ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೈದು ವರ್ಷದಲ್ಲಿ ಚುನಾವಣಾರಾಜಕೀಯದಿಂದ ಕೃಷ್ಣ ನಿವೃತ್ತಿ ?

By Staff
|
Google Oneindia Kannada News

*ರಾಮ್‌ನಾಥ್‌ ಶಣೈ

ಬೆಂಗಳೂರು: ಇನ್ನೆರಡು ಅಥವಾ ಐದು ವರ್ಷಗಳ ಬಳಿಕ ಚುನಾವಣಾ ರಾಜಕೀಯವನ್ನು ತೊರೆದು ರಾಜಕೀಯ ಸಲಹಾಕಾರರಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವುದಾಗಿ ಬುಧವಾರ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಸೂಚ್ಯವಾಗಿ ಹೇಳಿದ್ದಾರೆ.

ಇನ್ನೆಷ್ಟು ವರ್ಷಗಳ ಕಾಲ ನೀವು ರಾಜಕೀಯ ಕ್ಷೇತ್ರದಲ್ಲಿ ಇರುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಕೃಷ್ಣ, ನಾವು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುತ್ತೇನೆ. ಆದರೆ ಚುನಾವಣಾ ರಾಜಕೀಯದಲ್ಲಿ ಇನ್ನೆಷ್ಟು ವರ್ಷ ಇರಬಲ್ಲೆ ಎಂದು ಹೇಳಲಿಕ್ಕಾಗದು ಎಂದರು. ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಮೂರು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ 70ರ ಹರೆಯದ ಕೃಷ್ಣ ತಮ್ಮ ಚುನಾವಣಾ ರಾಜಕೀಯ ನಿವೃತ್ತಿಯ ಬಗ್ಗೆ ಹೆಚ್ಚು ವಿವರಿಸುವುದಕ್ಕೆ ನಿರಾಕರಿಸಿದರು.

ನಾನು ಸಾರ್ವಜನಿಕ ಕ್ಷೇತ್ರದಲ್ಲಿರುತ್ತೇನೆ. ಹಾಗೆಂದ ತಕ್ಷಣ ನಾನು ಚುನಾವಣಾ ರಾಜಕೀಯದಲ್ಲೂ ಇರುತ್ತೇನೆ ಎಂದೇನಲ್ಲ...ಇಷ್ಟು ಮಾತ್ರ ಹೇಳಬಲ್ಲೆ. ನೀವು ಇದನ್ನು ಹೇಗೆ ಬೇಕಿದ್ದರೂ ಊಹಿಸಿಕೊಳ್ಳಬಹುದು ಎಂದು ಕೃಷ್ಣ ಬಿಗುವಾಗಿ ಹೇಳಿದರು. ಹಾಗಾದರೆ ಇನ್ನೆರಡು ವರ್ಷಗಳಲ್ಲಿ ಎದುರಾಗುವ ಅಸೆಂಬ್ಲಿ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲವೆ ಎಂಬ ಪ್ರಶ್ನೆಗೆ, ಇನ್ನೆರಡು ವರ್ಷದಲ್ಲೇ ಚುನಾವಣಾ ರಾಜಕೀಯದಿಂದ ದೂರ ಸರಿಯುತ್ತೇನೆ ಎಂದು ಹೇಳಲಾರೆ. ಆದರೆ ಐದು ವರ್ಷಗಳ ನಂತರ ಮುಂದುವರೆಯುವ ಇಚ್ಛೆ ಇಲ್ಲ.

ರಾಜಕೀಯ ನಿವೃತ್ತಿ ಎಂಬ ಪರಿಕಲ್ಪನೆಯ ಬಗ್ಗೆ ಮಾತು ತಿರುಗಿತು. ‘ರಾಜಕೀಯ ವ್ಯಕ್ತಿಗಳೂ ನಿರ್ದಿಷ್ಟ ವಯಸ್ಸಿನ ಬಳಿಕ ನಿವೃತ್ತಿ ಹೊಂದಬೇಕು. ಈ ಬಗ್ಗೆ ನಾನು ಚಿಂತಿಸುತ್ತಿದ್ದೇನೆ. 75 ವರ್ಷಕ್ಕೇ ರಾಜಕಾರಣಿಯಾಬ್ಬ ನಿವೃತ್ತಿ ಹೊಂದಬೇಕು ಅಂತ ನನಗನಿಸುತ್ತದೆ. ಆಮೇಲೆ ರಾಜಕೀಯ ಸಲಹೆಗಳನ್ನು ನೀಡುತ್ತ ಅವರು ಸಾರ್ವಜನಿಕ ಕ್ಷೇತ್ರದಲ್ಲಿರಬಹುದಲ್ಲ...? ನಾನಂತೂ ಯಾರಾದರೂ ಸಲಹೆ ಕೇಳಿದರೆ ನೀಡುವುದಕ್ಕೆ ಸಿದ್ಧ’ ಎಂದು ಕೃಷ್ಣ ಹೇಳಿದರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X