• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕೃಷ್ಣೆ ಯಾರಿಗೆಷ್ಟು? ಪರಿಹಾರಕ್ಕೆ ಹೊಸ ನ್ಯಾಯಾಧೀಕರಣ ಬೇಕು’

By Staff
|

ಬೆಂಗಳೂರು : ಕೃಷ್ಣಾ ನದಿ ನೀರು ಹಂಚಿಕೆ ಸಮಸ್ಯೆಯನ್ನು ಒಡಂಬಡಿಕೆಯಿಂದ ಬಗೆಹರಿಕೊಳ್ಳಲು ಒಂದು ದಶಕದಿಂದ ನಡೆಯುತ್ತಿರುವ ಕಸರತ್ತು ಫಲ ಕೊಟ್ಟಿಲ್ಲ. ಹೀಗಾಗಿ ಹೊಸ ನ್ಯಾಯಾಧೀಕರಣ ರಚಿಸಿ, ಮೂರೂ ರಾಜ್ಯಗಳಿಗೆ ಸಮರ್ಪಕವಾಗಿ ನದಿ ನೀರನ್ನು ಹಂಚಬೇಕು ಎಂದು ಕೇಂದ್ರ ಸರ್ಕಾರವನ್ನು ಕರ್ನಾಟಕ ಕೋರಿದೆ.

ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಕೃಷ್ಣಾ ನದಿಯ ಹೆಚ್ಚುವರಿ ನೀರಿನ ಹಂಚಿಕೆಯ ತಕರಾರಿದು. ಬಚಾವತ್‌ ನ್ಯಾಯಾಧಿಕರಣದ ‘ಬಿ’ ಸ್ಕೀಮ್‌ ತೀರ್ಪಿನ ಪ್ರಕಾರ ಹೆಚ್ಚುವರಿ ನೀರಿನ ಹಂಚಿಕೆಯನ್ನು ಒಡಂಬಡಿಕೆ ಮೂಲಕ ಸಾಧಿಸುವ ಯತ್ನಗಳು ವಿಫಲವಾಗಿವೆ. ಹೀಗಾಗಿ ಹೊಸ ನ್ಯಾಯಾಧಿಕರಣ ರಚಿಸಿ, ಸಮಸ್ಯೆಯನ್ನು ಬಗೆಹರಿಸಬೇಕೆಂದು ಗುರುವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಜಲ ಸಂಪನ್ಮೂಲ ಸಚಿವ ಎಚ್‌.ಕೆ.ಪಾಟೀಲ್‌ ಶುಕ್ರವಾರ ಸುದ್ದಿಗಾರರಿಗೆ ಹೇಳಿದರು.

1956ನೇ ಇಸವಿಯ (ಅಂತರ ರಾಜ್ಯ ನೀರು ವ್ಯಾಜ್ಯ) ಕಾಯ್ದೆ ಅನ್ವಯ ನದಿ ನೀರು ಹಂಚಿಕೆ ಸಮಸ್ಯೆ ಪರಿಹಾರವು ಒಡಂಬಡಿಕೆ ಮೂಲಕ ಸಾಧ್ಯವಾಗದಿದ್ದರೆ, ನ್ಯಾಯಾಧಿಕರಣ ರಚಿಸಿ ಪರಿಹಾರ ಕಂಡುಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಮಧ್ಯಂತರ ಆದೇಶಗಳು, ಹೆಚ್ಚುವರಿ ನೀರಿನ ಹಂಚಿಕೆ ಸಮಸ್ಯೆ ಮೊದಲಾದವುಗಳನ್ನು ಇಂಚಿಂಚೂ ಬಗೆಹರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸಲ್ಲಿಸಿರುವ ದೂರಿನ ಪತ್ರದಲ್ಲಿ ಬರೆಯಲಾಗಿದೆ ಎಂದರು.

ದೂರಿನ ಪತ್ರದ ಸಂಕ್ಷಿಪ್ತ ತಿರುಳು...

ತೆಲುಗು ಗಂಗಾ ಶ್ರೀಶೈಲಂ ಎಡ ಮತ್ತು ಬಲ ನಾಲೆ ಯೋಜನೆಗಳಿಗೆ ಆಂಧ್ರಪ್ರದೇಶ ತನ್ನ ಪಾಲಿಗಿಂತ ಹೆಚ್ಚು ನೀರನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದೆ. ಇನ್ನೊಂದೆಡೆ, ಮಹಾರಾಷ್ಟ್ರ 560 ಟಿಎಂಸಿ ಪ್ರಮಾಣದ ನೀರನ್ನು ಸಂಗ್ರಹಿಸಿಟ್ಟುಕೊಂಡಿದೆ. ಇದು ಅದರ ಪಾಲಿನ ಹೆಚ್ಚುವರಿ ನೀರಿಗಿಂತ ಹೆಚ್ಚು. ಸಾಲದ್ದಕ್ಕೆ ಬೇಸಗೆಯಲ್ಲಿ ಭೀಮಾ ನದಿಗೆ ಸಾಕಷ್ಟು ನೀರಿನ ಹರಿವು ಕಾಯ್ದುಕೊಳ್ಳುವುದರಲ್ಲೂ ಅದು ವಿಫಲವಾಗಿದೆ. ಈ ಹಿಂದೆ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.6 ಮೀ.ನಿಂದ 524.256 ಮೀಟರುಗಳಷ್ಟು ಎತ್ತರಿಸಲು ಕರ್ನಾಟಕ ಹೊರಟಾಗ, ಆಂಧ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳು ತಕರಾರೆತ್ತಿದ್ದವು. ಈಗ ಕರ್ನಾಟಕದ ರೈತರ ಹಿತಾಸಕ್ತಿಗೇ ಧಕ್ಕೆ ಬರುವಂತೆ ವರ್ತಿಸುತ್ತಿವೆ.

