• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಚಿವರ ಪುತ್ರನಿಂದ ವಂಚನೆ ; ವಿಷ ಕುಡಿದ ಹರಿಹರದ ಮಹಿಳೆ

By Staff
|

ಬೆಂಗಳೂರು : ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ರಾಜ್ಯದ ಹಿರಿಯ ಸಚಿವರೊಬ್ಬರ ಪುತ್ರ ತಮಗೆ ವಂಚನೆ ಮಾಡಿದ್ದಾರೆ ಎಂದು ಆಪಾದಿಸಿರುವ ಹರಿಹರದ ಓರ್ವ ಮಹಿಳೆ - ನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ಅವರ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಸಾಂಗ್ಲಿಯಾನ ಅವರ ಕಚೇರಿಗೆ ದೂರು ನೀಡಲು ಶುಕ್ರವಾರ (ಅ.11) ಮಧ್ಯಾಹ್ನ ಆಗಮಿಸಿದ ಹರಿಹರದಲ್ಲಿ ಬ್ಯೂಟಿ ಪಾರ್ಲರ್‌ ಇಟ್ಟುಕೊಂಡಿರುವ ಸುಜಾತ ಎನ್ನುವ ಮಹಿಳೆ ತಾವು ವಿಷ ಸೇವಿಸಿರುವುದಾಗಿ ತಿಳಿಸಿದರು. ವಿಷ ಸೇವಿಸಿದ್ದ ಮಹಿಳೆಯನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಯಿತು. ಆಸ್ಪತ್ರೆಯಲ್ಲಿ ವಿಷವನ್ನು ವಾಂತಿ ಮಾಡಿಸಿದ ನಂತರ ಆ ಮಹಿಳೆಯನ್ನು ಮನೆಗೆ ಕಳುಹಿಸಲಾಯಿತು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ಹರೀಂದ್ರನಾಥ್‌ ಮದುವೆಯಾಗುವುದಾಗಿ ನಂಬಿಸಿ ಈಗ ಬೇರೆ ಮಹಿಳೆಯನ್ನು ಮದುವೆಯಾಗಿದ್ದಾರೆ. ಅವರು ನನ್ನ ಮೇಲೆ ಅತ್ಯಾಚಾರ ಕೂಡ ಮಾಡಿದ್ದಾರೆ ಎಂದು ಸುಜಾತ ದೂರು ನೀಡಿದ್ದಾರೆ.

ಹಲವು ಸಚಿವರನ್ನು ಸಂಪರ್ಕಿಸಿದರೂ ತಮಗೆ ನ್ಯಾಯ ದೊರೆತಿಲ್ಲ . ಹರೀಂದ್ರನಾಥ್‌ ಅವರ ತಂದೆ ಪ್ರಭಾವೀ ಸಚಿವರಾಗಿದ್ದು , ಹಣ ನೀಡಿ ನನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಸುಜಾತ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more