ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೃಂಗೇರಿಯಲ್ಲಿ ಶಾರದಾಂಬೆಗೆ ನವರಾತ್ರಿ ವಿಶೇಷಪೂಜೆ

By Staff
|
Google Oneindia Kannada News

Sringeri Sharadambeಶೃಂಗೇರಿ : ತುಂಗಾತೀರ ವಿಹಾರಿಣೀ ಶಾರದಾಂಬೆ ದೇವಳದಲ್ಲಿ ದಸರೆಯ ಸಂಭ್ರಮ ಆಗಲೇ ಶುರುವಾಗಿದೆ. ಹತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಉತ್ಸವಗಳಿಗೆ ಸೋಮವಾರ ಬೆಳಗ್ಗೆ ಚಾಲನೆ ದೊರೆತಿದೆ.

ದಸರಾ ಮಹೋತ್ಸವದ ಅಂಗವಾಗಿ ಹತ್ತು ದಿನಗಳ ಕಾಲ ನಡೆಯುವ ಶಾರದಾಂಬೆಯ ವಿವಿಧ ಅಲಂಕಾರ, ಶೃಂಗೇರಿ ಜಗದ್ಗುರುಗಳ ಸಾಂಪ್ರದಾಯಿಕ ರಾಜ ದರ್ಬಾರು, ಹೋಮ ಮತ್ತು ಪಾರಾಯಣಗಳಲ್ಲಿ ಭಾಗವಹಿಸಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಶೃಂಗೇರಿಗೆ ಆಗಮಿಸುತ್ತಿದ್ದಾರೆ.

ಪ್ರತಿ ವರ್ಷದಂತೆಯೇ ಈ ವರ್ಷವೂ ಸಹ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿ ನೇತೃತ್ವದಲ್ಲಿ ನವರಾತ್ರಿ ಉತ್ಸವಗಳು ನಡೆಯುತ್ತವೆ. ಹತ್ತು ದಿನಗಳ ಅವಧಿಯಲ್ಲಿ ಪ್ರತಿ ಮಧ್ಯಾಹ್ನ 12ರಿಂದ 12. 30ರವರೆಗೆ ಶ್ರೀ ಜಗದ್ಗುರು ಮಹಾಸ್ವಾಮಿ ಶಾರಾದಾಂಬೆಗೆ ವಿಶೇಷ ಪೂಜೆಯನ್ನು ಮಾಡುವರು.

ನವರಾತ್ರಿಯ ಅಂಗವಾಗಿ ದೇವಿಗೆ ಲಕ್ಷಾರ್ಚನೆ, ಸುಪ್ರಭಾತ ಸೇವೆ, ಸುವರ್ಣ ಪುಷ್ಪ ಸೇವೆ, ಉದಯಾಸ್ತಮಾನ ಪೂಜೆ ಇತ್ಯಾದಿಗಳನ್ನು ವಿಶೇಷವಾಗಿ ನಡೆಸಲಾಗುವುದು ಎಂದು ದೇವಳದ ಪ್ರಕಟಣೆ ತಿಳಿಸಿದೆ. ಭಕ್ತಾದಿಗಳು ಯಾವುದೇ ಸೇವೆಯನ್ನು ಮಾಡಬೇಕಿದ್ದಲ್ಲಿ ಸಂಪರ್ಕಿಸಬೇಕಾದ ವಿಳಾಸ : ಆಡಳಿತಾಧಿಕಾರಿಗಳು, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ, ಶೃಂಗೇರಿ- 577 139.

ದೂರವಾಣಿ : 91- 826-550123, ಫ್ಯಾಕ್ಸ್‌ : 91-826-550792. ಹೆಚ್ಚಿನ ಮಾಹಿತಿಗೆ : ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X