ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿಯಾಚೆಗಿನ ಕನ್ನಡಿಗರ ಮಾಹಿತಿಗೆ ಹೊರನಾಡ ಸಂಗಾತಿ ಹೊಸ ಆವೃತ್ತಿ

By Staff
|
Google Oneindia Kannada News

ಬೆಂಗಳೂರು : ಗಡಿಯಾಚೆಗೆ ನೆಲೆಸಿರುವ ಕನ್ನಡಿಗರ ಡೈರೆಕ್ಟರಿ ‘ಹೊರನಾಡ ಸಂಗಾತಿಯ 2002-03’ ನೇ ಇಸವಿಯ ಆವೃತ್ತಿ ಮುಂದಿನ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಡೈರೆಕ್ಟರಿಯ ಸಂಪಾದಕ ಹಾಗೂ ಮುಂಬಯಿನ ಕನಕ ಮೀಡಿಯಾ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ ಪ್ರಸಾದ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಇದು ಡೈರೆಕ್ಟರಿಯ ಎರಡನೇ ಆವೃತ್ತಿ. ರಾಜ್ಯದಿಂದ ಹೊರಗೆ ವಾಸಿಸುತ್ತಿರುವ ಸುಮಾರು 10 ಮಿಲಿಯನ್‌ ಕನ್ನಡಿಗಕರ ಮಾಹಿತಿಯನ್ನು ಒಂದೆಡೆ ಕಲೆ ಹಾಕುವ ಪ್ರಯತ್ನ ಇದು ಎಂದು ನಾರಾಯಣ ಪ್ರಸಾದ್‌ ಹೇಳಿದರು.

ವಿಶ್ವದಾದ್ಯಂತ ಈ ಡೈರೆಕ್ಟರಿಯ ಸುಮಾರು 50 ಸಾವಿರ ಪ್ರತಿಗಳನ್ನು ಮಾರಾಟ ಮಾಡುವ ಉದ್ದೇಶವಿದೆ. ಸಾರ್ವಜನಿಕ ಗ್ರಂಥಾಲಯಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸರಕಾರಿ ಕಚೇರಿಗಳಲ್ಲಿಯೂ ಈ ಡೈರೆಕ್ಟರಿಯ ಪ್ರತಿ ದೊರೆಯುವಂತೆ ನೋಡಿಕೊಳ್ಳಲಾಗುವುದು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಪುಸ್ತಕ ಪ್ರಕಾಶನದ ಹೊಣೆ ಹೊತ್ತ ಕನಕ ಮೀಡಿಯಾ ಲಿಮಿಟೆಡ್‌ ಅನ್ನು ಸಂಪರ್ಕಿಸಬಹುದು. ದೂರವಾಣಿ : 022- 4044009/4044112.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X