ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬಿನಿಯನ್ನು ನಂಬಿಕೊಂಡ ಬೆಳೆಗೆ ಡೆಡ್‌ ಸ್ಟೋರೇಜ್‌ ವಾಟರ್‌ !

By Staff
|
Google Oneindia Kannada News

ಬೆಂಗಳೂರು: ಕಬಿನಿ ಜಲಾಶಯದ ಗೇಟ್‌ ಮಟ್ಟಕ್ಕಿಂತ ಕೆಳಗೆ ನಿಲ್ಲುವ ಹತ್ತು ಟಿಎಂಸಿ ನೀರನ್ನು (ಡೆಡ್‌ಸ್ಟೋರೇಜ್‌ ವಾಟರ್‌)ಬಳಸಿಕೊಳ್ಳಲು ರಾಜ್ಯಸರಕಾರ ನಿರ್ಧರಿಸಿದೆ.

ಕಾವೇರಿ ಪ್ರಾಧಿಕಾರದ ನಿರ್ದೇಶನದಂತೆ ತಮಿಳುನಾಡಿಗೆ ರಾಜ್ಯದಿಂದ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಎಚ್‌. ಕೆ. ಪಾಟೀಲ್‌ ತಿಳಿಸಿದ್ದಾರೆ.

ಕಬಿನಿ ಪ್ರದೇಶದ ಒಂದು ಲಕ್ಷ ಎಕರೆ ಜಮೀನಿಗೆ ನೀರನ್ನು ಒದಗಿಸುವ ಉದ್ದೇಶದಿಂದ ತುರ್ತು ಪರ್ಯಾಯ ಯೋಜನೆಯ ಅನ್ವಯ ಈ ಕ್ರಮ ಕೈಗೊಂಡಿದ್ದೇವೆ. ಕಬಿನಿ ಗೇಟ್‌ ಕೆಳಗಿರುವ ನೀರನ್ನು ಸುಮಾರು 53 ಅಡಿಗಳ ಎತ್ತರಕ್ಕೆ ಹರಿಸಬೇಕಾಗುವುದರಿಂದ ಪ್ರತಿ ನಿತ್ಯ ಹತ್ತು ಲಕ್ಷ ರೂಪಾಯಿಗಳ ವಿದ್ಯುತ್‌ಬೇಕಾಗುತ್ತದೆ. ಒಟ್ಟು ಈ ಯೋಜನೆಗೆ ಐದು ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಪಾಟೀಲ್‌ ಹೇಳಿದರು.

ಕಬಿನಿ ಜಲಾಶಯಕ್ಕೆ ಒಳ ಹರಿದು ಬರುವ ನೀರು ಕಡಿಮೆಯಾದಲ್ಲಿ ಹಾಗೂ ಜಲಾನಯನ ಪ್ರದೇಶದಲ್ಲಿ ಮಳೆ ಬರದೇ ಇದ್ದರೆ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X