• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರುವ ಬೇಸಗೆಯಲ್ಲಿ ಕತ್ತಲಲ್ಲಿ ಕರ್ನಾಟಕ !

By Staff
|

ಬೆಂಗಳೂರು : ಬರಲಿರುವ ಬೇಸಗೆಯಲ್ಲಿ ಕರ್ನಾಟಕವನ್ನು ಗಾಢಾಂಧಕಾರ ಆವರಿಸಲಿದೆ. ಕೇಂದ್ರ ಉತ್ಪಾದನಾ ಘಟಕಗಳಿಂದ ರಾಜ್ಯ ಪಡೆಯುತ್ತಿರುವ ಅಕ್ರಮ ವಿದ್ಯುತ್ತಿಗೆ ಕಂಡಾಪಟ್ಟೆ ಪೆನಾಲ್ಟಿ ವಿಧಿಸಿರುವುದೇ ಇದಕ್ಕೆ ಕಾರಣ.

ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಪಿಜಿಸಿಐಎಲ್‌) ನ ಮೇಲಧಿಕಾರಿಗಳು ಹೇಳುವ ಪ್ರಕಾರ- ತನ್ನ ಪಾಲಿನ ವಿದ್ಯುತ್ತಿಗಿಂತ ಹೆಚ್ಚು ಪ್ರಮಾಣವನ್ನು ಕರ್ನಾಟಕ ಅಕ್ರಮವಾಗಿ ಪಡೆದಿದೆ. ಈ ರೀತಿ ಮಾಡಿರುವ ಎಲ್ಲಾ ರಾಜ್ಯಗಳ ಮೇಲೆ ‘ವಿಪ್‌’ ಹೇರಲು ನಿರ್ಧರಿಸಿದ್ದೇವೆ. ಹೀಗಾಗಿ ಮುಂದಿನ ಬೇಸಗೆಯಲ್ಲಿ ಅನಿಯಮಿತ ವಿದ್ಯುತ್‌ ಕಡಿತ ಎಂಬುದು ದಿನನಿತ್ಯದ ಗೋಳಾಗಲಿದೆ.

ನಮಗೆ 1056 ದಶಲಕ್ಷ ಯೂನಿಟ್‌ ವಿದ್ಯುತ್‌ ಕೊರತೆ ಇದೆ. ತಮ್ಮ ಕೋಟಾ ಮೀರಿ ವಿದ್ಯುತ್ತನ್ನು ಪಡೆಯುತ್ತಿರುವ ಕೆಲವು ರಾಜ್ಯಗಳಿವೆ. ಈ ಪೈಕಿ ಕರ್ನಾಟಕ ಅಕ್ಟೋಬರ್‌ ಒಂದೇ ತಿಂಗಳಲ್ಲಿ 100 ದಶಲಕ್ಷ ಯೂಟಿನ್‌ ಹೆಚ್ಚುವರಿ ವಿದ್ಯುತ್ತನ್ನು ಅಕ್ರಮವಾಗಿ ಪಡೆದುಕೊಂಡಿದೆ ಎಂಬುದು ಅಧಿಕಾರಿಗಳ ಆಪಾದನೆ.

ಕರ್ನಾಟಕ ಸಕ್ರಮ ರೀತಿಯಲ್ಲಿ ಪಡೆಯುತ್ತಿರುವ ವಿದ್ಯುತ್‌ನ ಪ್ರತಿ ಯೂನಿಟ್‌ಗೆ 1.80 ರುಪಾಯಿ ಕಟ್ಟುತ್ತಿದೆ. ಆದರೆ, ಅಕ್ರಮವಾಗಿ ಪಡೆದಿರುವ ವಿದ್ಯುತ್ತಿಗೆ ಪ್ರತಿ ಯೂನಿಟ್‌ಗೆ 4.20 ರುಪಾಯಿ ಪೆನಾಲ್ಟಿ ಕಟ್ಟಬೇಕಾಗುತ್ತದೆ. ಹೊಸ ವಿದ್ಯುತ್‌ ಯೋಜನೆಗಳಿಂದ ಬರುವ ಬೇಸಗೆ ಹೊತ್ತಿನೊಳಗೆ ಹೆಚ್ಚುವರಿ ವಿದ್ಯುತ್‌ ಉತ್ಪಾದನೆ ಕಷ್ಟ ಸಾಧ್ಯ. ಒಂದೆಡೆ ಮಳೆಯ ಅಭಾವ, ಇನ್ನೊಂದೆಡೆ ವಿದ್ಯುತ್‌ ಕದ್ದ ಆರೋಪ.

ಮುಂದಿನ ಬೇಸಗೆಯಲ್ಲಿ ಏರ್‌ಕಂಡೀಷನರ್‌ ಮತ್ತು ಫ್ಯಾನ್‌ಗಳ ಆಸೆಯಿಟ್ಟುಕೊಂಡಿರುವ ಕರ್ನಾಟಕದ ಮಂದಿ ತಣ್ಣಗಾಗಲು ಸಾಧ್ಯವಿಲ್ಲ. ಯಾಕೆಂದರೆ, ಏ.ಸಿ. ಹಾಗೂ ಫ್ಯಾನ್‌ ಚಾಲೂ ಆಗೋಕೆ ಬೇಕಾದ ವಿದ್ಯುತ್‌ ಖೋತಾ ಆಗಲಿದೆ !

(ಇನ್ಫೋ ವಾರ್ತೆ)

ವಾರ್ತಾ ಸಂಚಯ

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X