ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ಮೈಸೂರು ಐಟಿ ಮೇಳ ಮುಂದಕ್ಕೆ

By Super
|
Google Oneindia Kannada News

ಮೈಸೂರು: ಮೈಸೂರು ಐಟಿಮೇಳವನ್ನು ಮುಂದೂಡಲಾಗಿದೆ. ಅಕ್ಟೋಬರ್‌ 2ರಿಂದ ನಾಲ್ಕು ದಿನಗಳ ಕಾಲ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಮೈಸೂರು ಐಟಿ.ಕಾಂ ಅನ್ನು ನವೆಂಬರ್‌ಗೆ ಮುಂದೂಡಲಾಗಿದೆ.

ನವೆಂಬರ್‌ 14ರಿಂದ 17ರವರೆಗೆ ಇದೇ ಕ್ರೀಡಾಂಗಣದಲ್ಲಿ ಮೈಸೂರು ಐಟಿ ಮೇಳವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ. ವೀರಪ್ಪನ್‌ ಹಾವಳಿ ಹಾಗೂ ಮುಖ್ಯವಾಗಿ ಮೈಸೂರು ವಲಯದಲ್ಲಿ ಕಾವೇರಿ ನೀರು ಬಿಡುಗಡೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಐಟಿ ಮೇಳವನ್ನು ಮುಂದೂಡಲಾಗಿದೆ.

ಇನ್ಫೋಸಿಸ್‌ನ ಮಾಜಿ ಉದ್ಯೋಗಿ ರೇಖಾ ಮ್ಯಾಕ್ಸಿಮೋವಿಚ್‌ ಅವರು ಫಣೀಶ್‌ ಮೂರ್ತಿಯ ಮೇಲೆ ಲೈಂಗಿಕ ಕಿರುಕುಳದ ಆಪಾದನೆ ಹೊರಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ಅವರನ್ನು ಉದ್ಯೋಗದಿಂದ ತೆಗೆದುಹಾಕಿದೆ. ಫಣೀಶ್‌ ಅವರನ್ನು ಮತ್ತೆ ಸಂಸ್ಥೆಗೆ ಕರೆಸಿಕೊಳ್ಳುವ ಬಗ್ಗೆ ತಾವು ಯಾವತ್ತೂ ಮಾತಾಡಿಲ್ಲ ಎಂದು ನಾರಾಯಣ ಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಕೆಲವು ಮಾಧ್ಯಮಗಳು ಫಣೀಶ್‌ ಮೂರ್ತಿ ಮತ್ತೆ ಇನ್ಫೋಸಿಸ್‌ ಸೇರಿಕೊಳ್ಳುವ ಸಂಭವವಿರುವುದಾಗಿ ಪ್ರಕಟಿಸಿದ್ದವು. ಈ ಹಿನ್ನೆಲೆಯಲ್ಲಿ ನಾರಾಯಣ ಮೂರ್ತಿ, ಪ್ರಕಟಣೆಯಾಂದರಲ್ಲಿ ಫಣೀಶ್‌ ಮೂರ್ತಿಯವರ ವಾಪಸ್ಸಾಗುವಿಕೆಯನ್ನು ಶುಕ್ರವಾರ ನಿರಾಕರಿಸಿದ್ದಾರೆ.

English summary
Cauvery water dispute : The Mysore IT.Com 2002 has been postponed to november
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X