ಅಮೆರಿಕನ್ ಸಚಿವರ ವಿರುದ್ಧ ಮುಂಬಯಿ ಮುಸ್ಲಿಮರಿಂದ ‘ಫತ್ವಾ’
ಮುಂಬಯಿ: ಅಮೆರಿಕನ್ ಸಚಿವರೊಬ್ಬರ ವಿರುದ್ಧ ಮುಂಬಯಿ ನಗರದ ಮುಸ್ಲಿಮರು ಫತ್ವಾ ಹೊರಡಿಸಿದ್ದಾರೆ. ಟೆಲಿವಿಶನ್ ಸಂದರ್ಶನವೊಂದರಲ್ಲಿ ಪ್ರವಾದಿಯ ಬಗ್ಗೆ ತುಚ್ಛ ಹೇಳಿಕೆ ನೀಡಿದರೆನ್ನಲಾದ ಅಮೆರಿಕದ ಬ್ಯಾಪ್ಟಿಸ್ಟ್ ಸಚಿವ ಚೆರ್ರಿ ಫಲ್ವೆಲ್ ವಿರುದ್ಧ ಫತ್ವಾ ಘೋಷಿಸಲಾಗಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವಿವಿಧ ಸಂಘಟನೆಗಳಿಗೆ ಸೇರಿದ ಉಲೇಮಾಗಳ ಪ್ರತಿನಿಧಿಗಳು ದಕ್ಷಿಣ ಮುಂಬಯಿಯ ಮಿನರಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಮೆರಿಕನ್ ಕಾನ್ಸುಲೇಟ್ವರೆಗೆ ಪ್ರತಿಭಟನಾ ಮೋರ್ಚಾ ನಡೆಸಲಾಗುವುದು ಎಂದರು.
ಸಚಿವ ಫಲ್ವೆಲ್ ತನ್ನ ಹೇಳಿಕೆಯಲ್ಲಿ ಧರ್ಮ ನಿಂದೆ ಮಾಡಿದ್ದು ಮುಂಬಯಿಯ ಉಲೇಮಾಗಳು ಅವರ ವಿರುದ್ಧ ಫತ್ವಾ ಹೊರಡಿಸುತ್ತಿದ್ದಾರೆ ಎಂದು ಒಂದೇ ವಾಕ್ಯದಲ್ಲಿ ನುಡಿದಿದ್ದಾರೆ.
ಹೀಗಾಗಿ ಅಮೆರಿಕ ಈ ಸಚಿವರ ವಿರುದ್ಧ ಆರೋಪವನ್ನು ದಾಖಲಿಸಿಕೊಳ್ಳಬೇಕು. ಅವರನ್ನು ಹುದ್ದೆ ಮತ್ತು ಖಾತೆಯಿಂದ ಹೊರಹಾಕಬೇಕು ಎಂದೂ ಮುಂಬಯಿ ಉಲೇಮಾಗಳು ಆಗ್ರಹಿಸಿದ್ದಾರೆ. ಈ ಹೇಳಿಕೆಯನ್ನು ಪ್ರತಿಭಟಿಸಿ ಮುಂಬಯಿನಲ್ಲಿ ಮುಸ್ಲಿಮರು ಬಂದ್ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಉಲೇಮಾಗಳು ಹೇಳಿದ್ದಾರೆ.
(ಇನ್ಫೋ ವಾರ್ತೆ)
ಫತ್ವಾ ಬಗ್ಗೆ ನೀವೇನು ಹೇಳ್ತೀರಿ ?
ಮುಖಪುಟ / ಇವತ್ತು... ಈ ಹೊತ್ತು...