ಪರೀಕ್ಷೆಯಲ್ಲಿ ಕಡಿಮೆ ಅಂಕ ; ಮಗಳಿಗೆ ಬೆಂಕಿ ಹಚ್ಚಿ ಕೊಂದ ತಾಯಿ
ದಾವಣಗೆರೆ : ಶಾಲೆಯ ಮಾಸಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ತೆಗೆದು ತಾಯಿಯ ಉರಿಗಣ್ಣಿಗೆ ತುತ್ತಾಗಿದ್ದ ಬಾಲಕಿ ಅಂಚಲ್ ಸೆ.19 ರ ಶುಕ್ರವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ನಾಲ್ಕನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ಅಂಚಲ್ ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಕಾರಣಕ್ಕೆ ಸಿಟ್ಟಿಗೆದ್ದ ಬಾಲಕಿಯ ತಾಯಿ, ಮಗಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ದಾವಣಗೆರೆಯ ಪಿ.ಜೆ.ಬಡಾವಣೆಯಲ್ಲಿ ನಡೆದ ಈ ಅಮಾನುಷ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶೇ.60ರಷ್ಟು ಮೈ ಸುಟ್ಟುಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಂಚಲ್ ಶುಕ್ರವಾರ ಕೊನೆಯುಸಿರೆಳೆದಳು.
ಮೃತ ಅಂಚಲ್ಳ ತಾಯಿ ಪದ್ಮಜಾ ಮಾನಸಿಕ ಅಸ್ವಸ್ಥರು ಎನ್ನಲಾಗಿದೆ. ಮಗಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವುದನ್ನು ನಿರಾಕರಿಸಿರುವ ಆಕೆ, ಬೆಂಕಿ ಆಕಸ್ಮಿಕವಾಗಿ ತಗುಲಿದೆ ಎಂದು ಹೇಳಿದ್ದಾರೆ.
ಕೊನೆ ಮಾತು : ಮಕ್ಕಳಿಗೆ ಪುಸ್ತಕದ ಮೂಟೆ ಹೊರಿಸಿ ಒತ್ತಾಯಿಸುವ ಅಪ್ಪ ಅಮ್ಮಂದಿರು ನನ್ನ ದೃಷ್ಟಿಯಲ್ಲಿ ರಾಕ್ಷಸರು- ಶಿವರಾಮ ಕಾರಂತ.
(ಇನ್ಫೋ ವಾರ್ತೆ)
Post Your Views
ಮುಖಪುಟ / ಇವತ್ತು... ಈ ಹೊತ್ತು...