ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಇನ್ಫೋಸಿಸ್‌ ಸಂಸ್ಥೆಗೆ ಫಣೀಶ್‌ ಮೂರ್ತಿ ಮರುಸೇರ್ಪಡೆ ಇಲ್ಲ’

By Staff
|
Google Oneindia Kannada News

ಬೆಂಗಳೂರು: ಲೈಂಗಿಕ ಕಿರುಕುಳದ ಆಪಾದನೆಯ ಮೇಲೆ ಕೆಲಸದಿಂದ ಕಿತ್ತು ಹಾಕಲಾಗಿದ್ದ ಇನ್ಫೋಸಿಸ್‌ ಸಂಸ್ಥೆಯ ಸೇಲ್ಸ್‌ ಆ್ಯಂಡ್‌ ಮಾರ್ಕೆಟಿಂಗ್‌ ವಿಭಾಗದ ಮಾಜಿ ಮುಖಸ್ಥ ಫಣೀಶ್‌ ಮೂರ್ತಿಯವರನ್ನು ಮತ್ತೆ ಸಂಸ್ಥೆಗೆ ಸೇರಿಸಿಕೊಳ್ಳುವ ಗಾಳಿ ಸುದ್ದಿಯನ್ನು ಇನ್‌ಫೋಸಿಸ್‌ ಅಧ್ಯಕ್ಷ ನಾರಾಯಣ ಮೂರ್ತಿ ಸಾರಾ ಸಗಟಾಗಿ ತಳ್ಳಿ ಹಾಕಿದ್ದಾರೆ.

ಇನ್ಫೋಸಿಸ್‌ನ ಮಾಜಿ ಉದ್ಯೋಗಿ ರೇಖಾ ಮ್ಯಾಕ್ಸಿಮೋವಿಚ್‌ ಅವರು ಫಣೀಶ್‌ ಮೂರ್ತಿಯ ಮೇಲೆ ಲೈಂಗಿಕ ಕಿರುಕುಳದ ಆಪಾದನೆ ಹೊರಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ಅವರನ್ನು ಉದ್ಯೋಗದಿಂದ ತೆಗೆದುಹಾಕಿದೆ. ಫಣೀಶ್‌ ಅವರನ್ನು ಮತ್ತೆ ಸಂಸ್ಥೆಗೆ ಕರೆಸಿಕೊಳ್ಳುವ ಬಗ್ಗೆ ತಾವು ಯಾವತ್ತೂ ಮಾತಾಡಿಲ್ಲ ಎಂದು ನಾರಾಯಣ ಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಕೆಲವು ಮಾಧ್ಯಮಗಳು ಫಣೀಶ್‌ ಮೂರ್ತಿ ಮತ್ತೆ ಇನ್ಫೋಸಿಸ್‌ ಸೇರಿಕೊಳ್ಳುವ ಸಂಭವವಿರುವುದಾಗಿ ಪ್ರಕಟಿಸಿದ್ದವು. ಈ ಹಿನ್ನೆಲೆಯಲ್ಲಿ ನಾರಾಯಣ ಮೂರ್ತಿ, ಪ್ರಕಟಣೆಯಾಂದರಲ್ಲಿ ಫಣೀಶ್‌ ಮೂರ್ತಿಯವರ ವಾಪಸ್ಸಾಗುವಿಕೆಯನ್ನು ಶುಕ್ರವಾರ ನಿರಾಕರಿಸಿದ್ದಾರೆ.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X