• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರದುರ್ಗದಲ್ಲಿ ನೀರಿಲ್ಲ, ಇರುವ ನೀರಿನ ಬಳಕೆಗೆ ವ್ಯವಸ್ಥೆಯಿಲ್ಲ...!

By Staff
|

*ದಟ್ಸ್‌ಕನ್ನಡ ಬ್ಯೂರೋ

ಚಿತ್ರದುರ್ಗ: ದುರ್ಗದಲ್ಲಿ ಈಗ ಪ್ರತಿಭಟನೆಗಳು ಸಾಮಾನ್ಯ. ಇಲ್ಲಿ ನಡೆಯುತ್ತಿರುವುದು ಕಾವೇರಿ ನೀರು ಬಿಡುವುದನ್ನು ವಿರೋಧಿಸುವ ಹೋರಾಟವಲ್ಲ. ಜಿಲ್ಲಾಧಿಕಾರಿ ಕಚೇರಿ ಮುಂದೆ ನಾಗರಿಕರು ಜಮಾಯಿಸಿ ಕುಡಿಯುವ ನೀರು ಕೊಡಿ ಅಂತ ಕೇಳುತ್ತಿದ್ದಾರೆ. ಆದರವು ಯಾವುದೇ ಯೋಜಿತ, ಆಯೋಜಿತ ಪ್ರತಿಭಟನೆಗಳಲ್ಲ.

‘ನಮ್ಮ ಏರಿಯಾಕ್ಕೆ ನೀರು ಬಿಟ್ಟು ಮೂರು ವಾರ ಕಳೀತು, ನಮ್ಮ ಬೋರ್‌ವೆಲ್‌ನಲ್ಲಿ ನೀರು ಬರುತ್ತಿಲ್ಲ...’ ಹೀಗೆ ಕುಡಿಯುವ ನೀರಿಲ್ಲದ ನಾಗರಿಕರ ಅಳಲು. ಚಿತ್ರದುರ್ಗ ನಗರಕ್ಕೆ ಹಿಂದೆಂದೂ ಕಾಣದಂತಹ ಬರ ಬಡಿದಿದೆ. ದುರ್ಗಕ್ಕೆ ಪ್ರತಿವರ್ಷವೂ ಬರ ಹೊಸತಲ್ಲ. ಆದರೆ ವರ್ಷದಿಂದ ವರ್ಷಕ್ಕೆ ಬರದ ತೀವ್ರತೆ ಹೆಚ್ಚಾಗುತ್ತಿರುವುದು ಬಗೆಹರಿಯದ ಸಮಸ್ಯೆ.

ಜೋಗಿಮಟ್ಟಿ ರಸ್ತೆ, ಬುದ್ಧ ನಗರ, ರಾಜೇಂದ್ರ ನಗರ, ಅಂಬೇಡ್ಕರ್‌ ನಗರ, ಜಟ್‌ಪಟ್‌ ನಗರ, ಚೆನ್ನ ಕೇಶವ ಪುರ, ಅಸರ್‌ ಮೊಹಲ್ಲ, ಚೋಳು ಗುಡ್ಡ... ಎಲ್ಲಿ ಹುಡುಕಿದರೂ ಹೊಟ್ಟೆ ತುಂಬುವಷ್ಟು ಕುಡಿಯುವ ನೀರು ಸಿಕ್ಕುವುದಿಲ್ಲ.

ಯಾಕೆ ಕುಡಿಯುವ ನೀರು ಸಿಗುತ್ತಿಲ್ಲ ?

