ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಪಟ್ಟಾಂಗ’ ಪತ್ರಿಕೆಯ ಏಳನೇ ಬರ್ತಡೇಯಲ್ಲಿ ಗಣ್ಯರ ಪಟ್ಟಾಂಗ...

By Staff
|
Google Oneindia Kannada News

*ಸದಾಶಿವ ಕೆ.

Veerabhadra Chennamalla Deshikendra Swamijiಮಂಗಳೂರು : ಸ್ವಾತಂತ್ರ್ಯಾ ನಂತರದ ರಾಜಕೀಯ ನಾಯಕರು ಉತ್ತಮ ಧ್ಯೇಯಗಳನ್ನು ಮರೆತು ಸ್ಥಳೀಯ ಸಾಧನೆಯಲ್ಲಿ ತೊಡಗಿದ್ದಾರೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ವಿಷಾದಿಸಿದ್ದಾರೆ.

ನಗರದ ಪುರಭವನದಲ್ಲಿ ಸೋಮವಾರ ನಡೆದ ‘ಪಟ್ಟಾಂಗ’ ಪಾಕ್ಷಿಕ ಪತ್ರಿಕೆಯ ಏಳನೆಯ ವಾರ್ಷಿಕ ಸಮಾರಂಭ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಎಲ್ಲಾ ಕ್ಷೇತ್ರದಲ್ಲಿಯೂ ನಿಷ್ಠೆಯಿಂದ ಕೆಲಸ ಮಾಡುವ ವ್ಯಕ್ತಿಗಳ ಕೊರತೆಯಿದೆ. ಮಾಧ್ಯಮ ಕ್ಷೇತ್ರ ಕೂಡ ಇದಕ್ಕೆ ಹೊರತೇನಲ್ಲ. ಸ್ವಾತಂತ್ರ್ಯ ತಂದುಕೊಡಲು ಪ್ರಬಲ ಶಕ್ತಿಯಾಗಿದ್ದ ಪತ್ರಿಕೋದ್ಯಮ ಇಂದು ಯಃಕಶ್ಚಿತ್‌ ಹೊಟ್ಟೆಪಾಡಿನ ಉದ್ಯೋಗವಾಗಿಬಿಟ್ಟಿದೆ ಎಂದರು.

ಸ್ವದೇಶಿ ಅಂತ ಹೇಳಿಕೊಳ್ಳುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರ, ಮುದ್ರಣ ಮಾಧ್ಯಮದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಬಾಗಿಲು ತೆರೆದು ತನ್ನ ಬೌದ್ಧಿಕ ದಿವಾಳಿತನ ಮೆರೆದಿದೆ. ಜಾಗತೀಕರಣ ಮತ್ತು ಉದಾರೀಕರಣದ ನೆಪದಲ್ಲಿ ಸಾಮ್ರಾಜ್ಯಶಾಹಿಗಳ ಕೈಗೆ ಆಡಳಿತ ಕೊಡುತ್ತಿದ್ದೇವೆ ಎಂದು ತರಾಟೆಗೆ ತೆಗೆದುಕೊಂಡರು.

ಜೈ ಪತ್ರಿಕೆ, ಬೈ ಪತ್ರಿಕೆ...
ರಾಜಕೀಯ ವ್ಯಕ್ತಿಗಳು ಯಾವುದಾದರೂ ಪತ್ರಿಕೆಗೆ ಸಹಾಯ ಮಾಡಿದರೆ, ಅಂಥಾ ಪತ್ರಿಕೆ ಆತನನ್ನು ಹೊಗಳಿ ಬರೆಯುತ್ತದೆ. ಸಹಾಯ ಮಾಡದಿದ್ದರೆ ತೆಗಳಿ ಬರೆಯುತ್ತವೆ. ಮೊದಲನೆಯದು ಜೈ ಪತ್ರಿಕೆ, ಎರಡನೆಯದು ಬೈ ಪತ್ರಿಕೆ ಎಂದು ಸ್ವಾಮೀಜಿ ಕಟಕಿಯಾಡಿದರು.

