• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತವನ್ನು ವಿಜಯದ ಅಲೆಯಲ್ಲಿ ತೇಲಿಸಿದ ಹರ್ಭಜನ್‌-ಕುಂಬ್ಳೆ ಸ್ಪಿನ್‌

By Staff
|

ಮುಂಬಯಿ : ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ (ಅ.12) ಅಂತ್ಯಗೊಂಡ ವಿಂಡೀಸ್‌ ವಿರುದ್ಧದ ಮೊದಲನೇ ಟಸ್ಟ್‌ನಲ್ಲಿ ಇನಿಂಗ್ಸ್‌ ಹಾಗೂ 112 ರನ್‌ಗಳ ಭಾರೀ ಜಯ ಗಳಿಸಿರುವ ಗಂಗೂಲಿ ಬಳಗ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತದ ಅದ್ಭುತ ಪ್ರದರ್ಶನ ಮುಂದುವರಿದಂತಾಗಿದೆ.

ಮೂರನೇ ದಿನ (ಶುಕ್ರವಾರ)ದ ಕೊನೆಗೆ 1 ವಿಕೆಟ್‌ ನಷ್ಟಕ್ಕೆ 91 ರನ್‌ ಗಳಿಸಿ ಉತ್ತಮ ಹೋರಾಟದ ಸುಳಿವು ನೀಡಿದ್ದ ವಿಂಡೀಸ್‌ ಬ್ಯಾಟಿಂಗ್‌ ಪಡೆ, ಶನಿವಾರದ ಆಟದಲ್ಲಿ ಹರ್ಭಜನ್‌-ಕುಂಬ್ಳೆ ಸ್ಪಿನ್‌ ಸುಳಿಯಲ್ಲಿ ಕೊಚ್ಚಿ ಹೋಗಿ 188 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ತವರು ನೆಲದಲ್ಲಿ ಮತ್ತೆ ಲಯ ಕಂಡುಕೊಂಡ ಸ್ಪಿನ್‌ ದ್ವಯರ ಚೆಂಡುಗಳಿಗೆ ವಿಂಡೀಸ್‌ನ ಬ್ಯಾಟ್ಸ್‌ಮನ್‌ಗಳ ಬಳಿ ಉತ್ತರವಿರಲಿಲ್ಲ.

ಮೊದಲ ಇನಿಂಗ್ಸ್‌ನಲ್ಲಿ ನೆಲ ಕಚ್ಚಿ ಆಡಿದ್ದ ಶಿವನಾರಾಯಣ್‌ ಚಂದ್ರಪಾಲ್‌ ಎರಡನೇ ಇನಿಂಗ್ಸ್‌ನಲ್ಲೂ ಕೊಂಚ ಪ್ರತಿರೋಧ ತೋರಿಸಿದರು. ಹರ್ಭಜನ್‌ಸಿಂಗ್‌ 7 ವಿಕೆಟ್‌ ಪಡೆದರೆ, ಕುಂಬ್ಳೆ 3 ವಿಕೆಟ್‌ ಪಡೆದರು.

ಮೊದಲ ಪಾಳಿಯಲ್ಲಿ 147 ರನ್‌ ಚಚ್ಚಿದ ವೀರೇಂದ್ರ ಶೆಹ್ವಾಗ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್‌ :

ಭಾರತ :

ಮೊದಲನೇ ಇನಿಂಗ್ಸ್‌ - 457. ( ವೀರೇಂದ್ರ ಶೆಹ್ವಾಗ್‌ 147, ರಾಹುಲ್‌ ದ್ರಾವಿಡ್‌ 100, ಸಂಜಯ್‌ ಬಂಗಾರ್‌ 55. ಧಿಲ್ಲಾನ್‌ 54 ಕ್ಕೆ 3 ಮತ್ತು ನಾಗಮುತ್ತೂ 132 ಕ್ಕೆ 3)

ವೆಸ್ಟಿಂಡೀಸ್‌ :

ಮೊದಲನೇ ಇನಿಂಗ್ಸ್‌ - 157 (ಚಂದ್ರಪಾಲ್‌ 54, ಹೂಪರ್‌ 23. ಕುಂಬ್ಳೆ 51 ಕ್ಕೆ 4 ಹಾಗೂ ಜಹೀರ್‌ 41 ಕ್ಕೆ 4)

ಎರಡನೇ ಇನಿಂಗ್ಸ್‌ - 188 (ಚಂದ್ರಪಾಲ್‌ 36, ಕ್ರಿಸ್‌ ಗೆಯ್ಲ್‌ 42. ಹರ್ಭಜನ್‌ 48 ಕ್ಕೆ 7 ಮತ್ತು ಕುಂಬ್ಳೆ 50ಕ್ಕೆ 3)

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more