ಜಲಸಂಪನ್ಮೂಲದ ದುರ್ಬಳಕೆ ಇದಕ್ಕೆ ಕಾರಣವೇ ? ಹೌದು ಎನ್ನುತ್ತಾರೆ ಚಿತ್ರದುರ್ಗ ಮುನ್ಸಿಪಲ್‌ ಕೌನ್ಸಿಲ್‌(ಸಿಎಂಸಿ)ನ ಅಧ್ಯಕ್ಷ ಎಚ್‌. ಸಿ. ನಿರಂಜನ್‌ ಮೂರ್ತಿ. ವಾಣಿ ವಿಲಾಸ ಸಾಗರದಿಂದ 22 ಲಕ್ಷ ಗ್ಯಾಲನ್‌ ನೀರು ಚಿತ್ರದುರ್ಗಕ್ಕೆ ಬರಬೇಕು. ಆದರೆ ಬರುತ್ತಿರುವುದು ಕೇವಲ 6ರಿಂದ 7 ಲಕ್ಷ ಗ್ಯಾಲನ್‌ ನೀರು.

ಈ ನೀರಿನ ಹಂಚಿಕೆಯೂ ಸರಿಯಾಗಿ ಆಗುತ್ತಿಲ್ಲ. ಮೂರ್ತಿ ಹೇಳುತ್ತಾರೆ, ಎಲ್ಲ ಏರಿಯಾಗಳಿಗೂ ಸರಿಯಾಗಿ ಹಂಚಿ ನೀರು ಬಿಡಿ ಎಂದರೆ ಸಿಎಂಸಿ ಸ್ಟಾಫ್‌ ಮಾತು ಕೇಳುವುದಿಲ್ಲ. ಮನಸ್ಸಿಗೆ ಬಂದ ಹಾಗೆ, ಇಚ್ಛೆ ತೋಚಿದ ಹಾಗೆ ನೀರು ಬಿಡುತ್ತಾರೆ. ಇದು ಇನ್ನೊಂದು ಸಮಸ್ಯೆ.

ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ಬೋರ್‌ವೆಲ್‌ಗಳಿವೆ. ಆದರೆ ಅವುಗಳಲ್ಲಿ ಅರ್ಧಕ್ಕರ್ಧ ಬೋರ್‌ವೆಲ್‌ ನೀರು ಕೊಡುತ್ತಿಲ್ಲ. ತಿಮ್ಮಣ್ಣ ನಾಯಕನ ಕೆರೆಯಿಂದ ನಗರಕ್ಕೆ ನೀರು ತರುವಂತೆ ಸಿಎಂಸಿ ಸದಸ್ಯ ಸಿ. ಟಿ. ಕೃಷ್ಣ ಮೂರ್ತಿ ಸಿಎಂಸಿ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಿದ್ದರು. ಈ ವ್ಯವಸ್ಥೆಗೆ 8ರಿಂದ 10 ಲಕ್ಷ ರೂಪಾಯಿ ಖರ್ಚು ಮಾಡಿದರೂ ಪೈಪುಗಳು, ಪಂಪ್‌ಗಳು ಸರಿಯಾಗಿ ಕೆಲಸ ಮಾಡಲಿಲ್ಲ. ಆದಾಗ್ಯೂ ಈಗ ಬುರುಜಿನ ಹಟ್ಟಿಗೆ ಒಂದು ಹೊತ್ತು ನೀರು ತಿಮ್ಮಣ್ಣ ನಾಯಕನ ಕೆರೆಯಿಂದ ಬರುತ್ತಿದೆ.

ಒಟ್ಟಿನಲ್ಲಿ ದುರ್ಗದಲ್ಲಿ ನೀರಿಲ್ಲ ಎನ್ನುವುದಕ್ಕಿಂತ ಇರುವ ನೀರಿನ ಸದ್ಬಳಕೆ ಆಗುತ್ತಿಲ್ಲ. ಆ ನಿಟ್ಟಿನಲ್ಲಿ ಸಿಎಂಸಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದು ಬಾಯಾರಿದ ನಾಗರಿಕರ ದೂರು.

ಬರಿಗೊಡಗಳಿಗೆ ಸಮಾಧಾನ ಹೇಳುತಿದೆ

ನೀರಿಲ್ಲದ ನಲ್ಲಿ

ಮಟಮಟ ಮಧ್ಯಾಹ್ನದಲ್ಲಿ !

- ಕೆ.ಎಸ್‌.ನರಸಿಂಹ ಸ್ವಾಮಿ

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more