• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೋನಿಯಾ ಪ್ರಧಾನಿಯಾದರೆ, ದೇಶ ಬಿಡುತ್ತೇನೆ : ಅದಮಾರು ಶ್ರೀ

By Staff
|

ಬೆಂಗಳೂರು : ಸೋನಿಯಾ ಗಾಂಧಿ ಏನಾದರೂ ಈ ದೇಶದ ಪ್ರಧಾನಿಯಾದರೆ, ನಾನು ದೇಶ ಬಿಟ್ಟು ಹೋಗುತ್ತೇನೆ. ಭಾರತೀಯ ಮೂಲದವರು ಪ್ರಧಾನಿಯಾಗೋವರೆಗೆ ವಾಪಸ್ಸು ಬರೋದೇ ಇಲ್ಲ !

ಉಡುಪಿ ಅದಮಾರು ಮಠಾಧೀಶ ವಿಭುದೇಶ ತೀರ್ಥ ಸ್ವಾಮೀಜಿ ಹಾಕಿರುವ ಧಮಕಿ ಇದು.

ಶುಕ್ರವಾರ ಸ್ವಾಮೀಜಿ ಸುದ್ದಿಗಾರರ ಜೊತೆ ಮಾತಾಡುತ್ತಿದ್ದರು. ಸೋನಿಯಾ ಯಾಕೆ ಪ್ರಧಾನಿಯಾಗಬಾರದು ಅನ್ನುವುದಕ್ಕೆ ಸ್ವಾಮೀಜಿ ಕೊಡುವ ಸಮರ್ಥನೆ ಕೇಳಿ...

ವಿದೇಶೀಯರನ್ನು ಮದುವೆಯಾಗಿರುವ ಭಾರತೀಯರು ರಾಯಭಾರಿ ಆಗುವ ಹಾಗಿಲ್ಲ ಎಂಬ ನಿಯಮ ಇದೆಯಲ್ಲ. ಹಾಗಿದ್ದರೆ, ವಿದೇಶೀ ಮೂಲದ ಒಬ್ಬರನ್ನು ತಂದು ಪ್ರಧಾನಿ ಪಟ್ಟದಲ್ಲಿ ಕೂರಿಸೋದು ತರವೇ? ಪ್ರಧಾನಿ ಹತ್ತಿರ ದೇಶದ ರಹಸ್ಯಗಳಿರುತ್ತವೆ. ವಿದೇಶೀ ಮೂಲದವರು ಈ ಗುಟ್ಟುಗಳನ್ನು ರಟ್ಟು ಮಾಡುವುದಿಲ್ಲ ಅಂತ ಹೇಗೆ ಹೇಳೋಕಾಗುತ್ತೆ ?

ತಾವು ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿಕೊಂಡ ಸ್ವಾಮೀಜಿ, ಇವತ್ತಿನ ರಾಜಕಾರಣಿಗಳನ್ನು ಸ್ವಾರ್ಥದ ಮೊಟ್ಟೆಗಳು ಎಂದು ಬಣ್ಣಿಸಿದರು. ಅಧಿಕಾರ ಲಾಲಸೆಯಲ್ಲಿ ದೇಶವನ್ನು ಹಾಳುಗೆಡಹುವ ಪ್ರವೃತ್ತಿ ಅತಿಯಾಗುತ್ತಿದೆ ಎಂದು ವಿಷಾದಿಸಿದರು.

ತಮಿಳುನಾಡು ಸರ್ಕಾರ ಮತಾಂತರ ನಿಷೇಧ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದೆ. ಇದಕ್ಕೆ ಅದಮಾರು ಶ್ರೀ ಪ್ರತಿಕ್ರಿಯಿಸಿದ್ದು ಹೀಗೆ- ವ್ಯಕ್ತಿ ತನ್ನ ಇಚ್ಛೆಯಂತೆ ಮತಾಂತರಗೊಳ್ಳಉವ ಸ್ವಾತಂತ್ರ್ಯ ಕಸಿದುಕೊಳ್ಳಕೂಡದು. ಧರ್ಮ ತತ್ತ್ವದ ಆಧಾರದಲ್ಲಿ ಮತಾಂತರ ಆಗುವ ಅವಕಾಶ ಇರಬೇಕು. ಆದರೆ ಬಡತನದ ಕಾರಣಕ್ಕೆ ನಡೆಯುವ ಮತಾಂತರ ಕೂಡದು.

ಸೋನಿಯಾ ಗಾಂಧಿ ಪ್ರಧಾನಿಯಾಗುವುದು ತರವೇ?ಬರೆಯಿರಿ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more