ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುತ್ತೂರಿನ ವೇಟ್‌ಲಿಫ್ಟರ್‌ ಸತೀಶ್‌ ರೈಗೆ ಒಂದು ಸಾವಿರ ಡಾಲರ್‌ ದಂಡ

By Staff
|
Google Oneindia Kannada News

ನವದೆಹಲಿ: ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದರೂ ಮಾದಕ ದ್ರವ್ಯ ಆರೋಪ ಎದುರಿಸುತ್ತಿದ್ದ ಪುತ್ತೂರಿನ ಸತೀಶ್‌ ರೈಗೆ ಆರು ತಿಂಗಳ ನಿಷೇಧ ಹಾಗೂ ಒಂದು ಸಾವಿರ ಡಾಲರ್‌ ದಂಡ ವಿಧಿಸಲಾಗಿದೆ.

ಇದೇ ಕ್ರೀಡಾ ಕೂಟದಲ್ಲಿ ಮಾದಕ ದ್ರವ್ಯ ಸೇವನೆ ಆರೋಪಕ್ಕೆ ಗುರಿಯಾಗಿದ್ದ ಭಾರತದ ಮತ್ತೊಬ್ಬ ವೇಟ್‌ ಲಿಫ್ಟರ್‌ ಕೆ. ಮಾದಸ್ವಾಮಿಗೂ ಎರಡು ವರ್ಷಗಳ ನಿಷೇಧ ಹಾಗೂ ಸಾವಿರ ಡಾಲರ್‌ ದಂಡ ವಿಧಿಸಲಾಗಿದೆ.

ಮ್ಯಾಂಚೆಸ್ಟರ್‌ ಕ್ರೀಡಾ ಕೂಟದಲ್ಲಿ ಸತೀಶ್‌ ರೈ ಎರಡು ಚಿನ್ನದ ಪದಕ ಗೆದ್ದಿದ್ದರು. ಆದರೆ ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಪದಕಗಳನ್ನು ವಾಪಾಸು ಮಾಡಬೇಕಾಯಿತು. ಇದರಿಂದ ಪದಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಭಾರತ ನಾಲ್ಕನೇ ಸ್ಥಾನಕ್ಕೆ ಇಳಿಯಬೇಕಾಯಿತು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X