• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನ ಮಂಡಲದ ಕಲಾಪ ಅಕ್ಟೋಬರ್‌ ಮೊದಲ ವಾರಕ್ಕೆ ಮುಂದೂಡಿಕೆ

By Staff
|

ಬೆಂಗಳೂರು : ಕಾವೇರಿ ಸಮಸ್ಯೆ ಕುರಿತ ಚರ್ಚೆಗಾಗಿ ಮಂಗಳವಾರ ಕರೆಯಲಾಗಿದ್ದ ವಿಧಾನ ಸಭೆಯ ಉಭಯ ಸದನಗಳ ತುರ್ತು ಕಲಾಪವನ್ನು ಅಕ್ಟೋಬರ್‌ವರೆಗೆ ಮುಂದೂಡಲಾಯಿತು.

ಕಾವೇರಿ ಸಮಸ್ಯೆ ಪ್ರಸ್ತುತ ಸುಪ್ರಿಂಕೋರ್ಟಿನ ಕಟಕಟೆಯಲ್ಲಿರುವುದರಿಂದ ಅದರ ಚರ್ಚೆ ಮಾಡಲಾಗದು. ಕಾವೇರಿ ನದಿ ಪರಿಶೀಲನಾ ಸಮಿತಿ ಕೂಡ ರಾಜ್ಯಕ್ಕೆ ಈಗ ಭೇಟಿ ಕೊಟ್ಟಿದೆ. ಹೀಗಾಗಿ ಚರ್ಚೆಗೆ ಪಕ್ಕಾ ಅಂಕಿ- ಅಂಶಗಳು ಅಲಭ್ಯ. ಈ ಹಿನ್ನೆಲೆಯಲ್ಲಿ ಕಲಾಪಗಳನ್ನು ಮುಂದೂಡಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ಎಂ.ವಿ.ವೆಂಕಟಪ್ಪ ಮತ್ತು ವಿಧಾನ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌ ಆಯಾ ಸದನಗಳಲ್ಲಿ ಘೋಷಿಸಿದರು.

ಅಕ್ಟೋಬರ್‌ ಮೊದಲ ವಾರದಲ್ಲಿ ಮತ್ತೆ ಕಲಾಪ ನಡೆಸಿ, ಕಾವೇರಿ ಸಮಸ್ಯೆಯ ಜೊತೆಗೆ ಬರ ಪರಿಹಾರ, ನಾಗಪ್ಪನವರ ಅಪಹರಣ, ಆಲಮಟ್ಟಿ ಅಣೆಕಟ್ಟು ಯೋಜನೆಯಿಂದಾಗಿರುವ ಅನನುಕೂಲಗಳ ಬಗ್ಗೆ ಚರ್ಚಿಸುವುದಾಗಿ ಉಭಯ ಸದನಗಳ ಸಭಾಧ್ಯಕ್ಷರು ಹೇಳಿದರು.

ತುರ್ತು ಕಲಾಪಕ್ಕೆ ಬುಲಾವು ಕೊಟ್ಟ ಕಾರಣವೇ ಕಾವೇರಿ ಸಮಸ್ಯೆಯ ಚರ್ಚೆ. ಆದರೆ, ಕರೆ ಕೊಟ್ಟ ನಂತರ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರಿಂಕೋರ್ಟಿನಲ್ಲಿ ನ್ಯಾಯಾಲಯ ನಿಂದನೆ ಅರ್ಜಿ ಹಾಕಿತು. ಈಗ ಮುಖ್ಯಮಂತ್ರಿಗಳಿಗೆ ಅಪೆಕ್ಸ್‌ ಕೋರ್ಟು ನೋಟಿಸನ್ನೂ ಜಾರಿ ಮಾಡಿದೆ. ಇಂಥಾ ಪರಿಸ್ಥಿತಿಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸುವುದು ತರವಲ್ಲ ಎಂದು ವೆಂಕಟಪ್ಪ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಕಲಾಪಗಳನ್ನು ಮುಂದೂಡುವ ಮುನ್ನ ಎ.ವಿ.ಮುನಿಸ್ವಾಮಿ, ಶಂಕರ್‌ ಗೌಡ್‌ ವಿ. ಪಾಟೀಲ್‌, ಬಿ.ಎನ್‌.ಕೆ.ಪಾಪಯ್ಯ, ಬಿ.ವಿಕಾರಂತ ಮತ್ತು ಕಾವೇರಿಗಾಗಿ ಆತ್ಮಾಹುತಿ ಮಾಡಿದ ಬೀಚನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗುರುಸ್ವಾಮಿ- ಈ ಎಲ್ಲಾ ಅಗಲಿದ ನಾಯಕರಿಗೆ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು.

ಚರ್ಚಿಸಲು ಬೇಕಾದಷ್ಟು ಸಮಸ್ಯೆಗಳಿದ್ದವು : ಕಾವೇರಿ ಹೊರತು ಪಡಿಸಿ ಬೇಕಾದಷ್ಟು ಸಮಸ್ಯೆಗಳಿವೆ. ಸದನಗಳಲ್ಲಿ ಅವುಗಳನ್ನು ಚರ್ಚಿಸಬಹುದಾಗಿತ್ತು. ಅದು ಬಿಟ್ಟು ಕಲಾಪಗಳನ್ನೇ ಮುಂದೂಡಿರುವುದು ಬಿಕ್ಕಟ್ಟು ನಿರ್ವಹಣೆಯಲ್ಲಿ ಸರ್ಕಾರ ಸೋತಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡರು. ವಿಧಾನಸಭಾ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಇದನ್ನು ಸಮರ್ಥಿಸಿದರು.

(ಪಿಟಿಐ)

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X