ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಕೃಷ್ಣರ ಕಾಯೆ ಕಟೀಲು ದುರ್ಗಾ ಪರಮೇಶ್ವರಿ ತಾಯೆ

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

Kateelu Durga Parameshwari‘ಉಕ್ಕ ಬೇಕಾಗಿರುವುದು ಕಾವೇರಿ ಪೂರವೇ ಹೊರತು, ನಮ್ಮ ಭಾವನೆಗಳ ಉದ್ರೇಕವಲ್ಲ. ಜಟಿಲ ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿ ನಮಗೆಲ್ಲಾ ಬರಲಿ..’

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಈ ಮಾತುಗಳನ್ನಾಡಿದ್ದರು. ಮಳೆ ಕೈ ಕೊಟ್ಟ ಹತಾಶೆ, ಮಳೆಯಿಂದಾಗಿ ಉಂಟಾದ ಭೀಕರ ಬರ, ಮಳೆಯಿಂದಾಗಿಯೇ ಭುಗಿಲೆದ್ದ ಕಾವೇರಿ ಕೆನ್ನಾಲಿಗೆ- ಎಲ್ಲವೂ ಕೃಷ್ಣ ಅವರ ಮಾತುಗಳಲ್ಲಿ ಸುಳಿದಿದ್ದವು. ಕೃಷ್ಣ ಅವರ ಪ್ರತಿ ಮಾತೂ ತೂಕದಿಂದ, ಜವಾಬ್ದಾರಿಯಿಂದ ಕೂಡಿತ್ತು. ಆದರೆ, ಅವರ ಮುಖ- ಕಣ್ಣು ಹಾಗೂ ದನಿಯಲ್ಲಿನ ಕಂಪನವನ್ನು ಗಮನಿಸಿದ್ದರೆ ಅಲ್ಲಿ ಹತಾಶೆ ಸುಳಿದಾಡುತ್ತಿದ್ದುದನ್ನು ಯಾರಾದರೂ ಗಮನಿಸಬಹುದಿತ್ತು.

ನಾಡಿನ ನಾಯಕನೇ ಹತಾಶನಾಗಿ ಕುಳಿತುಬಿಟ್ಟರೆ ?
ಅಂಥದೊಂದು ಸಂಗತಿಯನ್ನು ಊಹಿಸಿಕೊಳ್ಳುವುದೂ ಕಷ್ಟ. ಮನೆಯ ಬಾಗಿಲಲ್ಲೇ ಚಂಡಮಾರುತ ಸುಳಿದಾಡುತ್ತಿದ್ದಾಗಲೂ ಮನೆಯ ಯಜಮಾನ ಧೈರ್ಯಗೆಡಬಾರದು. ಮನೆ ಮಂದಿಗೆ ಧೈರ್ಯ ತುಂಬುವುದು ಹಾಗೂ ಮನೆ ಮಂದಿಯ ಹಿತಾಸಕ್ತಿಗಾಗಿ ಸಾಧ್ಯವಿರುವ ಎಲ್ಲ ದಾರಿಗಳನ್ನೂ ಹುಡುಕುವುದು, ಆ ದಾರಿಯಲ್ಲಿ ಮುನ್ನಡೆಸುವುದು ಮನೆಯಾಡೆಯನ ಕರ್ತವ್ಯ. ಆತ ಬಸ್ಸಿನ ಡ್ರೆೃವರ್‌ ಇದ್ದಂತೆ. ಅಂಥ ಡ್ರೆೃವರ್‌ ಸೀಟಿನಲ್ಲಿ ಕೃಷ್ಣ ಕೂತಿದ್ದಾರೆ. ಅವರ ಕೈ ನಡುಗಿದರೆ, ಪ್ರಜೆಗಳ ಭಾವನೆಗಳೂ ಉಕ್ಕುತ್ತವೆ. ಆದರೆ, ಕೃಷ್ಣ ಕೂಡ ಮನುಷ್ಯ ಮಾತ್ರದವರಲ್ಲವಾ? ಅವರಿಗೆ ಧೈರ್ಯ ತುಂಬುವವರು, ಕೈಗಂಭವಾಗುವವರು ಯಾರು?

