• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿ ಹೋರಾಟಕ್ಕೆ ಸಾಹಿತಿಗಳ ದಂಡು, ಚಳವಳಿಗೀಗ ಆನೆ ಬಲ !

By Staff
|

ಮೈಸೂರು : ಜನಪ್ರಿಯ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ, ಪ್ರೊ. ದೇ.ಜವರೇಗೌಡ, ಪ್ರೊ.ಜಿ.ಎಚ್‌.ನಾಯಕ, ಅಕಬರ ಅಲಿ, ಆರ್ಯಾಂಬ ಪಟ್ಟಾಭಿ, ಡಾ. ಸಿಪಿಕೆ, ಎಚ್ಚೆಸ್ಕೆ, ಡಾ. ಲತಾ ರಾಜಶೇಖರ್‌, ಜಿ.ನಾರಾಯಣ ರಾವ್‌, ಕೃಷ್ಣಮೂರ್ತಿ ಹನೂರು... ಮೊದಲಾದ ಸಾಹಿತಿಗಳ, ರಂಗಕರ್ಮಿಗಳ ದಂಡು ಕಾವೇರಿ ಹೋರಾಟಕ್ಕೆ ಧುಮುಕಿದೆ. ಈ ಮೂಲಕ ಚಳವಳಿಗೆ ಈಗ ಆನೆ ಬಲ !

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಭಾನುವಾರ ಈ ಧೀಮಂತರೆಲ್ಲಾ ಚಳವಳಿಗೆ ಧುಮುಕಿದರು. ಅರಮನೆ ದ್ವಾರದಿಂದ ಕೆ.ಆರ್‌.ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ದಿಗ್ಗಜರು ಹೊರಹಾಕಿದ ಚಳವಳಿ ಕಳಕಳಿಯ ಆಯ್ದ ಮಾತುಗಳು ಹೀಗಿವೆ...

  • ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿ ಪಡಿಸಲು ಪೆರಿಯಾರ್‌ ಮಾದರಿಯ ಹೋರಾಟ ಹುಟ್ಟುಹಾಕಬೇಕು : ದೇ.ಜವರೇಗೌಡ.
  • ಹೀಗೆಯೇ ನಾವು ಔದಾರ್ಯ ತೋರಿಸಿ ಕಾವೇರಿಯನ್ನು ತಮಿಳುನಾಡಿಗೆ ಬಿಡುತ್ತಿದ್ದರೆ, 100 ವರ್ಷಗಳ ನಂತರ ಕಾವೇರಿ ಜಲಾನಯನ ಪ್ರದೇಶ ಮರುಭೂಮಿಯಾಗುತ್ತದೆ : ಎಚ್ಚೆಸ್ಕೆ.
  • ನ್ಯಾಯಾಲಯಗಳು ಜಲ ವಿವಾದ ಬಗೆಹರಿಸಿದ ಉದಾಹರಣೆಗಳು ಯಾವ ದೇಶದಲ್ಲೂ ಇಲ್ಲ. ರಾಷ್ಟ್ರೀಯ ಜಲನೀತಿಯಾಂದೇ ಇದಕ್ಕೆ ಶಾಶ್ವತ ಪರಿಹಾರ : ಡಾ.ಸಿ.ಕೆ.ಎನ್‌.ರಾಜಾ.
  • ಕರ್ನಾಟಕದ ಜನರ ಅಭಿಮಾನ ಶೂನ್ಯತೆಯೇ ಈ ಸಮಸ್ಯೆ ನಮ್ಮನ್ನು ಕಾಡಲು ಕಾರಣ. ಅಗ್ನಿ ಪರೀಕ್ಷೆಯಂತಿರುವ ಈ ಜಲ ಪರೀಕ್ಷೆಯಲ್ಲಿ ನಾವು ಪಾಸಾಗಲೇಬೇಕು : ಡಾ. ಸಿಪಿಕೆ.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ ಕನ್ನಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more