• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಸೋಮನಹಳ್ಳಿಯಾ, ನಾನು ಕೃಷ್ಣ ಮಾತಾಡ್ತಿದೀನಿ..ಮಳೆ ಚೆನ್ನಾಗಾಯ್ತ?’

By Staff
|

ಬೆಂಗಳೂರು : ತಮ್ಮ ತವರೂರು ಸೋಮನಹಳ್ಳಿಗೆ ಕರೆ ಮಾಡುವ ಮೂಲಕ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕರ್ನಾಟಕದಲ್ಲಿ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್‌) ದ ಮೊಬೈಲ್‌ ಸೇವೆ ‘ಸೆಲ್‌ ಒನ್‌’ಗೆ ಸೋಮವಾರ ಚಾಲನೆ ಕೊಟ್ಟರು.

ತಮ್ಮೂರಿಗೆ ಫೋನಾಯಿಸಿ, ಮಳೆ- ಬೆಳೆ, ಉಭ- ಶುಭ ವಿಚಾರಿಸಿಕೊಂಡ ಕೃಷ್ಣ ನಂತರ ಸುದ್ದಿಗಾರರೊಡನೆ ಮಾತನಾಡಿ, ಸಂವಹನಾ ಕ್ಷೇತ್ರದಲ್ಲಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿರುವ ಕೇಂದ್ರ ಸಂಪರ್ಕ ಸಚಿವ ಪ್ರಮೋದ್‌ ಮಹಾಜನ್‌ ಅವರನ್ನು ಶ್ಲಾಘಿಸಿದರು. ಹೆದ್ದಾರಿ ಅಭಿವೃದ್ಧಿಗೆ ಚೆಂದದ ಯೋಜನೆಗಳನ್ನು ರೂಪಿಸಿರುವುದಕ್ಕಾಗಿ ಪ್ರಧಾನಿ ಎ.ಬಿ.ವಾಜಪೇಯಿ ಅವರನ್ನೂ ಕೃಷ್ಣ ಹೊಗಳಿದರು.

ಮುಲಾಮೇ ಇಲ್ಲದ ಉದ್ದಿಮೆಗಳಿಗೆ ಬಾಗಿಲು : ಪುನಶ್ಚೇತನ ಸಾಧ್ಯವೇ ಇಲ್ಲ ಎನ್ನುವಂಥಾ ಸಾರ್ವಜನಿಕ ವಲಯದ ಉದ್ದಿಮೆ (ಪಿಎಸ್‌ಯು) ಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ಇದೇ ಸಮಾರಂಭದಲ್ಲಿ ಕೃಷ್ಣ ಪ್ರಕಟಿಸಿದರು. ಪುನಶ್ಚೇತನ ಸಾಧ್ಯವಿರುವ ರೋಗಗ್ರಸ್ತ ಉದ್ದಿಮೆಗಳಿಗೆ ಮತ್ತೆ ಜೀವ ಕೊಡಲು ವಿವಿಧ ಮೂಲಗಳಿಂದ ನಿಧಿ ಸಂಗ್ರಹಣೆಗೆ ಪ್ರಯತ್ನ ಮಾಡುತ್ತೇವೆ. ಆದರೆ ಬಾಗಿಲು ಹಾಕದೆ ವಿಧಿಯೇ ಇಲ್ಲ ಎಂಬಂಥಾ ಸಂಸ್ಥೆಗಳನ್ನು ಮುಚ್ಚಲೇಬೇಕಾಗಿದೆ ಎಂದರು.

