ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದಲಾಗುತ್ತಿರುವ ಯುವ ಜನಾಂಗ ; ಬಂಗಾರದೊಡವೆ ಯಾಕೆ?

By Staff
|
Google Oneindia Kannada News

ಕಾಲ ಹೇಗೆ ಬದಲಾಗಿದೆ ನೋಡಿ.
ಎತ್ತ ನೋಡಿದರೂ ನಿರಾಭರಣ ಸುಂದರಿಯರು. ಆಭರಣ ಧರಿಸಿದ್ದರೂ ಹೂವಿನಷ್ಟು ಹಗುರಾದ ರಿಂಗು... ಒಂಟಿ ಪದಕ. ಕಿವಿ ಭಾರ ಮಾಡುವ ಜುಮುಕಿ, ಮುಗುಳು, ಕತ್ತು ಆಯಾಸ ಮಾಡುವ ಅವಲಕ್ಕಿ ಸರ, ಕಾಸಿನ ಸರ... ಊಹ್ಞೂ.. ಇವ್ಯಾವುದೂ ಇಂದಿನ ಯುವಜನತೆಗೆ ಬೇಕಿಲ್ಲ. ಇದು ಸಿನಿಕತೆಯ ಬಾಯಿ ಮಾತಲ್ಲ ; ಸಮೀಕ್ಷೆಯಾಂದರ ಅಧ್ಯಯನದ ವರದಿ.

ವಿಶ್ವ ಬಂಗಾರ ಸಮಿತಿಯು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತೀಯ ಯುವ ಜನಾಂಗ ಭಾರವಾದ ಒಡವೆಗಳನ್ನು ಧರಿಸಲು ಇಷ್ಟಪಡುವುದಿಲ್ಲವಂತೆ. ಸುಮಾರು ಒಂದರಿಂದ ಐದು ಸಾವಿರ ರೂಪಾಯಿ ಮೌಲ್ಯದ ಪುಟ್ಟ ಪುಟ್ಟ ಆಭರಣಗಳನ್ನೇ ಈಗಿನವರು ಬಯಸುತ್ತಾರೆ. ಸುಮಾರು 140 ಚಿಲ್ಲರೆ ಮಾರಾಟಗಾರರ ಮೂಲಕ ಪುಟ್ಟ ಪುಟ್ಟ ಆಭರಣಗಳನ್ನು ಕೊಳ್ಳಲು ಇಚ್ಚಿಸುವ ಯುವಜನತೆಯತ್ತ ಗಮನ ಹರಿಸುತ್ತಿದ್ದೇವೆ ಎಂದು ವಿಶ್ವ ಬಂಗಾರ ಸಮಿತಿಯ ಭಾರತೀಯ ನಿರ್ದೇಶಕ ಹೀರೂ ಮಿರ್‌ಚಂದಾನಿ ಹೇಳಿದ್ದಾರೆ.

ಜ್ಯೂವೆಲ್ಸ್‌ ಆಫ್‌ ಇಂಡಿಯಾ ಎಂಬ ಐದು ದಿನಗಳ ವಾರ್ಷಿಕೋತ್ಸವ ಪ್ರದರ್ಶನವನ್ನು ಶುಕ್ರವಾರ (ಸೆ.13) ಉದ್ಘಾಟಿಸಿ ಹೀರೂ ಮಾತನಾಡುತ್ತಿದ್ದರು. ಭಾರತೀಯ ಬಂಗಾರ ಮಾರುಕಟ್ಟೆಯು ಸಾಮಾನ್ಯವಾಗಿ ಬೆಲೆಯನ್ನು ಆಧರಿಸಿರುತ್ತದೆ. ಹಳೇ ನಮೂನೆಯ ಆದರೆ ಹಗುರಾದ ಚಿನ್ನವನ್ನು ಭಾರತೀಯರು ಬಯಸುತ್ತಿದ್ದಾರೆ. ಹಳದಿ ಬಣ್ಣದ ಚಿನ್ನ ಈಗ ಮತ್ತೆ ಫ್ಯಾಷನ್‌ ಎನಿಸಿಕೊಂಡಿದೆ ಎಂಬುದು ಅವರ ಅಭಿಪ್ರಾಯ.

ಐದು ದಿನಗಳ ಬಂಗಾರ ಪ್ರದರ್ಶನ ನಡೆಯುತ್ತಿರುವುದು ನಗರದ ಹೃದಯ ಭಾಗದಲ್ಲಿರುವ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ. ಕ್ರೀಡಾಂಗಣದ ತುಂಬ ಬಂಗಾರದ ಬೆಳಕು. ಪ್ರದರ್ಶನದಲ್ಲಿ ವಿವಿಧ ನಮೂನೆಯ ಒಡವೆ ಕಂಡು ಕಣ್ಣರಳಿಸುವ ಹೆಂಗಳೆಯರು, ಜೇಬಿನ ಭಾರವನ್ನು ಗಮನಿಸಿಯೇ ಹೆಜ್ಜೆ ಹಾಕುತ್ತಿರುವ ಗಂಡಸರು ಗಿಜಿಗುಡುತ್ತಿದ್ದಾರೆ.

ದೇಶದ ವಿವಿಧ ಭಾಗದಿಂದ ಬಂದಿರುವ ಸುಮಾರು 70 ಬಂಗಾರದ ಅಂಗಡಿಯ ಒಡೆಯರು ಈ ಪ್ರದರ್ಶನದಲ್ಲಿ ಮಳಿಗೆಗಳನ್ನು ತೆರೆದಿದ್ದಾರೆ ಎಂದು ಪ್ರದರ್ಶನದ ಸಂಘಟಕ ಸಂದೀಪ್‌ ಬೇಕಲ್‌ ಹೇಳುತ್ತಾರೆ.

ಕುಂದಣ, ಜಯಪುರದ ಕುಸುರಿ ಇರುವ ಮೀನಕರಿ, ಕೈಯಲ್ಲೇ ಕೆತ್ತನೆ ಮಾಡಿರುವ ಕೋಲ್ಕತಾ ಚಿನ್ನ ಮತ್ತು ದಕ್ಷಿಣ ಭಾರತದ ಸಾಂಪ್ರದಾಯಿಕ ಚಿತ್ತಾರವಿರುವ ಚಿನ್ನವೂ ಪ್ರದರ್ಶನದಲ್ಲಿ ಕಾಣಸಿಗುತ್ತದೆ. ದೇಶದ ಅತೀ ಪುರಾತನ ಆಭರಣ ಎನಿಸಿದ, ಗಾಜಿನ ಮೇಲೆ ಚಿನ್ನವನ್ನು ಅಚ್ಚು ಹಾಕಿರುವ ಥಿವಾ ಎಂಬ ಮೊಗಲ್‌ ಒಡವೆ ಕಕೂಡ ಪ್ರದರ್ಶನದಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X