• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂದ್‌ : ಬೆಂಗಳೂರಲ್ಲಿ ನಿಧಾನವಾಗಿ ತಿರುಗುತ್ತಿರುವ ರಾಗಿಕಲ್ಲು

By Staff
|

ಬೆಂಗಳೂರು : ಗುಜರಾತ್‌ನ ಗಾಂಧಿನಗರದ ಸ್ವಾಮಿ ನಾರಾಯಣ ದೇಗುಲದಲ್ಲಿ ನಡೆದ ನರಮೇಧವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಕರೆ ನೀಡಿರುವ ಸೆ.26 ರ (ಗುರುವಾರ) ಭಾರತ್‌ ಬಂದ್‌ಗೆ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ಜನ ಜೀವನ ಹೆಚ್ಚೂ ಕಡಿಮೆ ಮಾಮೂಲಿನಂತಿದೆ .

ಈ ಮುನ್ನ ಮುಂಜಾಗರೂಕತಾ ಕ್ರಮವಾಗಿ ಬಸ್ಸು ಸಂಚಾರ ಸಂಚಾರ ರದ್ದು ಪಡಿಸುವುದಾಗಿ ಪ್ರಕಟಿಸಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ನಿರ್ಧಾರ ಬದಲಿಸಿ, ಬಸ್ಸುಗಳನ್ನು ರಸ್ತೆಗಿಳಿಸಿದೆ. ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಬಸ್ಸು ಸಂಚಾರವನ್ನು ತಕ್ಷಣವೇ ವಾಪಸ್ಸು ಪಡೆಯುವುದಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಬೆಂಗಳೂರಿನ ಹನುಮಂತನಗರ, ವಿಜಯನಗರ ಮುಂತಾದ ಕೆಲವು ಪ್ರದೇಶಗಳಲ್ಲಿ ಬಸ್ಸುಗಳ ಸಂಚಾರಕ್ಕೆ ಅಡ್ಡಿ ಪಡಿಸಲು ಕೆಲವು ಮಂದಿ ನಡೆಸಿದ ಪ್ರಯತ್ನವನ್ನು , ಸಕಾಲಕ್ಕೆ ಮಧ್ಯ ಪ್ರವೇಶಿಸಿದ ಪೊಲೀಸರು ವಿಫಲಗೊಳಿಸಿದರು.

ನಗರದ ಅಂಗಡಿ ಮುಂಗಟ್ಟುಗಳು ಬಹುತೇಕ ತಮ್ಮ ಎಂದಿನ ಚಟುವಟಿಕೆಯಲ್ಲಿ ನಿರತವಾಗಿವೆ. ಆದರೆ, ಕೆಲವು ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ನೌಕರರು ಬಂದ್‌ ಭಯದಿಂದ ಮನೆಯಲ್ಲಿಯೇ ಉಳಿದಿದ್ದು , ಗಿಜಿಗುಡುತ್ತಿದ್ದ ರಸ್ತೆಗಳಲ್ಲಿ ವಾಹನ ದಟ್ಟಣಿ ಕಡಿಮೆಯಿದೆ.

ಸ್ಕೂಲಿಗೆ ರಜೆಯಾ ?

ಶಾಲಾ- ಕಾಲೇಜಿಗೆ ರಜೆಯಾ ಎನ್ನುವ ಪ್ರಶ್ನೆ ಬೆಂಗಳೂರಿನ ಮನೆ ಮನೆಗಳಲ್ಲಿ ಗುರುವಾರ ಕೇಳಿ ಬರುತ್ತಿತ್ತು . ಕೆಲವೇ ಕೆಲವು ಶಾಲಾ ಕಾಲೇಜುಗಳು ರಜೆ ಘೋಷಿಸಿದ್ದರೆ, ಬಹುತೇಕ ಶಾಲೆ ಕಾಲೇಜುಗಳ ನಿರ್ಧಾರ ಹೊರಬಿದ್ದಿರಲಿಲ್ಲ . ಅಲ್ಲದೆ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬೇರೆ ನಡೆಯುತ್ತಿರುವುದರಿಂದ ರಜೆಯ ವಿಷಯ ಗೊಂದಲ ತಂದಿತ್ತು .

ಬಿಗಿ ಬಂದೋಬಸ್ತ್‌ , ಪ್ರತಿಬಂಧಕಾಜ್ಞೆ

ಭಾರತ್‌ ಬಂದ್‌ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗುರುವಾರ ಮಧ್ಯರಾತ್ರಿಯವರೆಗೆ ಬೆಂಗಳೂರು ನಗರದಲ್ಲಿ ಪ್ರತಿಬಂಧಕಾಜ್ಞೆ ವಿಧಿಸಿ ನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ಆದೇಶ ಹೊರಡಿಸಿದ್ದಾರೆ. ಇದೇ ವೇಳೆಯಲ್ಲಿ ಮದ್ಯ ಮಾರಾಟ, ಮೆರವಣಿಗೆ ನಡೆಸುವುದು, ಗುಂಪು ಕೂಡುವುದು, ಮಾರಕಾಸ್ತ್ರ ಸಾಗಾಟ ಮುಂತಾದುದನ್ನು ನಿಷೇಧಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more