ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರಾಯಣಮೂರ್ತಿಗೆ

By Staff
|
Google Oneindia Kannada News

ಬೆಂಗಳೂರು : ಕಾರ್ಪೊರೇಟ್‌ ದಿಗ್ಗಜರ ಸಮ್ಮುಖದಲ್ಲಿ ಗುರುವಾರ ರಾತ್ರಿ ನಡೆದ ಸಮಾರಂಭದಲ್ಲಿ ಇನ್ಫೋಸಿಸ್‌ ಅಧ್ಯಕ್ಷ ಎನ್‌.ಆರ್‌.ನಾರಾಯಣ ಮೂರ್ತಿ ಅವರಿಗೆ 2002ನೇ ಇಸವಿಯ Ernst and Young India ಉದ್ಯಮಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಜೂನ್‌ 2003ರಂದು ಮಾಂಟೆ ಕಾರ್ಲೋದಲ್ಲಿ ನಡೆಯಲಿರುವ Ernst and Youngs ವರ್ಷದ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾರಾಯಣ ಮೂರ್ತಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅಷ್ಟೇ ಅಲ್ಲದೆ, ನವೆಂಬರ್‌ 21ರಿಂದ 24ನೇ ತಾರೀಖಿನವರೆಗೆ ಪಾಮ್‌ ಸ್ಪ್ರಿಂಗ್ಸ್‌ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿರುವ Ernst and Youngs ಅಂತರರಾಷ್ಟ್ರೀಯ ಸಮ್ಮೇಳನದಲ್ಲೂ ನಾರಾಯಣ ಮೂರ್ತಿ ಭಾಗವಹಿಸುವರು ಎಂದು ಸಮಾರಂಭದಲ್ಲಿ ಪ್ರಕಟಿಸಲಾಯಿತು.

ಕರ್ನಾಟಕದ ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್‌.ವಿ.ದೇಶಪಾಂಡೆ, ಮತ್ತು ಕೇಂದ್ರದ ಮಾಜಿ ಕಾನೂನು ಸಚಿವ ಅರುಣ್‌ ಜೈಟ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ನಾರಾಯಣ ಮೂರ್ತಿ- ‘ಇದು ನಮ್ಮ ಸಾಧನೆಗೆ ಸಂದಿರುವ ದೊಡ್ಡ ಉಡುಗೊರೆ. ಈ ಪ್ರಶಸ್ತಿಯನ್ನು 7 ಜನ ಸಹ ವ್ಯವಸ್ಥಾಪಕರು ಮತ್ತು ಕಂಪನಿಯ ನೌಕರರೊಡನೆ ಹಂಚಿಕೊಳ್ಳುತ್ತೇನೆ. ನಾನು ಸಮಾಜಕ್ಕೆ ಕೊಟ್ಟಿರುವುದಕ್ಕಿಂದ ಹೆಚ್ಚಾಗಿ ಸಮಾಜ ನನಗೆ ಕೊಟ್ಟಿದೆ’ ಎಂದು ಗದ್ಗದಿತರಾದರು.

ಬಜಾಜ್‌ ಆಟೋ ಲಿಮಿಟೆಡ್‌ನ ಅಧ್ಯಕ್ಷ ರಾಹುಲ್‌ ಬಜಾಜ್‌ ನೇತೃತ್ವದ ಸಮಿತಿಯು ಈ ಪ್ರಶಸ್ತಿಗೆ ನಾರಾಯಣ ಮೂರ್ತಿಯವರನ್ನು ಆರಿಸಿತು. 19 ಉದ್ಯಮಿಗಳು ಈ ಪ್ರಶಸ್ತಿಯ ಆಯ್ಕೆ ಪಟ್ಟಿಯಲ್ಲಿದ್ದರು. ಇನ್ನೂ 7 ಉದ್ಯಮಿಗಳಿಗೆ ವಿವಿಧ ವಿಭಾಗಗಳ ಪ್ರಶಸ್ತಿಗಳನ್ನು ಕೊಡಲಾಯಿತು.

ಅವರೆಂದರೆ-
ಜೀವನ ಸಾಧನೆಯ ಪ್ರಶಸ್ತಿ : ಎಂಆರ್‌ಎಫ್‌ ಲಿಮಿಟೆಡ್‌ನ ಕೆ.ಎಂ.ಮ್ಯಾಮೆನ್‌ ಮಾಪ್ಪಿಳ್ಳೈ
ವಿಶೇಷ ಸೇವೆ : ಅಮೆರಿಕಾದಲ್ಲಿ ಅಭ್ಯಾಸ ಮಾಡಿ ಬಂದಿರುವ ದೆಹಲಿಯ ಎಸ್ಕಾರ್ಟ್ಸ್‌ ಹಾರ್ಟ್‌ ಇನ್ಸ್‌ಟಿಟ್ಯೂಟ್‌ನ ಡಾ. ನರೇಶ್‌ ತ್ರೇಹಾನ್‌
ಉತ್ಪಾದನಾ ಪ್ರಶಸ್ತಿ : ಮೋಸೆರ್‌ ಬೇಯರ್‌ನ ರತುಲ್‌ ಪುರಿ
ವರ್ಷದ ಮೇನೇಜಿಂಗ್‌ ಎಂಟರ್‌ಪ್ರಿನರ್‌ : ಜಿಇ ಕ್ಯಾಪಿಟಲ್‌ ಇಂಡಿಯಾದ ಪ್ರಮೋದ್‌ ಭಾಸಿನ್‌
ಐಟಿ, ಸಂವಹನೆ ಮತ್ತು ಮನರಂಜನಾ ಉದ್ಯಮಿ : ಐ- ಫ್ಲೆಕ್ಸ್‌ನ ರಾಜೇಶ್‌ ಹುಕ್ಕು
ಆರೋಗ್ಯ ಮತ್ತು ಜೀವಿ ವಿಜ್ಞಾನ ಪ್ರಶಸ್ತಿ : ಬಯೋಕಾನ್‌ ಇಂಡಿಯಾ ಸಮೂಹದ ಕಿರಣ್‌ ಮಜುಂದಾರ್‌
ವರ್ಷದ ಹೊಸ ಉದ್ಯಮಿ ಪ್ರಶಸ್ತಿ : ದಕ್ಷ್‌ ಇ- ಸರ್ವಿಸಸ್‌ನ ಸಂಜೀವ್‌ ಅಗರ್ವಾಲ್‌.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X