ಪಟ್ಟಾಂಗ ಪ್ರಶಸ್ತಿ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಪ್ರಶಸ್ತಿಗೆ ಭಾಜನರಾದವರು-

  • ಉತ್ತಮ ಸಮಾಜ ಸೇವಾ ಪ್ರಶಸ್ತಿ- ಬೆಳ್ತಂಗಡಿಯ ಸಿಯೋನಾಶ್ರಮದ ಯು.ಸಿ. ಫೌಲೋಸ್‌
  • ಉತ್ತಮ ರಾಜಕಾರಣಿ- ಉಳ್ಳಾಲ ಕ್ಷೇತ್ರದ ಮಾಜಿ ಶಾಸಕ, ಕವಿ ಬಿ.ಎಂ.ಇದಿನಬ್ಬ
  • ಉತ್ತಮ ಪತ್ರಕರ್ತ- ಯು.ನರಸಿಂಹ ರಾವ್‌
  • ಉತ್ತಮ ಉದ್ಯೋಗ ಪತಿ- ಮುಂಬಯಿಯ ಬನಾನಿ ಸಾಗರ್‌ ಸಮೂಹ ಸಂಸ್ಥೆ
ಪಟ್ಟಾಂಗ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಲಂಕೇಶ್‌ ಪತ್ರಿಕೆ ಪ್ರಕಾಶಕ ಹಾಗೂ ಸಿನಿಮಾ ನಿರ್ದೇಶಕ ಪಿ. ಎಲ್‌.ಇಂದ್ರಜಿತ್‌ ಬಿಡುಗಡೆ ಮಾಡಿದರು. ಸಾರಿಗೆ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಶಶಿಧರ ಹೆಗ್ಡೆ, ಶಾಸಕರಾದ ವಿಜಯಕುಮಾರ್‌ ಶೆಟ್ಟಿ ಮತ್ತು ಪ್ರಭಾಕರ ಬಂಗೇರ ಮೊದಲಾದವರು ಹಾಜರಿದ್ದರು. ‘ಪಟ್ಟಾಂಗ’ದ ಸಂಪಾದಕ ಆ್ಯಂಡ್ರೂ ಪೌಲ್‌ ಪ್ರಾಸ್ತಾವಿಕ ಭಾಷಣ ಮಾಡಿ, ಸ್ವಾಗತಿಸಿದರು.

ವಿದೇಶೀ ಬಂಡವಾಳ ಬೇಡ

ನಿಮ್ಮ ಪಟ್ಟಾಂಗ ಹೇಗೆ ನಡೀತಿದೆ ಸ್ವಾಮಿ? ಅಂತ ಸಂಪಾದಕರನ್ನು ಕೇಳಿದಾಗ...ಚಲೋ ನಡೀತಿದೆ ಅಂದರು. 1994ರಲ್ಲಿ ಶುರುವಾದ ಈ ಪತ್ರಿಕೆ ಇವತ್ತು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿದೆ. ಸಂಪಾದಕರ ಪ್ರಕಾರ- ಈ ಪತ್ರಿಕೆ ಯಾವುದೇ ರಾಜಕೀಯ ಪಕ್ಷ ಅಥವಾ ಜಾತಿಯಾಂದಿಗೆ ಗುರುತಿಸಿಕೊಂಡಿಲ್ಲ. ವೈಚಾರಿಕತೆ, ಹೊಸತನ ಮತ್ತು ಜನಾಭಿಪ್ರಾಯಕ್ಕೆ ಮನ್ನಣೆ ಕೊಡುವ ‘ಪಟ್ಟಾಂಗ’ ಯಾವುದೇ ತತ್ತ್ವಕ್ಕೆ ಜೋತು ಬಿದ್ದಿಲ್ಲ.

ಮುದ್ರಣ ಮಾಧ್ಯಮಕ್ಕೆ ವಿದೇಶೀ ಬಂಡವಾಳ ಬೇಕೋ ಬೇಡವೋ ಅಂತ ಪೌಲ್‌ ಅವರನ್ನು ಕೇಳಲು, ಬೇಡ ಎಂದು ಅವರು ಉತ್ತರಿಸಿದರು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X