ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.15, 2003ರಿಂದ ಬೆಂಗಳೂರಲ್ಲಿ ಅಂತರರಾಷ್ಟ್ರೀಯ ಬಯೋ ಮೇಳ

By Staff
|
Google Oneindia Kannada News

ಬೆಂಗಳೂರು : ಮೂರನೆಯ ಅಂತರರಾಷ್ಟ್ರೀಯ ಬಯೋಟೆಕ್‌ ಮೇಳ ಏಪ್ರಿಲ್‌ ತಿಂಗಳಿನಲ್ಲಿ ನಡೆಯಲಿದೆ.

ಬಯೋ -2003 ಮೇಳವು ಏಪ್ರಿಲನ 15ರಿಂದ 17ರವರೆಗೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿದ್ದು ವಿಷನ್‌ ಗ್ರೂಪ್‌ ಈ ಮೇಳವನ್ನು ಆಯೋಜಿಸುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಡಿ. ಬಿ. ಇನಾಂದಾರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಮೇಳದಲ್ಲಿ ಸುಮಾರು 18 ದೇಶಗಳ 200 ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಹಾಗೂ 9 ದೇಶದ ವಿಶೇಷ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈಗಾಗಲೇ ಡೆನ್ಮಾರ್ಕ್‌, ಫ್ರಾನ್ಸ್‌ ಹಾಗೂ ಜಪಾನ್‌ ದೇಶಗಳು ಮೇಳದಲ್ಲಿ ಭಾಗವಹಿಸುವುದನ್ನು ಖಚಿತಗೊಳಿಸಿವೆ. ಬಯೋ-2003 ಬಗ್ಗೆ ಇನ್ನಷ್ಟು ಮಾಹಿತಿಗೆ ರೂಪಿಸಲಾಗಿರುವ ಹೊಸ ವೆಬ್‌ಸೈಟ್‌: http://www.bangalorebio2003.com/

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X