• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ಐಟಿ.ಕಾಂ ಮೇಳದಲ್ಲಿ ಮಕ್ಕಳ ಜೊತೆ ಮಗುವಾಗಲಿರುವ ಕಲಾಂ

By Staff
|

*ದಟ್ಸ್‌ಕನ್ನಡ ಬ್ಯೂರೋ

Abdul Kalam to meet Bangalore studentsರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರಿಗೆ ಯಾವುದೇ ಕಾರ್ಯಕ್ರಮದ ಬುಲಾವು ಕೊಟ್ಟರೂ ಮೊದಲು ಕೇಳುವ ಪ್ರಶ್ನೆ- ‘ಅಲ್ಲಿಗೆ ಮಕ್ಕಳು ಬರ್ತಾರಾ?’

ಅವಿವಾಹಿತ ಕಲಾಂಗೆ ಮಕ್ಕಳು ಅಂದರೆ ಆರನೇ ಪ್ರಾಣ. ಅವರ ಮೂಡ್‌ ಕೆಟ್ಟಿದ್ದಾಗ ಮಕ್ಕಳ ವಿಚಾರ ಮಾತಾಡಿದರೆ ಸಾಕು, ನಕ್ಕು ನಲಿಯುತ್ತಾರೆ. ‘ಮಕ್ಕಳೇ ದೇಶದ ಮುಂದಿನ ಭವಿಷ್ಯ. ಅವರ ಜೊತೆ ನಾವು ಹೆಚ್ಚು ಕಾಲ ಕಳೆಯೋದರಲ್ಲಿ ಪೂರ್ಣ ಅರ್ಥವಿದೆ. ಅವರಲ್ಲಿ ಜ್ಞಾನ ತುಂಬಲು ಅವರೊಟ್ಟಿಗೆ ಆಟ ಆಡಿದರೂ ತಪ್ಪಿಲ್ಲ...’ ಹೀಗೇ ಗಂಟೆಗಟ್ಟಲೆ ಬೇಕಾದರೂ ಚಿಣ್ಣರ ಬಗ್ಗೆ ಕಲಾಂ ಮಾತಾಡುತ್ತಾರೆ. ಅದೇ ಖುಷಿಯಲ್ಲಿ ಕವನ ಬರೆದು, ಅದಕ್ಕೆ ಚೆಂದದ ಚಿತ್ರವನ್ನೂ ಬರೆಸಿ, ಕೃತಾರ್ಥ ನಗೆ ನಗುತ್ತಾರೆ !

ಮೊನ್ನೆ ಕರ್ನಾಟಕ ಐ.ಟಿ. ಸಚಿವಾಲಯದವರು ರಾಷ್ಟ್ರಪತಿ ಭವನಕ್ಕೆ ಹೋದಾಗಲೂ ಕಲಾಂ ಹಾಕಿದ ಷರತ್ತು ಮಕ್ಕಳ ಕುರಿತದ್ದು. ಅಕ್ಟೋಬರ್‌ 28ರಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ಐದು ದಿನಗಳ ಬೆಂಗಳೂರು ಐಟಿ ಡಾಟ್‌ ಕಾಂ ಮೇಳವನ್ನು ತಾವು ಉದ್ಘಾಟಿಸಬೇಕು ಎಂದು ಐಟಿ ಸಚಿವಾಲದವರು ಕಲಾಂರನ್ನು ಕೇಳಿಕೊಂಡರು. ‘ಮಕ್ಕಳ ಜೊತೆ ನನ್ನದೊಂದು ಸಂವಾದ ಕಾರ್ಯಕ್ರಮವನ್ನು ಮೇಳದಲ್ಲಿ ಆಯೋಜಿಸಿದರೆ ಮಾತ್ರ ನಾನು ಉದ್ಘಾಟಿಸುತ್ತೇನೆ’ ಎಂದು ಕಲಾಂ ಷರತ್ತು ಹಾಕಿದರು. ಸಚಿವಾಲಯದವರು ಒಪ್ಪಿಗೆ ಕೊಟ್ಟರು.

ಈಗ ಕರ್ನಾಟಕ ಮಾಹಿತಿ ತಂತ್ರಜ್ಞಾನ ಸಚಿವ ಡಿ.ಬಿ.ಇನಾಂದಾರ್‌ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಲಾಂ ತಾತ ಹಾಗೂ ಮಕ್ಕಳನ್ನು ಭೇಟಿ ಮಾಡಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಐಟಿ ಮೇಳದ ವೇಳೆ ಮಕ್ಕಳಿಗೆ ಸಂಬಂಧಪಟ್ಟ ಚಟುವಟಿಕೆಗಳು ನಡೆಯುವುದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲೇ. ಸಾವಿರಾರು ಮಕ್ಕಳಿಗೆ ಈ ಬಾರಿಯೂ ಇಂಟರ್ನೆಟ್‌ ಲೋಕದ ವಂಡರ್‌ಗಳನ್ನು ಮುಫತ್ತಾಗಿ ತೋರಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಮಕ್ಕಳ ಲೋಕದಲ್ಲಿ ಕಲಾಂ ತಾತನ ಉಪಸ್ಥಿತಿ ಮೇಳಕ್ಕೆ ಇನ್ನಷ್ಟು ಕಳೆ ಕೊಡಲಿದೆ.

ತಮ್ಮ ಷರತ್ತಿಗೆ ಐಟಿ ಸಚಿವಾಲಯ ಒಪ್ಪಿಗೆ ಸೂಚಿಸಿರುವುದರಿಂದ ‘ಜನ ಸಾಮಾನ್ಯನಿಗೆ ಮಾಹಿತಿ ತಂತ್ರಜ್ಞಾನ’ ಎಂಬ ಸಂಕಿರಣದಲ್ಲೂ ಭಾಗವಹಿಸಲು ಕಲಾಂ ಒಪ್ಪಿದ್ದಾರೆ. ಆದರೂ, ಅವರ ಮೆಚ್ಚಿನ ಕಾರ್ಯಕ್ರಮ ಮಕ್ಕಳ ಜೊತೆಗೆ ಕಾಲ ಕಳೆಯುವುದೇ ಆಗಿದೆ.

ನಿಮ್ಮ ಮಗುವನ್ನೂ ಕಲಾಂ ಜೊತೆ ಸಂವಾದಕ್ಕೆ ಕೂರಿಸಿ. ಅವನೊಳಗಿನ ವಿಜ್ಞಾನಿ ಎದ್ದರೂ ಏಳಬಹುದು !

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more