ಕಮ್ಯುನಲ್‌ ಯೋಜನೆಗಳಿಂದ ಸಣ್ಣ ಪ್ರಮಾಣದ ಹಾಗೂ ಸಾರ್ವಜನಿಕ ವಲಯದ ಉದ್ದಿಮೆಗಳ ಹಿತಾಸಕ್ತಿಗೆ ಪೆಟ್ಟು ಬಿದ್ದಿದೆ. 1960ರಿಂದ ಮೂರು ದಶಕಗಳ ಕಾಲ ಈ ಉದ್ದಿಮೆಗಳ ಆರೋಗ್ಯ ಚೆನ್ನಾಗೇ ಇತ್ತು. ಜಾಗತಿಕ ಪೋಟಿಯಲ್ಲಿ ಇವು ನಲುಗಿಹೋಗಿವೆ ಎಂದು ಕೃಷ್ಣ ವಿಷಾದಿಸಿದರು.

2003, ಮಾರ್ಚ್‌ಗೆ 2 ಲಕ್ಷ ಗ್ರಾಹಕರ ಗುರಿ : ಸಮಾರಂಭದಲ್ಲಿ ಮಾತನಾಡಿದ ಬಿ.ಎಸ್‌.ಎನ್‌.ಎಲ್‌.ನ ಮುಖ್ಯ ಜನರಲ್‌ ಮೇನೇಜರ್‌, 2003ನೇ ಇಸವಿ ಮಾರ್ಚ್‌ ಹೊತ್ತಿಗೆ ತಮ್ಮ ಮೊಬೈಲ್‌ ಸೇವೆಗೆ 2 ಲಕ್ಷ ಕರ್ನಾಟಕದ ಗ್ರಾಹಕರನ್ನು ಹೊಂದುವ ಗುರಿಯಿದೆ ಎಂದರು. ರಾಜ್ಯದ 121 ನಗರಗಳಲ್ಲಿ ಬಿಎಸೆನ್‌ಎಲ್‌ ಮೊಬೈಲ್‌ ಸೇವೆ ಜಾರಿಗೆ ಬಂದಿದ್ದು, 120 ಕೋಟಿ ರುಪಾಯಿ ಬಂಡವಾಳವನ್ನು ಇದಕ್ಕಾಗಿ ವಿನಿಯೋಗಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ಕಂಪನಿಯ ಈ ಸೇವೆಯಿಂದ ಮೊಬೈಲ್‌ ವಲಯದಲ್ಲಿ ಈಗಾಗಲೇ ಚುರುಕಾಗಿರುವ ಪೋಟಿಗೆ ಹೊಸ ಆಯಾಮ ದೊರೆಯಲಿದ್ದು, ಗ್ರಾಹಕರಿಗೆ ಸುಲಭ ದರದಲ್ಲಿ ಮೊಬೈಲ್‌ ಸೇವೆ ಪಡೆಯುವ ಅವಕಾಶ ನಿಚ್ಚಳವಾಗಲಿದೆ.

ಬಿಎಸ್‌ಎನ್‌ಎಲ್‌ ಮೊಬೈಲ್‌ ದರಪಟ್ಟಿ

ಬಾಡಿಗೆ ದರ ಯೋಜನೆ
ÍWÜÙÜ ÝwWæ JÙÜ PÜæá ÍÜáÆR (ËáÐÜPæR) ÖæÜPÜæá ÍÜáÆR (ËáÐÜPæR)
325 ರುಪಾಯಿ 00.00 ರು. 2.00 ರು.
225 ರುಪಾಯಿ 1.20 ರು. 2.40 ರು.
ಪೂರ್ವ ಪಾವತಿ ಕಾರ್ಡ್‌ಗಳು
PÝv…ì ÜÜ ÆÜ æÇæá PÜæWÜÙÜá AÊܗ JÙܟÜáÊÜ PÜæ ÍÜáÆR
300 ರುಪಾಯಿ 185.71 ರು. 30 ದಿನ 00.00 ರು.
500 ರುಪಾಯಿ 376.19 ರು. 30 ದಿನ 00.00 ರು.
1000 ರುಪಾಯಿ 852.3 Üá. 60 ©®Ü 00.00 Üá.
2000 ರು. 1904.76 ರು. 90 ದಿನ 00.00 ರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more