ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಐಟಿ.ಕಾಂ ಮೇಳಕ್ಕೆ 17 ದೇಶಗಳು

By Staff
|
Google Oneindia Kannada News

ಬೆಂಗಳೂರು : ಅಕ್ಟೋಬರ್‌ 28, ಸೋಮವಾರದಿಂದ ಪ್ರಾರಂಭವಾಗಲಿರುವ ಐದು ದಿನಗಳ ಅವಧಿಯ ಬೆಂಗಳೂರು ಐಟಿ.ಕಾಂ ಮೇಳದಲ್ಲಿ 17 ರಾಷ್ಟ್ರಗಳು ಭಾಗವಹಿಸಲಿವೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವ್ಯಾಪಾರದ ಹೊಸ ಮಜಲುಗಳನ್ನು ಅವಲೋಕಿಸುವ ಹಾಗೂ ಇ- ಆಡಳಿತ, ಬ್ಯಾಂಕಿಂಗ್‌ ಮತ್ತಿತರ ವಿತ್ತ ವಲಯಗಳ ಕುರಿತು ಕ್ಷ-ಕಿರಣ ಬೀರುವ ಈ ಮೇಳದ ವಿವರಗಳನ್ನು ಮಾಹಿತಿ ತಂತ್ರಜ್ಞಾನ ಸಚಿವ ಡಿ.ಬಿ.ಇನಾಂದಾರ್‌ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್‌ ಆಫ್‌ ಇಂಡಿಯಾ ಹಾಗೂ ಕರ್ನಾಟಕ ಸರ್ಕಾರ ಜಂಟಿಯಾಗಿ ಆಯೋಜಿಸಿರುವ ಈ ಮೇಳದ ವ್ಯಾಪಾರ ವಹಿವಾಟು ಒಡಂಬಡಿಕೆ ಹಾಗೂ ಕೊಡು- ಕೊಳ್ಳುವಿಕೆಗೆ ವೇದಿಕೆಯಾಗಲಿದೆ. ಕಳೆದ ವರ್ಷ ಮೇಳಕ್ಕೆ 15 ದೇಶಗಳಿಂದ ಸುಮಾರು ಎರಡೂವರೆ ಲಕ್ಷ ಉದ್ದಿಮೆ ಪ್ರತಿನಿಧಿಗಳು ಬಂದಿದ್ದರು. 250 ದಶಲಕ್ಷ ಡಾಲರ್‌ನಷ್ಟು ಒಡಂಬಡಿಕೆ- ವಹಿವಾಟುಗಳೂ ನಡೆದಿತ್ತು. ಈ ವರ್ಷ ನಮ್ಮ ನಿರೀಕ್ಷೆ ಇದಕ್ಕಿಂತ ಹೆಚ್ಚಾಗಿದೆ ಎಂದು ಇನಾಂದಾರ್‌ ಹೇಳಿದರು.

ತಮ್ಮ ತಮ್ಮ ಕಂಪನಿಗಳ ಹೊಸ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಂಡುಕೊಳ್ಳುವುದು ಈ ಮೇಳದಿಂದ ಸಾಧ್ಯವಾಗಲಿದೆ ಎಂದು ರಾಜ್ಯ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ ತಿಳಿಸಿದರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X