ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ಗೆ 6 ತಿಂಗಳಲ್ಲಿ 442.62 ಕೋಟಿ ರುಪಾಯಿ ಲಾಭ

By Staff
|
Google Oneindia Kannada News

ಬೆಂಗಳೂರು : ಸೆಪ್ಟೆಂಬರ್‌ 30, 2002ಕ್ಕೆ ಮುಗಿದ ಅರ್ಧ ವಿತ್ತ ವರ್ಷದಲ್ಲಿ ಸಾಫ್ಟ್‌ವೇರ್‌ ದಿಗ್ಗಜ ಇನ್ಫೋಸಿಸ್‌ 442.62 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.

ಕಂಪನಿಯ ಸಿಇಓ ಮತ್ತು ಮೇನೇಜಿಂಗ್‌ ಡೈರೆಕ್ಟರ್‌ ನಂದನ್‌ ನೀಲೇಕಣಿ ಗುರುವಾರ ಸುದ್ದಿಗಾರರಿಗೆ ಇನ್ಫೋಸಿಸ್‌ನ ಅರ್ಧ ವಾರ್ಷಿಕ ವಿತ್ತ ವರದಿಯನ್ನು ಪ್ರಕಟಿಸಿದರು. ಸೆಪ್ಟೆಂಬರ್‌ 30ಕ್ಕೆ ಕೊನೆಗೊಂಡಂತೆ ಎರಡನೇ ತ್ರೆೃಮಾಸಿಕದಲ್ಲಿ ಕಂಪನಿಯ ಲಾಭ 12.01 ಪ್ರತಿಶತ ಹೆಚ್ಚಾಗಿದೆ. ನಿವ್ವಳ ಆದಾಯ 225.77 ಕೋಟಿ ರುಪಾಯಿಯಷ್ಟು ದಾಖಲಾಗಿದೆ.

ಡಿಸೆಂಬರ್‌ 2002ನೇ ಇಸವಿಗೆ ಮುಗಿಯಲಿರುವ ವಿತ್ತ ವರ್ಷದಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ಸೇವೆಗಳಿಂದಲೇ 890 ರಿಂದ 904 ಕೋಟಿ ರುಪಾಯಿಯಷ್ಟು ವಹಿವಾಟು ನಡೆಸುವ ಗುರಿಯನ್ನು ಕಂಪನಿ ಹೊಂದಿದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಕಂಪನಿ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದೆ ಎಂದು ನೀಲೇಕಣಿ ಹೇಳಿದರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X