• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶರಣಾಗತಿ ; ತಮಿಳ್ನಾಡಿಗೆ 10 ಸಾವಿರ ಕ್ಯುಸೆಕ್ಸ್‌ ನೀರು

By Staff
|

ಬೆಂಗಳೂರು : ತಮಿಳುನಾಡಿಗೆ 10 ಸಾವಿರ ಕ್ಯುಸೆಕ್ಸ್‌ ಹರಿಸುವ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಕೈಗೊಂಡಿದ್ದು - ಪೊಲೀಸ್‌ ಸರ್ಪಗಾವಲಿನಲ್ಲಿ ಕೃಷ್ಣರಾಜ ಸಾಗರ ಜಲಾಶಯದಿಂದ ಮೆಟ್ಟೂರು ಜಲಾಶಯಕ್ಕೆ ನೀರು ಬಿಡಲಾಗಿದೆ.

ನ್ಯಾಯಾಂಗ ನಿಂದನೆಯ ತೂಗುಗತ್ತಿಯ ಆತಂಕದಲ್ಲಿ ತತ್ತರಗೊಂಡಿರುವ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಭಾನುವಾರ (ಅ.27) ರಾತ್ರಿ ಸಮಾವೇಶಗೊಂಡ ಸಂಪುಟ ಸಭೆ ತಮಿಳುನಾಡಿಗೆ ನೀರು ಬಿಡುವ ಮಹತ್ವದ ತೀರ್ಮಾನ ಕೈಗೊಂಡಿತು.

ಪಕ್ಷದ ಹೈ ಕಮಾಂಡ್‌ ಹಾಗೂ ಕರ್ನಾಟಕದ ಪರ ಸುಪ್ರಿಂಕೋರ್ಟ್‌ನಲ್ಲಿ ವಾದಿಸುವ ದೇಶದ ಶ್ರೇಷ್ಠ ನ್ಯಾಯವಾದಿಗಳಲ್ಲೊಬ್ಬರಾದ ನಾರಿಮನ್‌ ಅವರ ಸಲಹೆಯ ಮೇರೆಗೆ ತಮಿಳುನಾಡಿಗೆ ನೀರು ಬಿಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ನ್ಯಾಯಾಲಯದಿಂದ ಪಕ್ಷದ ಮುಖ್ಯಮಂತ್ರಿಯಾಬ್ಬರು ಛೀಮಾರಿ ಹಾಕಿಸಿಕೊಳ್ಳುವ ಮುಜುಗರವನ್ನು ತಪ್ಪಿಸುವ ಉದ್ದೇಶದಿಂದ ನೀರು ಬಿಡುವಂತೆ ಹೈ ಕಮಾಂಡ್‌ ಕೃಷ್ಣ ಅವರಿಗೆ ಸೂಚಿಸಿದೆ.

ಬೇಷರತ್‌ ಶರಣಾಗತಿ

ತಮಿಳುನಾಡಿಗೆ ನೀರು ಹರಿಸದಿರುವ ಮೂಲಕ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿರುವ ಮುಖ್ಯಮಂತ್ರಿ ಕೃಷ್ಣ , ಸುಪ್ರಿಂಕೋರ್ಟ್‌ನಲ್ಲಿ ಬೇಷರತ್‌ ಕ್ಷಮಾಪಣೆ ಕೋರಲು ನಿರ್ಧರಿಸಿದ್ದಾರೆ. ಸೋಮವಾರ (ಅ.28) ನ್ಯಾಯಾಲಯದ ಕಲಾಪ ಆರಂಭವಾದ ಕೂಡಲೇ ಕ್ಷಮಾಪಣೆಯ ಪ್ರಮಾಣಪತ್ರ ಸಲ್ಲಿಸಲಾಗುವುದು. ಈ ಪತ್ರದಲ್ಲಿ ರಾಜ್ಯದಲ್ಲಿನ ಸ್ಥಿತಿಗತಿಗಳನ್ನೂ ವಿವರಿಸಲಾಗುವುದು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

(ಇನ್ಫೋ ವಾರ್ತೆ)

Post your Views

ಮುಖಪುಟ / ಕಾವೇರಿ ಕನ್ನಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more