• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನವೆಂಬರ್‌ನಿಂದ ಕೇದಾರನಾಥ, ಬದರಿನಾಥರಿಗೆ ಚಳಿಗಾಲದ ರಜೆ

By Super
|

ಡೆಹ್ರಾಡೂನ್‌: ಬದರಿನಾಥ ದೇವಾಲಯದ ಬಾಗಿಲನ್ನು ನವೆಂಬರ್‌ 17ರಿಂದ ಹಾಗೂ ಕೇದಾರನಾಥ ದೇವಾಲಯದ ಬಾಗಿಲನ್ನು ನವೆಂಬರ್‌ 6ರಿಂದ ಮುಚ್ಚಲಾಗುವುದು ಎಂದು ದೇವಳಗಳ ಆಡಳಿತ ಮಂಡಳಿ ಪ್ರಕಟಿಸಿದೆ.

ಕಳೆದ ಆರು ತಿಂಗಳುಗಳ ಕಾಲ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಚಳಿಗಾಲದಲ್ಲಿ ಅಸಾಧ್ಯ ಚಳಿ ಇರುವುದರಿಂದ ಎರಡೂ ದೇವಾಲಯಗಳ ಬಾಗಿಲು ಮುಚ್ಚಲಾಗುವುದು. ಇನ್ನಾರು ತಿಂಗಳುಗಳ ಕಾಲ ದೇವಳದ ಬಾಗಿಲು ಮುಚ್ಚಿರುತ್ತದೆ.

ಮಂಗಳವಾರ ದಸರಾ ಹಬ್ಬ ಮುಕ್ತಾಯದ ಸಂದರ್ಭದಲ್ಲಿ ಬದರಿನಾಥ ದೇವಳದ ಮುಖ್ಯ ಅರ್ಚಕ ಬದರಿ ಪ್ರಸಾದ್‌ ನಂಬೂದರಿ ದೇವಸ್ಥಾನದ ಬಾಗಿಲು ಮುಚ್ಚುವ ದಿನಾಂಕವನ್ನು ಪ್ರಕಟಿಸಿದರು. ಕೇದಾರನಾಥ ದೇವಾಲಯದ ಬಾಗಿಲು ಕೂಡ ನವೆಂಬರ್‌ 6ರಿಂದ ಮುಚ್ಚಿರುತ್ತದೆ. ಕಳೆದ ಮೇ ತಿಂಗಳ 17ರಿಂದ ಭಕ್ತರಿಗಾಗಿ ಕೇದಾರನಾಥ ಹಾಗೂ ಬದರಿನಾಥ ದೇಗುಲದ ಬಾಗಿಲು ತೆರೆಯಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Doors of Badrinath to be closed on Nov 17, Kedarnath on Nov 6
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more