ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಲಿದೆ ಬೆಂಗಳೂರು ಬಾಡಿಗೆದಾರರ ಇತಿ ವೃತ್ತಾಂತ ಸಲ್ಲಿಕೆ ಕಾನೂನು

By Staff
|
Google Oneindia Kannada News

ಬೆಂಗಳೂರು : ಉಗ್ರರು ನಗರದಲ್ಲಿ ಬೀಡುಬಿಟ್ಟಿರುವ ಆತಂಕ ಹೆಚ್ಚಾಗಿರುವುದರಿಂದ, ಮನೆ ಮಾಲಿಕರು ಬಾಡಿಗೆದಾರರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗೆ ಕಡ್ಡಾಯವಾಗಿ ಸಲ್ಲಿಸುವ ಕುರಿತ ಕಾನೂನು ಜಾರಿ ತರಲು ಸರ್ಕಾರ ನಿರ್ಧರಿಸಿದೆ.

ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ ಅಥವಾ ನಗರಾಭಿವೃದ್ಧಿ ಇಲಾಖೆ- ಈ ಯಾವುದೇ ಇಲಾಖೆಗಳಡಿ ಈ ಕಾನೂನನ್ನು ಜಾರಿಗೆ ತರಬಹುದಾಗಿದೆ. ನಗರಸಭಾ ವ್ಯಾಪ್ತಿಗೆ ಬರುವ ಮನೆ ಮಾಲಿಕರು ತಮ್ಮ ಬಾಡಿಗೆದಾರರ ಪೂರ್ಣ ವಿವರಗಳನ್ನು ಒದಗಿಸುವುದರಿಂದ, ಉಗ್ರರ ಪತ್ತೆ ಸುಲಭವಾಗಲಿದೆ. ಜೊತೆಗೆ ಬಾಡಿಗೆಗೆ ಮನೆ ಕೊಡುವ ಮಾಲಿಕರಿಗೂ ಭಯೋತ್ಪಾದಕರ ಉಪಟಳ ತಪ್ಪಲಿದೆ ಎಂದು ಶಿವಕುಮಾರ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X