ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಭವಕ್ಕೆ ತಿಲಾಂಜಲಿ, ಸಿಎನ್ನಾರ್‌ ರಾವ್‌ರಿಂದ ಸರಳದಸರೆಗೆ ಚಾಲನೆ

By Staff
|
Google Oneindia Kannada News

ಮೈಸೂರು: ವಿಜ್ಞಾನಿ ಡಾ. ಸಿ. ಎನ್‌. ಆರ್‌. ರಾವ್‌ ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ಮೈಸೂರು ದಸರಾವನ್ನು ಸೋಮವಾರ ಮುಂಜಾನೆ ಉದ್ಘಾಟಿಸಿದರು.

ಕಾವೇರಿ ವಿವಾದ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿಗಳಿಗೆ ಮಾತ್ರ ಸೀಮಿತವಾದ ದಸರಾ ಹಬ್ಬ ಯಾವುದೇ ಆಡಂಬರ, ಗದ್ದಲಗಳಿಲ್ಲದೆಯೇ ಆರಂಭಗೊಂಡಿತು. ಚಾಮುಂಡೇಶ್ವರಿ ದೇವಿಯ ಪೂಜಾ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ವಿಶ್ವನಾಥ್‌, ಸಂಸತ್‌ ಸದಸ್ಯ ಹಾಗೂ ಮೈಸೂರು ಒಡೆಯರ್‌ ಮನೆತನದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ಪಾಲ್ಗೊಂಡಿದ್ದರು.

ಪರಂಪರಾನುಗತವಾಗಿ ಬಂದ ಜಂಬೂ ಸವಾರಿಯನ್ನು ನಿಷೇಧಿಸುವ ಬದಲಿಗೆ ಸಾಂಕೇತಿಕವಾಗಿ ಅರಮನೆಯ ಆವರಣದೊಳಗೇ ನಡೆಸಲು ಸರಕಾರ ನಿರ್ಧರಸಿದೆ. ಭಾನುವಾರ ಸಂಜೆ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಲಲಾಯಿತು.

ಅಕ್ಟೋಬರ್‌ 15ರಂದು ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಮೆರವಣಿಗೆಯನ್ನು ಉದ್ಘಾಟಿಸಲು ಮುಖ್ಯಮಂತ್ರಿ ಎಸ್‌. ಎಂ.ಕೃಷ್ಣ ರನ್ನು ಆಹ್ವಾನಿಸಲಾಗಿದೆ ಎಂದು ಸಭೆಯ ನಂತರದ ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್‌ ತಿಳಿಸಿದರು.

ದಸರೆ ಟೈಂ ಟೇಬಲ್‌ 2002 :
ಅ.07- ಪಾಡ್ಯ, ನವರಾತ್ರಾರಂಭ, ಚಂದ್ರದರ್ಶನಂ
ಅ.10- ಲಲಿತಾ ಪಂಚಮೀ
ಅ. 12- ವ್ಯಾಸ ಪ್ರತಿಷ್ಠಾ ,ಶಾರದಾ ಪೂಜಾರಂಭ
ಅ. 13- ದುರ್ಗಾಷ್ಟಮೀ, ಆಯುಧ ಪೂಜಾ
ಅ. 14- ಮಹಾನವಮೀ (ನವಮೀ ತಿಥಿ-44 ಘಳಿಗೆ)
ಅ. 15 - ವಿಜಯ ದಶಮೀ ಶಮೀ ಪೂಜಾ, ದೇವೀ ವಿಸರ್ಜನಂ, ವ್ಯಾಸ ವಿಸರ್ಜನಂ

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X