• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್‌ ಎಂ.ವಿಶ್ವೇಶ್ವರಯ್ಯ- ನೆನಪು

By Staff
|

ಕಾವೇರಿ ನೆನಪಾದರೆ ವಿಶ್ವೇಶ್ವರಯ್ಯ ನೆನಪಾಗುತ್ತಾರೆ. ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ವಿವಾದದ ಕಾವು ಏನೇ ಇರಲಿ, ರೈತರ ಹಿತಕ್ಕಾಗಿ ಮಹತ್ವದ ಕೆಲಸ ಮಾಡಿದ ವಿಶ್ವೇಶ್ವರಯ್ಯಅವರಿಗೆ ನೂರೊಂದು ನಮನ.

  • ಎಚ್‌.ಆರ್‌.ಶ್ರೀಶ

Sir M Vishveshwaraiahಕಾವೇರಿ ನದಿ ವಿವಾದ ಇಂದು ಮುಗಿಲು ಮುಟ್ಟಿದೆ. ಕರ್ನಾಟಕದ ಜನ ಸರ್‌ ಎಂ.ವಿಶ್ವೇಶ್ವರಯ್ಯನವರನ್ನು ನೆನಪಿಸಿಕೊಳ್ಳಬೇಕು. ಕೋಲಾರ ಜಿಲ್ಲೆ ಮುದ್ದೇನಹಳ್ಳಿ ಎಂಬ ಬೆಂಗಾಡಿನ ಗ್ರಾಮದಲ್ಲಿ ಜನಿಸಿದರೂ ಮಂಡ್ಯಕ್ಕೆ ಜೀವ ನೀಡಿದರು. ಇಂದಿನ ನೀರಾವರಿ ರೈತರು ಕೋಲಾರದ ರೈತರ ಕಡೆ ತಿರುಗಿ ನೋಡಬೇಕು.

ಶಿವನಸಮುದ್ರದಲ್ಲಿ ಮೊದಲ ಜಲ ವಿದ್ಯುತ್‌ ಉತ್ಪಾದನಾ ಕೇಂದ್ರ ಆರಂಭವಾದ ಮೇಲೆ ಅಲ್ಲಿಂದ ಕೋಲಾರದ ಚಿನ್ನದ ಗಣಿಗೆ ವಿದ್ಯುತ್‌ ಒದಗಿಸಲಾಗುತ್ತಿತ್ತು . ಬೇಸಿಗೆ ಕಾಲದಲ್ಲಿ ಕಾವೇರಿಯಲ್ಲಿ ನೀರು ಕಡಿಮೆಯಾಗಿ 50 ಕ್ಯೂಸೆಕ್ಸ್‌ ನೀರು ದೊರೆಯುವುದೂ ಕಷ್ಟವಾಗುತ್ತಿತ್ತು . ಪ್ರತಿವರ್ಷ ವಿವಿಧ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಣೆಗೆ 50 ಸಾವಿರ ರುಪಾಯಿ ವೆಚ್ಚವಾಗುತ್ತಿತ್ತು . ಇದನ್ನು ಕಂಡು ಆಗ ಮುಖ್ಯ ಎಂಜಿನಿಯರ್‌ ಆಗಿದ್ದ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಬಳ ಅಣೆಕಟ್ಟು ನಿರ್ಮಿಸಲು ಯೋಜಿಸಿದರು.

ಆಗ 80 ಅಡಿ ಎತ್ತರದ ಅಣೆಕಟ್ಟು ನಿರ್ಮಿಸಲು ಯೋಜಿಸಲಾಗಿತ್ತು . ವಿಶ್ವೇಶ್ವರಯ್ಯನವರು ಇದರಿಂದ ಶಿವನಸಮುದ್ರಕ್ಕೆ ವಿದ್ಯುತ್‌ ಉತ್ಪಾದನೆಗೆ ಮಾತ್ರ ನೀರು ಒದಗಿಸಬಹುದು. ಇದಕ್ಕೆ ಪರ್ಯಾಯವಾಗಿ 124 ಅಡಿ ಎತ್ತರದ ಅಣೆಕಟ್ಟು ನಿರ್ಮಿಸಿದರೆ ನೀರಾವರಿಗೂ ಅನುಕೂಲ ಎಂದು ಸಲಹೆ ಮಾಡಿದರು. ಮೈಸೂರು ರಾಜ್ಯ ಆಗ ಬಹಳ ಕಷ್ಟದ ಸ್ಥಿತಿಯಲ್ಲಿತ್ತು . ಆದರೂ ಮೈಸೂರು ಅರಸರು ರಾಜ್ಯದ ಹಣದಿಂದಲೇ ಅಣೆಕಟ್ಟು ನಿರ್ಮಿಸಿದರು. ವಿಶ್ವೇಶ್ವರಯ್ಯನವರ ಕಾರ್ಯಕ್ಷಮತೆಗೆ ಈ ಅಣೆಕಟ್ಟು ಇಂದಿಗೂ ಜೀವಂತ ನಿದರ್ಶನ.

