ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ಟ್‌ ತೀರ್ಪು ಮಾರಕವಾಗಿದ್ದರೆ ಕೃಷ್ಣ ಸರ್ಕಾರ ರಾಜೀನಾಮೆ-ಅಲ್ಲಂ

By Staff
|
Google Oneindia Kannada News

ಬೆಂಗಳೂರು : ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧ ಸುಪ್ರಿಂಕೋರ್ಟ್‌ ತೀರ್ಪು ರಾಜ್ಯದ ರೈತರ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸಹಿತ ಇಡೀ ಮಂತ್ರಿ ಮಂಡಲ ಅಧಿಕಾರ ತ್ಯಜಿಸಲು ಹಿಂಜರಿಯುವುದಿಲ್ಲ ಎಂದು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಹೇಳಿದ್ದಾರೆ.

ಕಾಂಗ್ರೆಸ್‌ ಜನಪರವಾಗಿದ್ದು ಅಧಿಕಾರಕ್ಕೆ ಅಂಟಿಕೊಂಡಿಲ್ಲ . ಸರ್ಕಾರ ರಾಜೀನಾಮೆ ಸಲ್ಲಿಸಿ ಹೊಸದಾಗಿ ಚುನಾವಣೆ ಎದುರಿಸಿದರೆ, ಕಾಂಗ್ರೆಸ್‌ ಕನಿಷ್ಠ 200 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಶನಿವಾರ (ಸೆ.28) ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ಲಂ ವೀರಭದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ರೈತರ ಹಿತವನ್ನು ರಕ್ಷಿಸಲು ಸಿದ್ಧವಾದರೆ ಕೇಂದ್ರ ಸರ್ಕಾರದ ವಶಕ್ಕೆ ರಾಜ್ಯದ ಎಲ್ಲ ಜಲಾಶಯಗಳ ಬೀಗದ ಕೈಗಳನ್ನು ಒಪ್ಪಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದ ಅಲ್ಲಂ , ಮೆಟ್ಟೂರು ಜಲಾಶಯದ ಜಲ ಸಂಗ್ರಹದ ಸಮೀಕ್ಷೆ ನಡೆಸಲು ಕಾವೇರಿ ಉಸ್ತುವಾರಿ ಸಮಿತಿಗೆ ಅವಕಾಶ ನಿರಾಕರಿಸಿದ ತಮಿಳುನಾಡು ಕ್ರಮವನ್ನು ದುರದೃಷ್ಟಕರ ಎಂದು ಬಣ್ಣಿಸಿದರು.

ಸೆಂ. 30 ರಂದು ವಿಚಾರಣೆ
ಕಾವೇರಿ ನೀರು ಬಿಡುಗಡೆ ಸಂಬಂಧ ಕರ್ನಾಟಕ ಸುಪ್ರಿಂಕೋರ್ಟ್‌ ಹಾಗೂ ಕಾವೇರಿ ನದಿ ಪ್ರಾಧಿಕಾರದ ತೀರ್ಪುಗಳನ್ನು ಉಲ್ಲಂಘಿಸುವ ಮೂಲಕ ನ್ಯಾಯಾಂಗ ನಿಂದನೆ ಎಸಗಿದೆ ಎನ್ನುವ ತಮಿಳುನಾಡು ಅರ್ಜಿಯ ವಿಚಾರಣೆ ಸೆ.30 ರ ಸೋಮವಾರ ನಡೆಯಲಿದೆ.

ಈ ನಡುವೆ ಸುಪ್ರಿಂಕೋರ್ಟ್‌ಗೆ ಶನಿವಾರ ಪ್ರಮಾಣ ಪತ್ರ ಸಲ್ಲಿಸಿರುವ ಕರ್ನಾಟಕ- ಮೆಟ್ಟೂರು ಜಲಾಶಯದ ಜಲ ಸಮೀಕ್ಷೆಗೆ ಕೇಂದ್ರದ ಉಸ್ತುವಾರಿ ಸಮಿತಿಗೆ ಅವಕಾಶ ನಿರಾಕರಿಸುವ ಮೂಲಕ ತಮಿಳುನಾಡು ನ್ಯಾಯಾಂಗ ನಿಂದನೆ ಎಸಗಿದೆ ಎಂದು ಆರೋಪಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X