ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗೆಯ ಲಕ್ಕಿನಕೊಪ್ಪದಲ್ಲಿ 13 ಮಂಗಗಳ ನಿಗೂಢ ಸಾವು !

By Staff
|
Google Oneindia Kannada News

ಶಿವಮೊಗ್ಗ : ಜಿಲ್ಲೆಯ ಲಕ್ಕಿನಕೊಪ್ಪ ಗ್ರಾಮದ ಹುಲಿಯಮ್ಮನ ದೇವಸ್ಥಾನದ ಹತ್ತಿರ ಬುಧವಾರ 13 ಕೋತಿಗಳು ಸತ್ತು ಬಿದ್ದಿದ್ದವು.

ಶಿವಮೊಗ್ಗ -ಲಕ್ಕವಳ್ಳಿ ಹಾದಿಯಲ್ಲಿರುವ ಲಕ್ಕಿನಕೊಪ್ಪದ ಜನ ಹನುಮಂತನ ಭಕ್ತರು. ಮಂಗಗಳೆಂದರೆ ಈ ಜನ ಕೈಮುಗಿದು ನಿಲ್ಲುತ್ತಾರೆ. ಇದೇ ಕಾರಣಕ್ಕೋ ಏನೋ ಇಲ್ಲಿ ಕೋತಿಗಳ ಆವುಟ ಜಾಸ್ತಿ. ಮನೆಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಹೋಗುವುದರಿಂದ ಹಿಡಿದು, ಬೆಳೆ ಹಾಳು ಮಾಡುವವರೆಗೆ ಇವುಗಳ ಕಾಟ ಹೇಳತೀರದು.

ಆದರೆ, ಈ ಮಂಗಗಳಿಗೆ ಅದೇನಾಗಿತ್ತೋ, ಖರೆ ಯಾರಿಗೂ ಗೊತ್ತಿಲ್ಲ. ಸತ್ತು ಬಿದ್ದಿದ್ದ ಮಂಗಗಳ ಪೈಕಿ 12 ಹೆಣ್ಣು, ಒಂದು ಗಂಡು. ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೋತಿಗಳ ಸಾವಿನ ಸುದ್ದಿ ಮುಟ್ಟಿಸಿದರು. ಅಧಿಕಾರಿಗಳು ಬಂದು, ಊರಾಚೆಯ ಜಾಗದಲ್ಲಿ ಇವುಗಳ ಅಂತ್ಯ ಸಂಸ್ಕಾರಕ್ಕೆ ಅಣಿಯಾದರು. ಜನ ಮೃತ ಕೋತಿಗಳಿಗೆ ಹೂಗಳನ್ನು ಅರ್ಪಿಸಿದರು. ಕೆಲವರ ಕಣ್ಣಲ್ಲಿ ನೀರೂ ತುಂಬಿತ್ತು.

ರೇಂಜ್‌ ಫಾರೆಸ್ಟ್‌ ಆಫೀಸರ್‌ ವೇಣುಗೋಪಾಲ್‌ ಅವರ ಪ್ರಕಾರ, ಕೋತಿಗಳ ಕಾಟದಿಂದ ಮುಕ್ತಿ ಪಡೆಯಲು ಯಾರೋ ವಿಷ ಇಟ್ಟಿರಬಹುದು. ನಿಗೂಢ ರೋಗವೇನಾದರೂ ಇದ್ದು ಹೀಗಾಗಿದೆಯಾ ಎಂಬ ಬಗೆಗೂ ಜಿಜ್ಞಾಸೆ ಇದೆ. ಒಟ್ಟಿನಲ್ಲಿ ಅರಣ್ಯಾಧಿಕಾರಿಗಳು ಈ ಪ್ರದೇಶದ ಹಳ್ಳಿಗಳ ಕೋತಿ ಕಾಟ ತಪ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕೋತಿಗಳನ್ನು ಹಿಡಿದು ತೀರಾ ದೂರದ ಕಾಡಿಗೆ ಬಿಟ್ಟು ಬಂದರೂ, ಮಂಗಗಳ ಇನ್ನೊಂದು ದಂಡು ಊರನ್ನು ಹೊಕ್ಕಿರುತ್ತದೆ. ಈ ಬಗ್ಗೆ ಊರಿನವರಿಗೆ ಹೆಮ್ಮೆಯೂ ಇದೆ. ಕೋತಿಗಳ ಕಾಟದ ಬಗ್ಗೆ ಅಳಲೂ ಇದೆ !

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X