• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ದೇವಸ್ಥಾನದ ಅರ್ಚಕರು ಬ್ರಾಹ್ಮಣ ಜಾತಿಯವರೇ ಆಗಬೇಕಿಲ್ಲ’

By Staff
|

ನವದೆಹಲಿ : ಮಂದಿರಗಳಲ್ಲಿ ಪೂಜೆಯ ನೇತೃತ್ವ ವಹಿಸುವುದು ಕೇವಲ ಬ್ರಾಹ್ಮಣರ ಏಕ ಸ್ವಾಮ್ಯ ಅಲ್ಲ ಎಂದು ಸುಪ್ರಿಂ ಕೋರ್ಟ್‌ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ದೊರೆಸ್ವಾಮಿ ರಾಜು ಮತ್ತು ಎಸ್‌. ರಾಜೇಂದ್ರಬಾಬು ನೇತೃತ್ವದ ಪೀಠ ಈ ತೀರ್ಪು ನೀಡಿದೆ. ಸೂಕ್ತ ತರಬೇತಿ ಪಡೆದ ಹಾಗೂ ಆಚಾರ ಸಂಪ್ರದಾಯಗಳನ್ನು ತಿಳಿದಿರುವ ಯಾವನೇ ಬ್ರಾಹ್ಮಣೇತರ ವ್ಯಕ್ತಿ ಅರ್ಚಕನಾಗಬಹುದು. ನಿರ್ದಿಷ್ಟ ದೇವರ ಪ್ರಾರ್ಥನೆಗೆ ಪೂರಕವಾದ ರೀತಿಯಲ್ಲಿ ಪೂಜೆ ಸಲ್ಲಿಸುವ ತರಬೇತಿ ಮತ್ತು ಪರಿಣತಿ ಹೊಂದಿದ್ದರೆ ಆತನನ್ನು ಜಾತಿಯ ಪರಿಗಣನೆ ಇಲ್ಲದೆಯೇ ಅರ್ಚಕನಾಗಿ ನೇಮಿಸಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಎರ್ನಾಕುಳಂನ ಅಲಂಗಾಡ್‌ ಗ್ರಾಮದ ಕೊಂಗೊಪಿಳ್ಳಿ ನೀರಿಕೊಡೆ ಶಿವ ದೇವಾಲಯಕ್ಕೆ ಬ್ರಾಹ್ಮಣೇತರ ವ್ಯಕ್ತಿಯನ್ನು ಪೂಜಾರಿಯನ್ನಾಗಿ ನೇಮಿಸಿದ ಕ್ರಮವನ್ನು ಬೆಂಬಲಿಸುತ್ತ ಕೋರ್ಟ್‌ ಈ ತೀರ್ಪು ನೀಡಿದೆ. ಅರ್ಚಕನಾದವನು, ಗರ್ಭಗುಡಿಯನ್ನು ಪ್ರವೇಶಿಸಿ, ದೇವರ ಮೂರ್ತಿಯನ್ನು ಮುಟ್ಟಬೇಕಾದುದು ಅನಿವಾರ್ಯ. ಆದ್ದರಿಂದ ಆತನಿಗೆ ಸೂಕ್ತ ತರಬೇತಿ ಅಗತ್ಯ. ತಲೆ ತಲಾಂತರದಿಂದ ದೇವಸ್ಥಾನವೊಂದಕ್ಕೆ ಬ್ರಾಹ್ಮಣನೇ ಅರ್ಚಕನಾಗಿದ್ದ ಎಂದರೆ ಬ್ರಾಹ್ಮಣೇತರರನ್ನು ಅದರಿಂದ ತಡೆಯಲಾಗಿತ್ತು ಎಂದರ್ಥವಲ್ಲ ಎಂದು ಕೋರ್ಟ್‌ ಹೇಳಿದೆ.

(ಇನ್ಫೋ ವಾರ್ತೆ)

ನೀವೇನು ಹೇಳುತ್ತೀರಿ ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X