• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಮಿಳ್ನಾಡಿಗೆ ನಿತ್ಯ ನೀರು ಬಿಡುವಂತೆ ಸುಪ್ರಿಂಕೋರ್ಟ್‌ ಆದೇಶ

By Staff
|

ನವದೆಹಲಿ : ಕಾವೇರಿ ನದಿ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 9 ಸಾವಿರ ಕ್ಯೂಸೆಕ್ಸ್‌ ನೀರು ಬಿಡಬೇಕೆಂದು ಕರ್ನಾಟಕ ಸರ್ಕಾರಕ್ಕೆ ಸುಪ್ರಿಂಕೋರ್ಟ್‌ ಆದೇಶಿಸಿದೆ.

ಕರ್ನಾಟಕದ ವಿರುದ್ಧ ತಮಿಳುನಾಡಿನ ನ್ಯಾಯಾಲಯ ನಿಂದನೆ ಅರ್ಜಿ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡ ಅಪೆಕ್ಸ್‌ ಕೋರ್ಟಿನ ಮೂವರು ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಪೀಠ, ವಿಚಾರಣೆಯನ್ನು ಅಕ್ಟೋಬರ್‌ 24ಕ್ಕೆ ಮುಂದೂಡಿತು. ತ್ರಿಸದಸ್ಯ ಪೀಠದ ಮುಖ್ಯಸ್ಥರಾದ ಮುಖ್ಯ ನ್ಯಾಯಮೂರ್ತಿ ಬಿ.ಎನ್‌.ಕೃಪಾಲ್‌, ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ಸೆಪ್ಟೆಂಬರ್‌ 8ರಂದು ಕರ್ನಾಟಕಕ್ಕೆ ಕೊಟ್ಟಿರುವ ಆದೇಶದಂತೆ ತಮಿಳುನಾಡಿಗೆ ಪ್ರತಿನಿತ್ಯ 9 ಸಾವಿರ ಕ್ಯೂಸೆಕ್ಸ್‌ ನೀರು ಬಿಡಬೇಕು ಎಂದು ಆದೇಶಿಸಿದರು.

ತಮಿಳುನಾಡಿನ ಅಡ್ವೊಕೇಟ್‌ ಕೆ.ಕೆ.ವೇಣುಗೋಪಾಲ್‌, ‘ಸೆಪ್ಟೆಂಬರ್‌ 3ರ ಸುಪ್ರಿಂಕೋರ್ಟ್‌ ಆದೇಶದ ಅನ್ವಯ ಕರ್ನಾಟಕ 16.1 ಟಿಎಂಸಿ ನೀರು ಬಿಡಬೇಕಿತ್ತು. ಆದರೆ ಆದೇಶವನ್ನು ಅದು ಉಲ್ಲಂಘಿಸಿದೆ’ ಎಂದು ವಾದ ಮಂಡಿಸಿದರು. ಸದ್ಯಕ್ಕೆ ನಾವು ವಾಸ್ತವ ಪರಿಸ್ಥಿತಿಯ ಆಳಕ್ಕೆ ಇಳಿಯುವ ಸ್ಥಿತಿಯಲ್ಲಿಲ್ಲ. ಪ್ರಸ್ತುತ ನಮಗೆ ರೈತರ ಹಿತಾಸಕ್ತಿ ಮುಖ್ಯ; ಈ ರೈತರು ಕರ್ನಾಟಕದವರೇ ಆಗಿರಲಿ ಅಥವಾ ತಮಿಳುನಾಡಿನವರೇ ಆಗಿರಲಿ. ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ಕರ್ನಾಟಕ ಉಲ್ಲಂಘಿಸಬಾರದು ಎಂಬುದು ಮುಖ್ಯ ಎಂದು ಪೀಠ ಹೇಳಿತು.

ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ಪುನರ್‌ ಪರಿಶೀಲಿಸುವಂತೆ ಪ್ರಧಾನಿಯವರಲ್ಲಿ ಕರ್ನಾಟಕ ಈಗಾಗಲೇ ಮನವಿ ಮಾಡಿಕೊಂಡಿದೆ. ಅದನ್ನು ಪ್ರಧಾನಿ ಪರಿಶೀಲಿಸುತ್ತಿರುವುದೂ ನಿಜ ಎಂದು ಕರ್ನಾಟಕದ ಹಿರಿಯ ವಕೀಲ ಅನಿಲ್‌ ದೇವನ್‌ ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ತನ್ನ ಆದೇಶವನ್ನು ಪುನರ್‌ ಪರಿಶೀಲಿಸುವುದು ಸಿಆರ್‌ಎಗೆ ಬಿಟ್ಟಿದ್ದು ಎಂದು ಪೀಠ ಅಭಿಪ್ರಾಯಪಟ್ಟಿತು.

ಉಸ್ತುವಾರಿ ಸಮಿತಿ ವರದಿ ಏನನ್ನುತ್ತದೆ : ಎ. ಕೆ. ಗೋಸ್ವಾಮಿ ನೇತೃತ್ವದ ಕಾವೇರಿ ಉಸ್ತುವಾರಿ ಸಮಿತಿಯು ಗುರುವಾರ ಕೇಂದ್ರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತು. ಕರ್ನಾಟಕ ಮತ್ತು ತಮಿಳುನಾಡು- ಎರಡೂ ರಾಜ್ಯಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ತಮಿಳುನಾಡಿಗೆ ತ್ವರಿತವಾಗಿ ನೀರಿನ ಅವಶ್ಯಕತೆಯಿದೆ. ಆದರೆ, ತಮಿಳುನಾಡಿಗೆ ಬಿಡುವಷ್ಟು ಕಾವೇರಿ ನೀರು ಕರ್ನಾಟಕದಲ್ಲಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.

(ಪಿಟಿಐ/ಇನ್ಫೋ ವಾರ್ತೆ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X