ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅನನ್ಯ ಶಾಲಾ ಟರ್ಫ್‌ ಕ್ರಿಕೆಟ್‌ ಕಣ ಬೆಂಗಳೂರಲ್ಲಿ

By Staff
|
Google Oneindia Kannada News

*ಡಿ.ರಾಮರಾಜ್‌

ಬೆಂಗಳೂರು : ‘ನಾನು ಮತ್ತೆ ಹುಡುಗನಾಗಿ, ಈ ಸ್ಕೂಲಿಗೆ ಸೇರಿ, ಈ ಸುಂದರವಾದ ಹಸುರು ಹುಲ್ಲಿನ ಕಣದಲ್ಲಿ ಕ್ರಿಕೆಟ್‌ ಆಡೋಣ ಅನ್ನಿಸುತ್ತಿದೆ’.

ಬೆಂಗಳೂರಿಂದ ಕನಕಪುರಕ್ಕೆ ಹೋಗುವ ರಸ್ತೆಯ ಹಾರೋಹಳ್ಳಿ ಹತ್ತಿರ ಇರುವ ಜೈನ್‌ ಇಂಟರ್‌ನ್ಯಾಷನಲ್‌ ರೆಸಿಡೆನ್ಸ್‌ ಸ್ಕೂಲ್‌ (ಜೆಐಆರ್‌ಎಸ್‌) ನ ಟರ್ಫ್‌ ಕ್ರಿಕೆಟ್‌ ಮೈದಾನವನ್ನು ಉದ್ಘಾಟಿಸಿದ ಭಾರತೀಯ ಕ್ರಿಕೆಟ್‌ನ ಹಿರಿಯ ಲಿಟ್ಲ್‌ ಮಾಸ್ಟರ್‌ ಜಿ.ಆರ್‌.ವಿಶ್ವನಾಥ್‌ ಸೋಮವಾರ ಆಡಿದ ಮಾತಿದು. 150 ಎಕರೆಯಷ್ಟು ವಿಶಾಲ ಜಾಗೆಯ ಮಧ್ಯಭಾಗದಲ್ಲಿ ಈ ಸುಂದರ ಹಸುರು ಕ್ರಿಕೆಟ್‌ ಕಣವಿದೆ. ಇದನ್ನು ಕಂಡ ವಿಶ್ವನಾಥ್‌ ಆನಂದಕ್ಕೆ ಎಣೆಯೇ ಇರಲಿಲ್ಲ. ಮತ್ತೆ ಬ್ಯಾಟ್‌ ಹಿಡಿದು ಈಗಲೇ ಆಡಿ ತೀರುವೆನೆಂಬ ಹುಮ್ಮಸ್ಸು !

ಕಣ ಖಂಡಿತ ಅಷ್ಟು ಹಸನಾಗಿದೆ. ಅದಕ್ಕೇ ಜೈನ್‌ ಗ್ರೂಪ್‌ ಅಧ್ಯಕ್ಷ ಆರ್‌.ಚೆನ್ನರಾಜ್‌ ಜೈನ್‌, ಇಂಥಾ ಶಾಲಾ ಕ್ರಿಕೆಟ್‌ ಮೈದಾನ ಭಾರತದಲ್ಲಿಯೇ ಮೊದಲನೆಯದು ಎಂದು ಹೇಳಿಕೊಂಡದ್ದು. ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸಲು ಕ್ರೀಡೆ ನೆರವಾಗುತ್ತದೆ. ಅದಕ್ಕೇ ಪ್ರತಿಯಾಬ್ಬ ವಿದ್ಯಾರ್ಥಿಯಲ್ಲಿ ಕ್ರೀಡಾಕಾಂಕ್ಷೆ ಬಿತ್ತುತ್ತಿದ್ದೇವೆ ಎಂದರು ಜೈನ್‌.

ಕಣವನ್ನು ಬಾಯಿತುಂಬಾ ಹೊಗಳಿದ ಕರ್ನಾಟಕ ರಾಜ್ಯ ಕ್ರಿಕೆಟ್‌ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮ್‌ಪ್ರಸಾದ್‌, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಾರರನ್ನು ಕರೆಸಿ ಈ ಮೈದಾನದಲ್ಲಿ ಕ್ರಿಕೆಟ್ಟನ್ನು ಬೆಳೆಸುವುದಾಗಿ ಭರವಸೆ ಕೊಟ್ಟರು.

ನಾನು ಭಾರತ ಮತ್ತು ಆಸ್ಟ್ರೇಲಿಯಾ ಮೇಲೆ ಬೆಟ್ಟಿಂಗ್‌ ಕಟ್ಟುತ್ತೇನೆ- ವಿಶ್ವನಾಥ್‌
2003ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ನನ್ನ ಫೇವರೇಟ್ಸ್‌ ಭಾರತ ಮತ್ತು ಆಸ್ಟ್ರೇಲಿಯಾ. ಆಸ್ಟ್ರೇಲಿಯಾ ಕ್ರಿಕೆಟ್ಟಿನ ಎಲ್ಲಾ ವಿಭಾಗಗಳಲ್ಲಿ ಅಪ್ರತಿಮ ತಂಡ. ಭಾರತಕ್ಕೆ ಐದನೇ ಬೌಲರ್‌ನ ಕೊರತೆಯಿದೆ. ಶ್ರೀನಾಥ್‌ ಅದನ್ನು ತುಂಬಬಲ್ಲರು. ಶೆವಾಗ್‌, ಸಚಿನ್‌ ಅಥವಾ ಗಂಗೂಲಿಯಿಂದ ಪೂರ್ಣ ಪ್ರಮಾಣದ ಬೌಲಿಂಗ್‌ ನಿರೀಕ್ಷೆ ಕಷ್ಟ. ರಾಹುಲ್‌ ದ್ರಾವಿಡ್‌ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌. ಅವರಿಂದ ವಿಕೆಟ್‌ ಕೀಪಿಂಗ್‌ ಮಾಡಿಸುತ್ತಿರುವುದು ನನಗಿಷ್ಟವಿಲ್ಲ

-ದಟ್ಸ್‌ಕನ್ನಡ ಡಾಟ್‌ ಕಾಂಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಜಿ.ಆರ್‌.ವಿಶ್ವನಾಥ್‌ ಹೇಳಿದ ಮಾತುಗಳಿವು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X