ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ ಜಯಂತಿ ಅಂಗವಾಗಿ ಅಮೆರಿಕದಲ್ಲಿ 8.8 ಅಡಿ ಗಾಂಧಿ ಪ್ರತಿಮೆ

By Staff
|
Google Oneindia Kannada News

ವಾಷಿಂಗ್ಟನ್‌ : ಅಮೆರಿಕಾದಲ್ಲಿ ಗಾಂಧಿ ಜಯಂತಿ ಆಚರಣೆಗೆ ಸಂಭ್ರಮದ ಸಿದ್ಧತೆಗಳು ನಡೆಯುತ್ತಿದ್ದು , 8.8 ಅಡಿ ಎತ್ತರದ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆ ಮಿಲ್ವಾಕೀ (Milwaukee)ಯಲ್ಲಿ ಅನಾವರಣಗೊಳ್ಳಲಿದೆ.

ಅಮೆರಿಕದ ಆರೋಗ್ಯ ಕಾರ್ಯದರ್ಶಿ ಟಾಮಿ ಥಾಂಪ್ಸನ್‌ ಅವರು ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ಗಾಂಧೀಜಿ ಅವರ ಪ್ರತಿಮೆಯನ್ನು ಅನಾವರಣಗೊಳಿಸುವರು. ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಲಲಿತ್‌ ಮಾನ್‌ಸಿಂಗ್‌ ಅವರು ಈ ಕಾರ್ಯಕ್ರಮದ ಪ್ರಮುಖ ಅತಿಥಿ.

ಕೋಲ್ಕತ್ತಾದ ಗೌತಮ್‌ ಪಾಲ್‌ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಕೆತ್ತಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಸೆಪ್ಟಂಬರ್‌ 2000 ದಲ್ಲಿ ಭಾರತದ ಪ್ರಧಾನಿ ವಾಜಪೇಯಿ ಹಾಗೂ ಅಮೆರಿಕದ ಅಧ್ಯಕ್ಷ (ಪ್ರಸ್ತುತ ಮಾಜಿ) ಬಿಲ್‌ ಕ್ಲಿಂಟನ್‌ ಅವರು ವಾಷಿಂಗ್ಟನ್‌ನಲ್ಲಿ ಅನಾವರಣಗೊಳಿಸಿದ್ದ ಗಾಂಧಿ ಪ್ರತಿಮೆಯನ್ನೇ ಪ್ರಸ್ತುತದ ಪ್ರತಿಮೆ ಹೋಲುತ್ತದೆ. ಪ್ರತಿಮೆ 1930 ರ ಐತಿಹಾಸಿಕ ದಂಡಿ ಉಪ್ಪಿನ ಸತ್ಯಾಗ್ರಹದ ಸಂಕೇತವಾಗಿದೆ.

ಮಿಲ್ವಾಕೀಯಲ್ಲಿನ ಗಾಂಧಿ ಪ್ರತಿಮೆ, ಉಪ ರಾಷ್ಟ್ರಪತಿ ಭೈರಾನ್‌ಸಿಂಗ್‌ ಶೆಕಾವತ್‌ ಅವರ ಅಧ್ಯಕ್ಷತೆಯ ನವದೆಹಲಿಯಲ್ಲಿನ ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಸಮಿತಿಯ ಕೊಡುಗೆಯಾಗಿದೆ. ಗಾಂಧಿ ಪ್ರತಿಮೆ ಯೋಜನೆಯ ಸ್ಥಳ ಹಾಗೂ ನಿಧಿ ಸಂಗ್ರಹ ಜವಾಬ್ದಾರಿಯನ್ನು Wisconsin Coalition of Asian Indian Organisations ಹೊತ್ತಿದ್ದು , ಬಲ್ಕ್‌ ಪೆಟ್ರೋಲಿಯಂನ ಅಧ್ಯಕ್ಷ ದರ್ಶನ್‌ಸಿಂಗ್‌ ಧಲಿವಾಲ್‌ ಹಾಗೂ WCAIO ದ ಅಧ್ಯಕ್ಷ ಪ್ರೇಂ ಶರ್ಮ ಯೋಜನೆಯ ರೂವಾರಿಗಳಾಗಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X