ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಎಚ್‌ಪಿಯಿಂದ ನರೇಂದ್ರ ಮೋದಿ ವಿವಾದಾತ್ಮಕ ಭಾಷಣದ ಲಕ್ಷ ಕೆಸೆಟ್‌

By Staff
|
Google Oneindia Kannada News

ಜೈಪುರ : ಮುಸ್ಲಿಂ ಸಮುದಾಯದ ವಿರುದ್ಧದ ಟೀಕೆ ಎನ್ನಲಾದ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿವಾದಿತ ಭಾಷಣದ 1 ಲಕ್ಷ ಕೆಸೆಟ್‌ಗಳನ್ನು ದೇಶಾದ್ಯಂತ ವಿತರಿಸುವುದಾಗಿ ವಿಶ್ವ ಹಿಂದೂ ಪರಿಷತ್‌(ವಿಎಚ್‌ಪಿ) ಪ್ರಕಟಿಸಿದೆ.

ಕಾಂಗ್ರೆಸ್‌ ಸೇರಿದಂತೆ ಡಬ್ಬಲ್‌ ಗೇಮ್‌ ಆಡುವ ಪಕ್ಷಗಳಿಂದ ದೂರವಿರಿ ಎಂದು ಸೆಪ್ಟಂಬರ್‌ 3 ರಂದು ನರೇಂದ್ರ ಮೋದಿ ಮಾಡಿದ್ದ ಭಾಷಣದ 1 ಲಕ್ಷ ಪ್ರತಿಗಳನ್ನು ದೇಶಾದ್ಯಂತ ಹಂಚಲಾಗುವುದು ಎಂದು ವಿಎಚ್‌ಪಿಯ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಭಾಯ್‌ ತೊಗಾಡಿಯ ಸೋಮವಾರ (ಸೆ.23) ಸುದ್ದಿಗಾರರಿಗೆ ತಿಳಿಸಿದರು.

ನರೇಂದ್ರ ಮೋದಿ ಭಾಷಣದಲ್ಲಿ ಮುಸ್ಲಿಂಮರ ವಿರುದ್ಧ ಅನ್ನುವಂಥ ಅವಹೇಳನಕಾರಿ ಮಾತುಗಳೇನೂ ಇಲ್ಲ. ಭಾಷಣದಲ್ಲಿ ಗುಜರಾತಿ ನುಡಿಗಟ್ಟುಗಳನ್ನು ಬಳಸಲಾಗಿದೆ ಅಷ್ಟೇ. ಗುಜರಾತಿ ಭಾಷೆಯಲ್ಲಿರುವ ಕೆಸಟ್ಟನ್ನು ಪರಿಚಯಾತ್ಮಕ ಮಾತುಗಳೊಂದಿಗೆ ಹಿಂದಿಗೆ ಡಬ್‌ ಮಾಡಿ ವಿತರಿಸಲಾಗುವುದು ಎಂದು ತೊಗಾಡಿಯಾ ಹೇಳಿದರು.

ದೇಶದ ಜಾತ್ಯತೀತ ಕಾನೂನಿಗೆ ವಿರುದ್ಧವಾದ ಇಸ್ಲಾಮಿಕ್‌ ಧಾರ್ಮಿಕತೆಯ ಬಗ್ಗೆ ಸೆಕ್ಯುಲರ್‌ ಮೂಲಭೂತವಾದಿಗಳು ಅಲಕ್ಷ್ಯ ವ್ಯಕ್ತಪಡಿಸುತ್ತಿದ್ದಾರೆ. ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ಮೂಲಕ ಜಾತ್ಯತೀತ ಸಂವಿಧಾನವನ್ನು ಗೌರವಿಸಬೇಕು ಹಾಗೂ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತಂತೆ ಉತ್ತರ ಪ್ರದೇಶದಲ್ಲಿ ಹಿಂದೂಗಳ ‘ಧರ್ಮ ರಕ್ಷ’ ರ್ಯಾಲಿಯನ್ನು ಸೆಪ್ಟಂಬರ್‌ 29 ರಂದು ನಡೆಸಲಾಗುವುದು ಎಂದು ತೊಗಾಡಿಯಾ ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X