ಇಲ್ಲಿನ ಪ್ರತಿಯಾಂದು ಕಲ್ಲೂ ವಿಶ್ವೇಶ್ವರಯ್ಯನವರ ಅಪ್ಪಣೆ ಇಲ್ಲದೆ ಕುಳಿತಿಲ್ಲ . ಆ ರೀತಿ ಬೆವರು ಸುರಿಸಿ ವಿಶ್ವೇಶ್ವರಯ್ಯ ನಿರ್ಮಿಸಿದ ಅಣೆಕಟ್ಟು ಇಂದು ಎರಡು ರಾಜ್ಯಗಳ ನದಿ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ವಿಶ್ವೇಶ್ವರಯ್ಯ ಕಾರಣರಲ್ಲ . ಅಣೆಕಟ್ಟು ನಿರ್ಮಿಸುವ ಸಂದರ್ಭದಲ್ಲೇ ತಮಿಳರು ಆಕ್ಷೇಪ ವ್ಯಕ್ತಪಡಿಸಿದ್ದರು. ಕನ್ನಂಬಾಡಿ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಬ್ರಿಟೀಷರ ಮೇಲೆ ಒತ್ತಡ ತಂದಿದ್ದರು. ಈಗ ಕೇಂದ್ರ ಸರ್ಕಾರ ಇರುವಂತೆ ಅಂದು ಬ್ರಿಟೀಷರು ಕರ್ನಾಟಕದ ವಿರುದ್ಧವಿದ್ದರು.

ಕೇಂದ್ರದಲ್ಲಿ ನೀರಾವರಿಯ ಇನ್ಸ್‌ಪೆಕ್ಟರ್‌ ಆಗಿದ್ದ ಜಾನ್‌ ಬೆನ್‌ಟನ್‌ ಮದ್ರಾಸ್‌ ಪ್ರಾಂತ್ಯದವರಿಗೆ ಸಲಹೆಗಾರನಾಗಿದ್ದ . ಆತ ಎಲ್ಲ ಮಾಹಿತಿಯನ್ನು ಮದ್ರಾಸಿನವರಿಗೆ ಒದಗಿಸಿ ಕರ್ನಾಟಕದವರಿಗೆ ಅನ್ಯಾಯ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಬ್ರಿಟೀಷರಿಗೆ ವಿಶ್ವೇಶ್ವರಯ್ಯನವರ ಬಗ್ಗೆ ಕೋಪವಿತ್ತು. ಆದರೆ ಅವರ ಬುದ್ಧಿಮತ್ತೆಯನ್ನು ಪ್ರಶ್ನಿಸುವ ಧೈರ್ಯ ಅವರಿಗಿರಲಿಲ್ಲ . ಮೇರಾ ಭಾರತ್‌ ಮಹಾನ್‌ ಘೋಷಣೆಯನ್ನು ವಿಶ್ವೇಶ್ವಯ್ಯನವರು ಆಗಲೇ ಹೇಳಿಯಾಗಿತ್ತು.

ಜಾನ್‌ ಬೆನ್‌ಟನ್‌ ವಿಶ್ವೇಶ್ವರಯ್ಯನವರೊಂದಿಗೆ ಚರ್ಚಿಸಿದಾಗ ತಮಿಳುನಾಡಿಗೆ ಹಲವಾರು ವರ್ಷಗಳಿಂದ ಹೆಚ್ಚುವರಿ ನೀರು ಹರಿದು ಹೋಗಿರುವುದನ್ನು ವಿಶ್ವೇಶ್ವರಯ್ಯ ಅಂಕಿ ಅಂಶಗಳ ಸಮೇತ ವಿವರಿಸಿದ್ದರು. ಕರ್ನಾಟಕ ತನ್ನ ಪಾಲಿನ ನೀರು ಬಳಸಿಕೊಳ್ಳಲು ಒಂದು ಯೋಜನೆ ರೂಪಿಸಬೇಕು ಎಂದು 1911 ರಲ್ಲೇ ವಿವರಿಸಿದ್ದರು. 1924 ರಲ್ಲಿ ಕಾವೇರಿ ಒಪ್ಪಂದವಾದಾಗ ವಿಶ್ವೇಶ್ವರಯ್ಯ ಮುಖ್ಯ ಎಂಜಿನಿಯರ್‌ ಆಗಿದ್ದರು. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ ಎಂಬುದು ಅವರಿಗೆ ಗೊತ್ತಿತ್ತು . ಬ್ರಿಟೀಷರ ಒತ್ತಡಕ್ಕೆ ಮಣಿದು ಒಪ್ಪಿಕೊಳ್ಳಬೇಕಾಗಿದೆ ಎಂದು ಹಲವು ಬಾರಿ ಹೇಳಿದ್ದರು. ರಾಜ್ಯದ ಮುಂದಿನ ಪರಿಸ್ಥಿತಿ ಮನಗಂಡಿದ್ದ ಅವರಿಗೆ ಕಣ್ಣೀರು ಬಂದಿತ್ತು . ವಿಶ್ವೇಶ್ವರಯ್ಯನವರು ಈಗ ಬದುಕಿದ್ದಿದ್ದರೆ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more