ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಹುಡುಗನ ಕುರಿತ ಕಾದಂಬರಿಗೆ ಬೂಕರ್‌

By Staff
|
Google Oneindia Kannada News

Yann Martelಲಂಡನ್‌ : ಬ್ರಿಟನ್ನಿನ ಪ್ರತಿಷ್ಠಿತ ಬುಕರ್‌ ಪ್ರಶಸ್ತಿ- 2002ಕ್ಕೆ ಕೆನಡಾ ಸಾಹಿತಿ ಯಾನ್‌ ಮಾರ್ಟೆಲ್‌ ಭಾಜನರಾಗಿದ್ದಾರೆ.

ಸಾಹಿತ್ಯ ಕೃಷಿಗಾಗಿ ಕೊಡುವ ಈ ಪ್ರಶಸ್ತಿ ಈ ಬಾರಿ ಸ್ಪೇನ್‌ನಲ್ಲಿ ಹುಟ್ಟಿದ ಮಾರ್ಟೆಲ್‌ರ Life of Pi ಕಾದಂಬರಿಗೆ ದೊರೆತಿದೆ. 50 ಸಾವಿರ ಪೌಂಡ್‌ ನಗದಿನ ಈ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಕೆನೆಡಾ, ಆಸ್ಟ್ರೇಲಿಯಾ, ಐರ್‌ಲ್ಯಾಂಡ್‌ ಮತ್ತು ವೇಲ್ಸ್‌ನ 6 ಕೃತಿಗಳಿದ್ದವು. ಈ ಪೈಕಿ ಆಯ್ಕೆ ಸಮಿತಿಯ ಮನಸ್ಸು ವಾಲಿದ್ದು ಮಾರ್ಟೆಲ್‌ ಕೃತಿಯತ್ತ.

ಭಾರತದ ಹುಡುಗನ ಕಥೆ : ಕಾದಂಬರಿಯ ವಸ್ತು ಭಾರತೀಯ ಹುಡುಗನದ್ದು. ಒಬ್ಬ ಅಸಾಮಾನ್ಯ ಹುಡುಗ ಭಾರತದ ಮೃಗಾಲಯವೊಂದರಲ್ಲಿ ಬೆಳೆಯುತ್ತಾನೆ. ಇವನ ಹೆಸರು ಪೈ. ನಂತರ ಈತನ ಅಪ್ಪ ಕೆನಡಾಗೆ ಹೋಗಲು ನಿಶ್ಚಯಿಸಿ, ಪ್ರಾಣಿಗಳನ್ನೆಲ್ಲಾ ಅಮೆರಿಕಾದ ಸಂಗ್ರಹಾಲಯವೊಂದಕ್ಕೆ ಮಾರಲು ತೀರ್ಮಾನಿಸುತ್ತಾನೆ. ಪೈ ಹಾಗೂ ಆತನ ತಂದೆಯ ಸಹಿತ ಪ್ರಾಣಿಗಳು ಹಡಗಿನ ಮೂಲಕ ಪೆಸಿಫಿಕ್‌ ಸಾಗರದಲ್ಲಿ ಸಂಚರಿಸುವಾಗ, ಹಡಗು ಮುಳುಗುತ್ತದೆ. ಈ ದುರಂತದಲ್ಲಿ ಬದುಕುಳಿಯುವ ಏಕೈಕ ಮಾನವ ಪೈ. ಈತನ ಜೊತೆಗೆ ಕಾಲು ಮುರಿದ ಒಂದು ರಿkುೕಬ್ರಾ ಹಾಗೂ ಒಂದು ಬೆಂಗಾಲ್‌ ಹುಲಿ ಇರುತ್ತವೆ. ಮುಂದೇನು...? ಪುಸ್ತಕ ಓದಿ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X