ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮುಂದಿನ ಪ್ರಧಾನಿ ಸೋನಿಯಾ : ಕೃಷ್ಣ ಭವಿಷ್ಯವಾಣಿ

By Staff
|
Google Oneindia Kannada News

ಬೆಂಗಳೂರು : ಜಯಲಲಿತಾ ತಗಾದೆಯಿಂದ ಸೋನಿಯಾ ಗಾಂಧಿ ಅವರ ಕೂದಲೂ ಕೊಂಕುವುದಿಲ್ಲ. ಭಾರತದ ಮುಂದಿನ ಪ್ರಧಾನಿ ಸೋನಿಯಾ ಗಾಂಧಿ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಭವಿಷ್ಯ ವಾಣಿ ನುಡಿದಿದ್ದಾರೆ.

ರಾಮನಗರದಿಂದ ಚನ್ನಪಟ್ಟಣದತ್ತ ಬುಧವಾರ ಪಾದಯಾತ್ರೆ ಮುಂದುವರೆಸಿದ ಕೃಷ್ಣ ವಿಶೇಷ ಸಂದರ್ಶನದಲ್ಲಿ ಈ ಮಾತು ಹೇಳಿದರು. ಚುನಾವಣೆಗಳು ನಡೆಯುತ್ತಲೇ ಇವೆ. ಪ್ರತಿ ಚುನಾವಣೆಯಲ್ಲೂ ಸೋನಿಯಾ ಅವರ ವಿದೇಶೀ ಮೂಲದ ಪ್ರಸ್ತಾಪವಾಗುತ್ತದೆ. ತಕರಾರುಗಳೆಲ್ಲಾ ಕೊನೆಗೆ ಠುಸ್ಸಾಗುತ್ತವೆ. ಇದನ್ನು ವರ್ಷಗಳಿಂದ ನೋಡುತ್ತಿದ್ದೇವೆ. ಇಂದಿರಾಗಾಂಧಿ ಮತ್ತು ರಾಜೀವ್‌ ಗಾಂಧಿಯವರ ಆದರ್ಶಗಳಿಗೆ ಕಸುವು ತುಂಬುವ ಕೆಲಸವನ್ನು ಸೋನಿಯಾ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್‌ನ ಜಂಘಾಬಲ ಎಂದು ಕೃಷ್ಣ ಬಾಯಿತುಂಬಾ ಹೊಗಳಿದರು.

ಕೃಷ್ಣ ಸಂದರ್ಶನದ ಸಾರ

  • ಮುಂದಿನ ಚುನಾವಣೆಗಳಲ್ಲಿ ಸೋನಿಯಾ ಗಾಂಧಿಯವರೇ ಕಾಂಗ್ರೆಸ್‌ನ ಮುಂದಾಳು. ಅವರ ನೇತೃತ್ವದ ಭಾರತ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯಬೇಕೆಂಬುದು ನಮ್ಮ ಕನಸು.
  • ಪ್ರಿಯಾಂಕ ಹಾಗೂ ರಾಹುಲ್‌ ಗಾಂಧಿ ಕಾಂಗ್ರೆಸ್‌ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರೆ, ಪಕ್ಷದ ಬಲ ಖಂಡಿತ ಹೆಚ್ಚಾಗುತ್ತದೆ. ರಾಜಕೀಯದಲ್ಲಿ ತೊಡಗಿಕೊಳ್ಳುವುದು ಅವರ ಆಯ್ಕೆಗೆ ಬಿಟ್ಟ ವಿಚಾರ.
  • ಇನ್ನೆರಡು ವರ್ಷದ ನಂತರ ಲೋಕಸಭಾ ಚುನಾವಣೆ ಬರುತ್ತದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಬಣ್ಣ ಅಷ್ಟರಲ್ಲಿ ಸಾಕಷ್ಟು ಬಯಲಾಗಿರುತ್ತದೆ. ಹೀಗಾಗಿ ಬಿಜೆಪಿ ರಹಿತ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ನಿಚ್ಚಳವಾಗಿರುತ್ತದೆ. ಅದು ಕಾಂಗ್ರೆಸ್‌ಗೆ ಒಳ್ಳೆಯ ಸಮಯವಾಗಬಹುದು.
  • ಮೈತ್ರಿಕೂಟದ ಸರ್ಕಾರ ನಡೆಸುವುದು ಬಲು ತ್ರಾಸದ ಕೆಲಸ. ಅಸಂಖ್ಯ ವಿವಾದಗಳು ಹುಟ್ಟಿಕೊಳ್ಳುತ್ತವೆ.
  • ದೇಶದಲ್ಲಿ ವಿವಾದಾತ್ಮಕ ಚರ್ಚೆಗಳ ಹೊರತು ಬೇರಾವ ಜನೋಪಯೋಗಿ ಕೆಲಸಗಳು ಆಗುತ್ತಿಲ್ಲ.
ಅಂದಹಾಗೆ, ಅಕ್ಟೋಬರ್‌ 11, ಶುಕ್ರವಾರಕ್ಕೆ ಸರಿಯಾಗಿ ಕೃಷ್ಣ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ 3 ವರ್ಷ ತುಂಬುತ್ತದೆ.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X