ಮಳೆಯೇ ಎಲ್ಲದಕ್ಕೂ ಪರಿಹಾರ ಎಂದು ಕೃಷ್ಣ ವೇದಾಂತಿಯಾಗುತ್ತಾರೆ. ಮಳೆ ಅಂದರೆ ಪ್ರಕೃತಿ. ಆ ಪ್ರಕೃತಿ ಕೃಷ್ಣ ಅವರಿಗೆ ಒಲಿಯುವುದು ಹೇಗೆ ? ಕಟೀಲು ದುರ್ಗಾ ಪರಮೇಶ್ವರಿ ದೇವಿಯೇನಾದರೂ ಕರುಣೆ ತೋರುವಳೇ? ದೇವಿಯ ಕರುಣೆಯನ್ನು ಕೋರುವ ಪ್ರಯತ್ನಗಳಂತೂ ನಡೆದಿವೆ !

ಇತ್ತ ಹುಲಿ, ಅತ್ತ ದರಿ ಎನ್ನುವಂತೆ ಕಾವೇರಿ ಮತ್ತು ವೀರಪ್ಪನ್‌ ಸಮಸ್ಯೆಗಳ ಅಡಕತ್ತರಿಯಲ್ಲಿ ಸಿಲುಕಿರುವ ಕೃಷ್ಣ ಅವರಿಗೆ- ಗಂಭೀರ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ಕೊಡುವಂತೆ ಪ್ರಾರ್ಥಿಸಿ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದಿದೆ.

ದುರ್ಗಾ ಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ದೇವಿಗೆ 1008 ಎಳನೀರು ಅಭಿಷೇಕವನ್ನು ಭಾನುವಾರ (ಸೆ.22) ನೆರವೇರಿಸಲಾಯಿತು. ಮೂಲ್ಕಿ ಮೂಡಬಿದಿರೆಯ ಶಾಸಕ ಅಭಯಚಂದ್ರ ಜೈನ್‌ ಪೂಜಾ ಕಾರ್ಯಗಳ ನೇತೃತ್ವ ವಹಿಸಿದ್ದರು.

ದೇವಸ್ಥಾನದಲ್ಲಿ ರಾಜಕೀಯ ನಾಯಕರ ದಂಡೇ ನೆರೆದಿತ್ತು. ಮಾಜಿ ಶಾಸಕ ಕೆ. ಸೋಮಪ್ಪ ಸುವರ್ಣ, ಮೂಲ್ಕಿ ಪುರಸಭೆಯ ಮಾಜಿ ಅಧ್ಯಕ್ಷ ಶೇಖರ ವಿ. ಕೋಟ್ಯಾನ್‌, ಅನಂತ ಪದ್ಮನಾಭ ಆಸ್ರಣ್ಣ, ವೇದ ವ್ಯಾಸ ತಂತ್ರಿ, ಸ್ಥಳೀಯ ಕಾಂಗ್ರೆಸ್‌ನಾಯಕರು, ಮತ್ತಿತರರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಪೂಜೆಯೇನೊ ಸಲ್ಲಿಸಿದ್ದಾಯಿತು. ದೇವಿ ಪ್ರಸನ್ನಳಾದಾಳೆ ? ತಮಿಳು ಅಮ್ಮನ ದಾಹ ತೀರೀತೇ !?

ಅಂದಹಾಗೆ : ಮೈಸೂರಿನ ಚಾಮುಂಡೇಶ್ವರಿ ದೇವಿಗೂ ವಿಶೇಷ ಪ್ರಾರ್ಥನೆ ಸಲ್ಲಿಸುವುದು ಒಳ್ಳೆಯದು. ಏಕೆಂದರೆ ತಮಿಳು ಅಮ್ಮ ಚಾಮುಂಡಮ್ಮನ ಭಕುತೆ!

Post your Views

ಪೂರಕ ಓದಿಗೆ-
ಕಟೀಲು ಮೊಕ್ತೇಸರರ ಅಮಾನತು

ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X