವನ್ನು ಗಮನಿಸುವಂತೆ ಆಗ್ರಹಿಸಿದ್ದರು.

ಜನ ಹೇಳೋದೇನು ?

ಹೆಸರು ಹೇಳಬಯಸದ ಟೀವಿ ಪತ್ರಕರ್ತ

ವ್ರತಾನೂ ಕೆಡ್ತು , ಜಾತೀನೂ ಕೆಡ್ತು ಅನ್ನುವಂತೆ ಕೃಷ್ಣ ಯಡವಟ್ಟು ಮಾಡಿಕೊಂಡಿದ್ದಾರೆ. ನಾನೇನಾದರೂ ಮುಖ್ಯಮಂತ್ರಿ ಆಗಿದ್ದರೆ...

ಹನುಮಂತರಾಜು, ವ್ಯಾಪಾರಿ

ಕೃಷ್ಣಂಗೆ ಧೈರ್ಯ ಇಲ್ಲ ಬಿಡಿ ಸಾರ್‌. ಅವರಿಗೆ ಶಿಕ್ಷೆಯಾಗಿದ್ರೆ ನಾವೆಲ್ಲ ಸುಮ್ಮನಿರ್ತಿದ್ವಾ ?

(ಚಿತ್ರನಟ ಹಾಗೂ ಚಿತ್ರದುರ್ಗ ಸಂಸದ ಶಶಿಕುಮಾರ್‌ ಅವರನ್ನು ಸಂಪರ್ಕಿಸಲು ಮಾಡಿದ ಪತ್ರಕರ್ತರ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಅವರು ಎಲ್ಲಿದ್ದಾರೆ ಅನ್ನುವುದು ನಿಮಗೇನಾದರೂ ಗೊತ್ತಾ ?)

Post your Views

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X