ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಸಹಭಾಗಿತ್ವದಲ್ಲಿ ಖಾದಿಗೆ ಕಾಯಕಲ್ಪ ;ಆಧುನಿಕತೆಯ ಲೇಪ

By Staff
|
Google Oneindia Kannada News

ಬೆಂಗಳೂರು : ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಅಕ್ಟೋಬರ್‌ 2 ರಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಖಾದಿ ವಸ್ತ್ರಗಳ ಮಳಿಗೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸುತ್ತಿದೆ.

ಖಾಸಗಿ ವಸ್ತ್ರಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಖಾದಿ ಗ್ರಾಮೋದ್ಯೋಗ ಮಂಡಳಿ ಖಾಸಗಿಯವರೊಂದಿಗೆ ಕೈ ಜೋಡಿಸುತ್ತಿದೆ . ನಗರದ ಶೇಷಾದ್ರಿಪುರಂ ಸಮೀಪ ಮಂಡಳಿಯ ಹೆಸರಿನಲ್ಲಿ ಖಾಸಗಿ ಖಾದಿ ಮಳಿಗೆಗಳು ಅ.2ರಿಂದ ಪ್ರಾರಂಭವಾಗಲಿವೆ ಎಂದು ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ। ಬೋರೇಗೌಡ ಶನಿವಾರ (ಸೆ.28) ಸುದ್ದಿಗಾರರಿಗೆ ತಿಳಿಸಿದರು.

ಆಧುನಿಕತೆಯ ಲೇಪ :
ಮುಂದಿನ ಮೂರು ವರ್ಷಗಳಲ್ಲಿ ಖಾದಿ ಭಂಡಾರಗಳನ್ನು ಸಂಪೂರ್ಣ ಗಣಕೀಕರಿಸಲು ಮಂಡಳಿ ಉದ್ದೇಶಿಸಿದ್ದು , ಕ್ರೆಡಿಟ್‌ ಕಾರ್ಡ್‌ ಬಳಕೆ ಸೌಲಭ್ಯವನ್ನೂ ಜಾರಿಗೆ ತರಲಾಗುವುದು. ಖಾದಿ ಉತ್ಪಾದಿಸುವ ಚರಕಗಳನ್ನು ಕೂಡ ಆಧುನೀಕರಿಸಲಾಗುತ್ತಿದೆ ಎಂದು ಬೋರೇಗೌಡ ಹೇಳಿದರು.

ಗಾಂಧಿ ಜಯಂತಿ ಪ್ರಯುಕ್ತ ಖಾದಿಗೆ ರಿಯಾಯ್ತಿ
ಅಕ್ಟೋಬರ್‌ 2 ರಿಂದ 45 ದಿನಗಳ ಕಾಲ ಖಾದಿ ವಸ್ತ್ರಗಳಿಗೆ ಗಾಂಧಿ ಜಯಂತಿ ಅನ್ವಯ ರಿಯಾಯಿತಿ ಇದೆ. ಕಾಟನ್‌ಗೆ ಪ್ರತಿಶತ 35, ಉಲ್ಲನ್‌ಗೆ ಶೆ.30 ಹಾಗೂ ರೇಷ್ಮೆ ಖಾದಿಗೆ ಶೇ.20 ರಿಯಾಯಿತಿ ಸೌಲಭ್ಯವಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X