ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ 24ರಿಂದ ಹಾಸನಾಂಬಾ ದೇವಿ ದರ್ಶನ ಭಾಗ್ಯ

By Staff
|
Google Oneindia Kannada News

ಹಾಸನ: ನಗರದ ಖ್ಯಾತ ಹಾಸನಾಂಬಾ ದೇವಾಲಯದ ಜಾತ್ರೆಯು ಅ. 24ರಿಂದ ನವೆಂಬರ್‌ 6ರವರೆಗೆ ನಡೆಯಲಿದೆ. ಅಕ್ಟೋಬರ್‌ 24ರ ಗುರುವಾರದಂದು ದೇವಸ್ಥಾನದ ಬಾಗಿಲು ತೆರೆದು, ನವೆಂಬರ್‌ 6ರಂದು ಮುಚ್ಚಲಾಗುವುದು.

ಅಕ್ಟೋಬರ್‌ 25ರಂದು ಬೆಳಗ್ಗೆ 7ರಿಂದ ಸಂಜೆ ಐದು ಗಂಟೆಯವರೆಗೆ ಮತ್ತು ರಾತ್ರಿ 9ರಿಂದ 10.30ವರೆಗೆ ಭಕ್ತರು ದೇವರ ದರ್ಶನ ಪಡೆಯಬಹುದು . 26ರ ಶುಕ್ರವಾರದಿಂದ ನವೆಂಬರ್‌ 4ರವರೆಗೆ ಪ್ರತಿ ದಿನ ಬೆಳಗ್ಗೆ 10ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ದೇವಳದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ರಾಮೋತ್ಸವವು ನವೆಂಬರ್‌ 4ರ ಮಧ್ಯಾಹ್ನ 3 ಗಂಟೆಗೆ ಹಾಗೂ 5 ರಂದು ಸಿದ್ದೇಶ್ವರ ದೇವರ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಭಕ್ತರು ಶಾಂತಿಯನ್ನು ಕಾಪಾಡಲು ಸಹಕರಿಸಲು ಹಾಗೂ ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X