ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್‌ನಿಂದ 1000 ಗ್ರಾಮ ಪಂಚಾಯಿತಿಗಳ ಗಣಕೀಕರಣ

By Staff
|
Google Oneindia Kannada News

ಬೆಂಗಳೂರು : ರಾಜ್ಯದ 1000 ಗ್ರಾಮ ಪಂಚಾಯಿತಿಗಳ ಕಂಪ್ಯೂಟರೀಕರಣದ ಕೆಲಸವನ್ನು ಸರ್ಕಾರ ಮಾಹಿತಿ ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್‌ ಕಾರ್ಪೊರೇಷನ್‌ಗೆ ಒಪ್ಪಿಸಿದೆ.

ಹಳ್ಳಿಗಳ ಸಂಪನ್ಮೂಲ, ರಸ್ತೆ- ವಿದ್ಯುದ್ದೀಪ, ನೀರು ಪೂರೈಕೆ ವಿವರಗಳು, ಪಂಚಾಯಿತಿ ವ್ಯಾಪ್ತಿಯ ಭೂ ದಾಖಲೆಗಳು, ತೆರಿಗೆ ವಸೂಲಿ, ಆಯಾ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಅನ್ವಯಿಸುವ ಸರ್ಕಾರಿ ಯೋಜನೆಗಳು- ಮೊದಲಾದ ವಿವರಗಳನ್ನು ಸಮರ್ಪಕವಾಗಿ ಕಾಯ್ದುಕೊಳ್ಳುವಂಥಾ ಸರಳ ಸಾಫ್ಟ್‌ವೇರ್‌ ಸಿದ್ಧಪಡಿಸಿಕೊಡುವಂತೆ ಮೈಕ್ರೋಸಾಫ್ಟ್‌ ಕಂಪನಿಯನ್ನು ಸರ್ಕಾರ ಕೇಳಿಕೊಂಡಿದೆ. ರಾಜ್ಯದಲ್ಲಿ ಒಟ್ಟು 5659 ಗ್ರಾಮ ಪಂಚಾಯಿತಿಗಳಿವೆ. ಈ ಪೈಕಿ ಮೊದಲ ಹಂತದಲ್ಲಿ 1000 ಗ್ರಾಮ ಪಂಚಾಯಿತಿಗಳ ಕಂಪ್ಯೂಟರೀಕರಣ ಮಾಡಲಾಗುವುದು. ಮುಂದೆ ಹಂತಹಂತವಾಗಿ ಇತರ ಪಂಚಾಯಿತಿಗಳನ್ನೂ ಕಂಪ್ಯೂಟರೀಕರಿಸಲಾಗುವುದು ಎಂದು ಐಟಿ ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರತಿ ಗ್ರಾಮ ಪಂಚಾಯಿತಿಗೆ ವರ್ಷಕ್ಕೆ 7ರಿಂದ 8 ಲಕ್ಷ ರುಪಾಯಿ ಸರ್ಕಾರಿ ಹಣವನ್ನು ಕೊಡಲಾಗುತ್ತಿದೆ. ಮೂಲಭೂತ ಸೌಕರ್ಯಗಳ ವೃದ್ಧಿ ವಗೈರೆ ಕೆಲಸಗಳಿಗೆ ಮುಖ್ಯ ಆದ್ಯತೆ. ಆದರೆ ಈ ಸರ್ಕಾರಿ ನೆರವಿನ ಖರ್ಚಿನ ಕೃಷ್ಣನ ಲೆಕ್ಕ ಬರೆದಿಡುವವರೇ ಹೆಚ್ಚು. ಇದರಿಂದ ಹಣ ಪೋಲಾಗುತ್ತಿದೆ. ಸಾಲದ್ದಕ್ಕೆ ತೆರಿಗೆ ವಸೂಲಾತಿ ಕೂಡ ಸಮರ್ಪಕವಾಗಿ ಆಗುತ್ತಿಲ್ಲ. ಕಂಪ್ಯೂಟರೀಕರಣದ ನಂತರ ಗ್ರಾಮ ಪಂಚಾಯಿತಿಗಳನ್ನು ಒಂದೇ ಜಾಲಕ್ಕೆ ತಂದರೆ, ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಗ್ರಾಮ ಪಂಚಾಯಿತಿ ಕೆಲಸದಲ್ಲಿ ಪಾರದರ್ಶಕತೆ ಮೂಡುತ್ತದೆ ಎನ್ನುತ್ತಾರೆ ಒಬ್ಬ ಐಟಿ ಅಧಿಕಾರಿ.

ಅಂದಹಾಗೆ, ಮೈಕ್ರೋಸಾಫ್ಟ್‌ ಕಾರ್ಪೊರೇಷನ್‌ ಸಿದ್ಧಪಡಿಸಲಿರುವ ಸಾಫ್ಟ್‌ವೇರ್‌ ಕನ್ನಡದಲ್ಲಿರುತ್ತದೆ !

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X