ನ್ಯಾಯಾಧೀಕರಣ ಪರಿಹರಿಸಬೇಕಾದ ಗೊಂದಲಗಳು-

  • ಬಚಾವತ್‌ ತೀರ್ಪಿನ ‘ಎ’ ಸ್ಕೀಮಿನ ಅನ್ವಯ 2130 ಟಿಎಂಸಿ ನೀರನ್ನು ಹಂಚಲಾಗಿದೆ. ಇದಕ್ಕಿಂದ ಹೆಚ್ಚುವರಿ ನೀರನ್ನು (ಸುಮಾರು 517 ಟಿಎಂಸಿ) ಒಡಂಬಡಿಕೆಯಿಂದ ಹಂಚಿಕೊಳ್ಳಬೇಕು. ಪ್ರಯತ್ನಗಳು ವಿಫಲವಾಗಿರುವುದು ಇಲ್ಲೆ.
  • ಹೆಚ್ಚುವರಿ ನೀರಿನ ಪೈಕಿ ಮಹಾರಾಷ್ಟ್ರ 25%, ಕರ್ನಾಟಕ 50% ಹಾಗೂ ಆಂಧ್ರಪ್ರದೇಶ 25% ಉಪಯೋಗಿಸಬೇಕೆ?
  • ದೂರು ಸಲ್ಲಿಸುತ್ತಿರುವ ಸರ್ಕಾರವು ಆಲಮಟ್ಟಿ ಅಣೆಕಟ್ಟಿನ ಹೆಚ್ಚಿಸಿರುವ ಎತ್ತರದಲ್ಲಿ ತನ್ನ ಪಾಲಿನ ಹೆಚ್ಚುವರಿ ನೀರನ್ನು ಸಂಗ್ರಹಿಸಬಹುದೇ?
  • ಮಹಾರಾಷ್ಟ್ರವು ಕೃಷ್ಣಾ ನದಿಯ 560 ಟಿಎಂಸಿ ಪ್ರಮಾಣದ ನೀರನ್ನು ಶೇಖರಿಸಿ, ತನ್ನ ಪಾಲಿನ ಹೆಚ್ಚುವರಿ ನೀರಿಗಿಂತ ಹೆಚ್ಚು ಪ್ರಮಾಣದ ನೀರನ್ನು ಅಕ್ರಮವಾಗಿ ಬಳಸಿದೆಯೇ?
  • ನವೆಂಬರ್‌ನಿಂದ ಮೇ ತಿಂಗಳವರೆಗೆ ಭೀಮಾ ನದಿಗೆ ಬೇಸಿಗೆ ಹರಿವನ್ನು ನಿಗದಿತ ಪ್ರಮಾಣಕ್ಕೆ ತಕ್ಕಂತೆ ಕಾಯ್ದುಕೊಳ್ಳುತ್ತಿದೆಯೇ? ಇಲ್ಲವಾದರೆ ಏನು ಮಾಡಬೇಕು?
  • ತೆಲುಗು ಗಂಗಾ ಮತ್ತು ಶ್ರೀಶೈಲಂ ಎಡ ದಂಡೆ ನಾಲೆಯಂಥಾ ಬೃಹತ್‌ ಹಾಗೂ ಶಾಶ್ವತ ಯೋಜನೆಗೆ ತನ್ನ ಪಾಲಿನ ಹೆಚ್ಚುವರಿ ನೀರನ್ನು ಬಳಸುವ ಅಧಿಕಾರ ಆಂಧ್ರಪ್ರದೇಶ ಸರ್ಕಾರಕ್ಕಿದೆಯೇ?

ಈ ತಕರಾರುಗಳ ಕುರಿತು ಸುಪ್ರಿಂಕೋರ್ಟ್‌ಗೆ ಕರ್ನಾಟಕ ಸಲ್ಲಿಸಿದ್ದ ದೂರಿನ ಅರ್ಜಿಯನ್ನು ಸೆಪ್ಟೆಂಬರ್‌ 3ರಂದು ವಾಪಸ್ಸು ಪಡೆದಿತ್ತು. ಇದೀಗ ಕೇಂದ್ರ ಸರ್ಕಾರದ ಕದ ತಟ್ಟಿದೆ. ಒಂದೆಡೆ ಕಾವೇರಿಯ ಕಿರಿಕ್ಕು, ಇನ್ನೊಂದೆಡೆ ಕೃಷ್ಣಾ ನದಿಯ ಕೃಷ್ಣನ ಲೆಕ್ಕ. ಆಲಮಟ್ಟಿ ಎತ್ತರಿಸಿದ್ದೇ, ಮುಳುಗಡೆಯಾಯಿತು ಬಾಗಲಕೋಟೆ. ಕೃಷ್ಣ ಸರ್ಕಾರಕ್ಕೆ ಎಂಥಾ ಗತಿ ಬಂತು, ಅಕಟಕಟಾ !

(ಪಿಟಿಐ)

ವಾರ್ತಾ ಸಂಚಯ

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X