ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪಾಲ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಪತ್ತೆಗೆ ಡಿಎನ್‌ಎ ಟೆಸ್ಟ್‌

By Staff
|
Google Oneindia Kannada News

ಬೆಂಗಳೂರು: ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವು ಡಿಎನ್‌ಎ ಪರೀಕ್ಷಾ ಸೌಲಭ್ಯ ಸದ್ಯದಲ್ಲೇ ಆರಂಭವಾಗಲಿದೆ.

ಹೈಬ್ರಿಡ್‌ ಪಾಪಿಲ್ಲೋಮೇವಿರಸ್‌(ಎಚ್‌ಪಿವಿ) ಡಿಎನ್‌ಎ ಟೆಸ್ಟ್‌ ಸೌಕರ್ಯವನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಮೈಕ್ರೋ ಬಯಲಾಜಿ ವಿಭಾಗದ ಡಾ. ಜಾನ್‌ ಕೆನ್ನೆಥ್‌ ತಿಳಿಸಿದ್ದಾರೆ. ಮುಖ್ಯವಾಗಿ ಸ್ತನದ ಕ್ಯಾನ್ಸರ್‌ನ್ನು ಮುಂಚಿತವಾಗಿಯೇ ಪತ್ತೆ ಹಚ್ಚುವುದು ಸಾಧ್ಯವಾಗುವುದರಿಂದ ಈ ಸೌಲಭ್ಯದಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಅನುಕೂಲವಾಗಲಿದೆ.

ಎಚ್‌ಪಿವಿ-ಡಿಎನ್‌ಎ ಟೆಸ್ಟ್‌ನ ಒಟ್ಟು ಶುಲ್ಕ 1,200 ರೂಪಾಯಿಯಿಂದ 1,500 ರೂಪಾಯಿಗಳು. ಪ್ರಸ್ತುತ ಕ್ಯಾನ್ಸರ್‌ ಪತ್ತೆ ಹಚ್ಚುವ ಪ್ಯಾಪ್‌ ಟೆಸ್ಟ್‌ಗಿಂತ ಇದು ಅಗ್ಗವಾಗಲಿದೆ. ಯಾಕೆಂದರೆ ಪ್ಯಾಪ್‌ ಟೆಸ್ಟ್‌ ನ್ನು ನಿರ್ದಿಷ್ಟ ಅವಧಿಯಲ್ಲಿ ಹಲವು ಬಾರಿ ಮಾಡಬೇಕಾಗುತ್ತದೆ. ಈ ಹೊಸ ಪರೀಕ್ಷಾ ಸೌಲಭ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯನ್ನು ಸಂಪರ್ಕಿಸಬಹುದು. ಡಾ. ದಿನೇಶ್‌ ಗುಪ್ತಾ : [email protected]

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X