ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನ ಬಂದಂತೆ ರಸ್ತೆ ನಾಮಕರಣ, ಪಾಲಿಕೆ ಕಡಿವಾಣ

By Staff
|
Google Oneindia Kannada News

ಬೆಂಗಳೂರು : ನಗರದ ರಸ್ತೆ ಬಡಾವಣೆ ಮತ್ತು ಉದ್ಯಾನವನ ಹಾಗೂ ಆಟದ ಮೈದಾನಗಳಿಗೆ ಇನ್ನು ಮುಂದೆ ಮನಬಂದಂತೆ ನಾಮಕರಣ ಮಾಡದಿರಲು ಬೆಂಗಳೂರು ಮಹಾ ನಗರ ಪಾಲಿಕೆ ನಿರ್ಧರಿಸಿದೆ.

ರಸ್ತೆ ನಾಮಕರಣಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯಾಂದನ್ನು ರಚಿಸಿದ್ದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಯಾವುದೇ ಅಡ್ಡ ರಸ್ತೆಗಳಿಗೆ ಇನ್ನು ಮುಂದೆ ನಾಮಕರಣ ಮಾಡುವಂತಿಲ್ಲ. ಎಲ್ಲ ಅಡ್ಡ ರಸ್ತೆಗಳನ್ನು ಸಂಖ್ಯಾಕ್ರಮದಲ್ಲೇ ಗುರುತಿಸಬೇಕು. ದೊಡ್ಡ ರಸ್ತೆ, ಮುಖ್ಯ ರಸ್ತೆ ಮತ್ತು ಮುಖ್ಯ ವರ್ತುಲ, ಬಡಾವಣೆಗಳಿಗೆ ಸಾಹಿತ್ಯ, ಕಲೆ ಶಿಕ್ಷಣ, ದೇಶಸೇವೆ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದವರ ಹೆಸರನ್ನಿಡಬೇಕು.

ಉದ್ಯಾನವನಗಳಿಗೂ ಹಳೇ ಹೆಸರನ್ನು ತೆಗೆದು ಹೊಸ ಹೆಸರನ್ನಿಡುವಂತಿಲ್ಲ. ಉದ್ಯಾನ ಅಥವಾ ಆಟದ ಮೈದಾನಗಳಿಗೆ ನಾಮಕರಣ ಮಾಡಬೇಕಿದ್ದಲ್ಲಿ ಆಯಾ ಉಪ ಆಯುಕ್ತರೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕರ ಸಲಹೆ ಅಭಿಪ್ರಾಯಗಳನ್ನೂ ಪರಿಗಣಿಸಬೇಕು ಎಂದು ಪಾಲಿಕೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X